ಹೈದರಾಬಾದ್: ಪ್ರವೀಣ್ ರಾವ್ ಸಹೋದರರ ಅಪಹರಣ ಪ್ರಕರಣದಲ್ಲಿ 14 ರಿಮಾಂಡ್ ಕೈದಿಗಳಿಗೆ ಸಿಕಂದರಾಬಾದ್ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದೆ.
ಪ್ರತಿ ಬುಧವಾರ ಬೋಯಿನ್‌ಪಲ್ಲಿ ಪೊಲೀಸ್ ಠಾಣೆಯಲ್ಲಿ ಹಾಜರಾಗಲು ಮತ್ತು ತನಿಖೆಯಲ್ಲಿ ಸಹಕರಿಸುವಂತೆ ಆರೋಪಿಗಳಿಗೆ ನ್ಯಾಯಾಲಯವು ಆದೇಶಿಸಿದೆ.
ಈ ಪ್ರಕರಣದ ಪ್ರಮುಖ ಆರೋಪಿ ಎಪಿ ಮಾಜಿ ಸಚಿವೆ ಭೂಮಾ ಅಖಿಲಪ್ರಿಯಾಗೆ ಸಿಕಂದರಾಬಾದ್ ನ್ಯಾಯಾಲಯ ಈಗಾಗಲೇ ಜಾಮೀನು ನೀಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈವರೆಗೆ 21 ಜನರನ್ನು ಬಂಧಿಸಿದ್ದಾರೆ.
ಅಖಿಲಪ್ರಿಯಾ ಸೇರಿದಂತೆ ಹದಿನೈದು ಮಂದಿಗೆ ನ್ಯಾಯಾಲಯ ಜಾಮೀನು ನೀಡಿದ್ದು, ಇತರ ಆರು ಮಂದಿಯನ್ನು ಚಂಚಲ್‌ಗೂಡ ಜೈಲಿನಲ್ಲಿ ಬಂಧಿಸಲಾಗಿದೆ. ಅಖಿಲಪ್ರಿಯಾ ಅವರ ಪತಿ ಭಾರ್ಗವ್ ರಾಮ್, ಅವರ ಸಹೋದರ ವಿಕ್ಯಾತ್ ರೆಡ್ಡಿ ಮತ್ತು ಗುಂಟೂರು ಶ್ರೀನು ಇನ್ನೂ ಪರಾರಿಯಾಗಿದ್ದಾರೆ.
ಪರಾರಿಯಾಗಿರುವ ಆರೋಪಿಗಳಿಗೆ ಪೊಲೀಸರು ಶೋಧ ಕಾರ್ಯ ನಡೆಸುತ್ತಲೇ ಇದ್ದಾರೆ. ಆದ್ರೆ ನಿರೀಕ್ಷಿತ ಜಾಮೀನು ಕೋರಿ ಭಾರ್ಗವ್ ರಾಮ್ ಮತ್ತು ವಿಕಿಯಾತ್ ರೆಡ್ಡಿ ಸಲ್ಲಿಸಿದ್ದ ಅರ್ಜಿಯನ್ನು ಸಿಕಂದರಾಬಾದ್ ಹೈಕೋರ್ಟ್ ತಿರಸ್ಕರಿಸಿದೆ.