ETV Bharat / bharat

ಹನಿಟ್ರ್ಯಾಪ್‌ ಕೇಸ್​: ಇಬ್ಬರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಡಿಆರ್‌ಡಿಒ ನಿರ್ದೇಶಕ ಪ್ರದೀಪ್ ಕುರುಲ್ಕರ್ - ಪಾಕಿಸ್ತಾನದ ಮಹಿಳಾ ಏಜೆಂಟ್

ಹನಿಟ್ರ್ಯಾಪ್‌ ಬಲೆಗೆ ಬಿದ್ದು ಪಾಕಿಸ್ತಾನಕ್ಕೆ ಗೌಪ್ಯ ಮಾಹಿತಿ ರವಾನೆ ಮಾಡಿದ ಗಂಭೀರ ಆರೋಪ ಎದುರಿಸುತ್ತಿರುವ ಡಿಆರ್‌ಡಿಒ ನಿರ್ದೇಶಕ ಪ್ರದೀಪ್ ಕುರುಲ್ಕರ್ ಕ್ಯಾಂಪಸ್‌ನಲ್ಲಿ ಕಾಮಗಾರಿಗಳ ಗುತ್ತಿಗೆ ನೀಡುವುದಾಗಿ ಇಬ್ಬರ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಕೂಡ ಎಸಗಿದ್ದಾರೆ ಎಂದು ಚಾರ್ಜ್​ ಶೀಟ್​ನಲ್ಲಿ ಎಟಿಎಸ್ ತಿಳಿಸಿದೆ.

Pradeep Kurulkar sexually abused two women over contract award in DRDO: ATS chargesheet
ಹನಿಟ್ರ್ಯಾಪ್‌ ಕೇಸ್​: ಇಬ್ಬರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಡಿಆರ್‌ಡಿಒ ನಿರ್ದೇಶಕ ಪ್ರದೀಪ್ ಕುರುಲ್ಕರ್
author img

By

Published : Jul 11, 2023, 4:38 PM IST

ಪುಣೆ (ಮಹಾರಾಷ್ಟ್ರ): ಪಾಕಿಸ್ತಾನದೊಂದಿಗೆ ಗೌಪ್ಯ ಮಾಹಿತಿ ಹಂಚಿಕೊಂಡ ಆರೋಪ ಹೊತ್ತಿರುವ ಪುಣೆಯಲ್ಲಿರುವ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ)ಯ ನಿರ್ದೇಶಕ ಪ್ರದೀಪ್ ಕುರುಲ್ಕರ್ ಬಗ್ಗೆ ಮತ್ತೊಂದು ಹೊಸ ಸಂಗತಿ ಬಹಿರಂಗವಾಗಿದೆ. ಇಬ್ಬರು ಮಹಿಳೆಯರ ಮೇಲೆ ಪ್ರದೀಪ್ ಕುರುಲ್ಕರ್​ ಲೈಂಗಿಕ ದೌರ್ಜನ್ಯ ಎಸಗಿರುವುದು ಬಯಲಾಗಿದೆ.

ಇದನ್ನೂ ಓದಿ: ಪಾಕಿಸ್ತಾನಿ ಗೂಢಚಾರರೊಂದಿಗೆ ಸಂಪರ್ಕ: ರಾ ಅಧಿಕಾರಿಗಳಿಂದ ಡಿಆರ್‌ಡಿಒ ನಿರ್ದೇಶಕ ಪ್ರದೀಪ್ ಕುರುಲ್ಕರ್ ತನಿಖೆ

ಹನಿಟ್ರ್ಯಾಪ್‌ ಬಲೆಗೆ ಬಿದ್ದು ಪಾಕಿಸ್ತಾನಕ್ಕೆ ಗೌಪ್ಯ ಮಾಹಿತಿ ರವಾನೆ ಮಾಡಿದ ಗಂಭೀರ ಆರೋಪವನ್ನು ಡಿಆರ್‌ಡಿಒ ನಿರ್ದೇಶಕ ಪ್ರದೀಪ್ ಕುರುಲ್ಕರ್ ಎದುರಿಸುತ್ತಿದ್ದಾರೆ. ಈ ಸಂಬಂಧ ಕಳೆದ ಮೇ 3ರಂದು ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದ ಸುದೀರ್ಘವಾದ 1,837 ಪುಟಗಳ ಚಾರ್ಜ್​ಶೀಟ್​ ಅನ್ನು ಜೂನ್​ 30ರಂದು ವಿಶೇಷ ನ್ಯಾಯಾಲಯಕ್ಕೆ ಪೊಲೀಸರು ಸಲ್ಲಿಸಿದ್ದಾರೆ. ಇದೇ ಚಾರ್ಜ್​ಶೀಟ್​ನಲ್ಲಿ ಇಬ್ಬರು ಮಹಿಳೆಯರಿಗೆ ಪ್ರದೀಪ್ ಕುರುಲ್ಕರ್ ಲೈಂಗಿಕ ಕಿರುಕುಳ ನೀಡಿರುವುದನ್ನು ಉಲ್ಲೇಖಿಸಲಾಗಿದೆ.

ಪ್ರದೀಪ್ ಕುರುಲ್ಕರ್ ಪಾಕಿಸ್ತಾನದೊಂದಿಗೆ ಗೌಪ್ಯ ಮಾಹಿತಿ ಹಂಚಿಕೊಂಡಿರುವುದು ಬೆಳಕಿಗೆ ಬಂದ ನಂತರ ಎಟಿಎಸ್ ತನಿಖೆ ಆರಂಭಿಸಿದೆ. ಇದೇ ತನಿಖೆ ವೇಳೆ ಮುಂಬೈನ ಡಿಆರ್‌ಡಿಒ ಅತಿಥಿ ಗೃಹದಲ್ಲಿ ಆರು ಮಂದಿ ಮಹಿಳೆಯರನ್ನು ಭೇಟಿಯಾಗಿರುವುದು ಸಿಸಿಟಿವಿ ಕ್ಯಾಮರಾದ ಮೂಲಕ ತನಿಖಾಧಿಕಾರಿಗಳು ಪತ್ತೆ ಹೆಚ್ಚಿದ್ದರು. ಬಳಿಕ ಈ ಮಹಿಳೆಯರ ಬಗ್ಗೆಯೂ ತನಿಖೆ ಆರಂಭಿಸಿದ್ದರು. ಇದರಲ್ಲಿ ಡಿಆರ್‌ಡಿಒ ಕ್ಯಾಂಪಸ್‌ನಲ್ಲಿ ವಿವಿಧ ಕಾಮಗಾರಿಗಳ ಗುತ್ತಿಗೆ ನೀಡುವುದಾಗಿ ಪ್ರದೀಪ್ ಕುರುಲ್ಕರ್ ಇಬ್ಬರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಈ ಮಾಹಿತಿಯನ್ನು ನ್ಯಾಯಾಲಯಕ್ಕೆ ಎಟಿಎಸ್ ಸಲ್ಲಿಸಿರುವ ಚಾರ್ಜ್​ ಶೀಟ್​ನಲ್ಲಿ ನೀಡಲಾಗಿದೆ.

ಇದನ್ನೂ ಓದಿ: ಹನಿಟ್ರ್ಯಾಪ್​ ಬಲೆಗೆ ಬಿದ್ದು ಪಾಕ್​ಗೆ ಮಾಹಿತಿ ಸೋರಿಕೆ ಶಂಕೆ : ಡಿಆರ್​ಡಿಒ ನಿರ್ದೇಶಕನ ಬಂಧಿಸಿದ ಎಟಿಎಸ್​

ಪಾಕ್​ ಮಹಿಳಾ ಏಜೆಂಟ್ ನಂಟು: ಭಾರತದ ಕ್ಷಿಪಣಿ ಕಾರ್ಯಾಚರಣೆಯ ಮಾಹಿತಿಯನ್ನು ಪಾಕಿಸ್ತಾನಕ್ಕೆ ಪ್ರದೀಪ್ ಕುರುಲ್ಕರ್ ಹಂಚಿಕೊಂಡು ಆರೋಪ ಇದೆ. ಪಾಕಿಸ್ತಾನದ ಮಹಿಳಾ ಏಜೆಂಟ್ ಜಾರಾ ದಾಸ್ ಗುಪ್ತಾ ಎಂಬುವವರ ಜೊತೆಗೆ ನಂಟು ಬೆಳೆದು, ಈ ಮಾಹಿತಿಯನ್ನು ರವಾನಿಸಿದ್ದಾರೆ ಎಂದು ಚಾರ್ಜ್​ ಶೀಟ್​ನಲ್ಲಿ ಎಟಿಎಸ್ ತಿಳಿಸಿದೆ.

ಬ್ರಹ್ಮೋಸ್ ಕ್ಷಿಪಣಿ, ಅಗ್ನಿ-6 ಕ್ಷಿಪಣಿ, ಆಕಾಶ್ ಕ್ಷಿಪಣಿ, ಅಸ್ತ್ರ ಕ್ಷಿಪಣಿ, ಡ್ರೋನ್ ಯೋಜನೆ, ರುಸ್ತಮ್ ಯೋಜನೆ, ಕ್ವಾಪ್ಟರ್, ಭಾರತೀಯ ನಿಕುಂಜ್ ಪರಾಶರ್, ಯುಸಿಎವಿ, ಡಿಆರ್​ಡಿಒ ಡ್ಯೂಟಿ ಚಾರ್ಟ್, ಕ್ಷಿಪಣಿ ಉಡಾವಣೆ, ಉಲ್ಕೆ ಕ್ಷಿಪಣಿ, ಎಂಬಿಡಿಎ ಹಾಗೂ ರಾಫೆಲ್ ಇತ್ಯಾದಿಗಳ ಕುರಿತು ಜಾರಾ ದಾಸ್ ಗುಪ್ತಾಗೆ ವಿವರವನ್ನು ನೀಡಿದ್ದಾರೆ. 2022ರ ಜೂನ್​ನಿಂದ ಡಿಸೆಂಬರ್​ವರೆಗೂ ಪಾಕಿಸ್ತಾನದ ಮಹಿಳಾ ಏಜೆಂಟ್ ಜೊತೆ ಪ್ರದೀಪ್ ಕುರುಲ್ಕರ್ ಸಂಪರ್ಕದಲ್ಲಿದ್ದರು ಎಂದು ಚಾರ್ಜ್​ ಶೀಟ್​ನಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ: ಹನಿಟ್ರ್ಯಾಪ್‌ ಬಲೆಗೆ ಬಿದ್ದು ಪಾಕ್​ಗೆ ಗೌಪ್ಯ ಮಾಹಿತಿ ಹಂಚಿಕೆ ಆರೋಪ: ವಿಜ್ಞಾನಿ ಕುರುಲ್ಕರ್ ಬಗ್ಗೆ ಹೊಸ ಮಾಹಿತಿ ಬಹಿರಂಗ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.