ETV Bharat / bharat

ಹೊಂಡ, ಗುಂಡಿಗಳ ರಸ್ತೆಯಲ್ಲಿ ಹಿಂಸಾತ್ಮಕ ಸಂಚಾರ: ಮಹಿಳೆಗೆ ಹಠಾತ್​ ಹೆರಿಗೆ ನೋವು, ರಸ್ತೆಯಲ್ಲೇ ಮಗುವಿಗೆ ಜನ್ಮ

author img

By

Published : Mar 4, 2023, 9:30 PM IST

ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯಲ್ಲಿ ಗುಂಡಿಗಳಿಂದ ಕೂಡಿದ ರಸ್ತೆಯಿಂದ ಮಹಿಳೆಯೊಬ್ಬರು ಹಠಾತ್​ ಆಗಿ ಹೆರಿಗೆ ನೋವು ಕಾಣಿಸಿಕೊಂಡು ರಸ್ತೆ ಬದಿಯಲ್ಲೇ ಮಗುವಿಗೆ ಜನ್ಮ ನೀಡಿದ್ದಾರೆ.

pothole-ridden-roads-force-woman-to-give-birth-at-roadside-in-Kolhapur-maharashtra
ಮಹಿಳೆಗೆ ಹಠಾತ್​ ಹೆರಿಗೆ ನೋವು, ರಸ್ತೆಯಲ್ಲೇ ಮಗುವಿಗೆ ಜನ್ಮ

ಕೊಲ್ಹಾಪುರ (ಮಹಾರಾಷ್ಟ್ರ): ಹದಗೆಟ್ಟ ರಸ್ತೆಯಲ್ಲಿ ಹೋದರೆ ಪ್ರಸವ ವೇದನೆ ಉಂಟಾಗುತ್ತದೆ ಎಂದು ಕೆಲ ಜನರು ಆಗಾಗ್ಗೆ ಸಾಮಾನ್ಯವಾಗಿ ಮಾತನಾಡವುದನ್ನು ಕೇಳಿಯೇ ಇರುತ್ತೇವೆ. ಆದರೆ, ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯಲ್ಲಿ ಅಕ್ಷರಶಃ ಇಂತಹ ಘಟನೆಯೊಂದು ಬೆಳಕಿಗೆ ಬಂದಿದೆ. ಹೊಂಡ - ಗುಂಡಿಗಳಿಂದ ಕೂಡಿದ ರಸ್ತೆಯಿಂದ ಗರ್ಭಿಣಿಯೊಬ್ಬರು ಆಸ್ಪತ್ರೆಗೆ ತಲುಪಲು ಸಾಧ್ಯವಾಗದೇ, ಮಾರ್ಗ ಮಧ್ಯದಲ್ಲೇ ಆ ಮಹಿಳೆಗೆ ಹೆರಿಗೆ ಆಗಿದೆ.

ಇಲ್ಲಿನ ಭೂದರ್‌ಗಢ ತಾಲೂಕಿನ ತಿರವಾಡ ಬಳಿ ಶುಕ್ರವಾರ ಸಂಜೆ ಘಟನೆ ನಡೆದಿದೆ. ಗುಂಡಿಗಳಿಂದಲೇ ತುಂಬಿದ್ದ ರಸ್ತೆಯಿಂದ ಹಠಾತ್​ ಆಗಿ ಹೆರಿಗೆ ನೋವು ಕಾಣಿಸಿಕೊಂಡಿದ್ದು, ರಸ್ತೆ ಪಕ್ಕದಲ್ಲೇ ಮಗುವಿಗೆ ಜನ್ಮ ನೀಡಿದ್ದಾರೆ. ಒರಟಾದ ಸಸ್ಯದ ನಾರಿನಿಂದ ಹೊಕ್ಕುಳ ಬಳ್ಳಿ ಕತ್ತರಿಸಲಾಗಿದೆ. ಅದೃಷ್ಟವಶಾತ್​ ತಾಯಿ ಮತ್ತು ಮಗು ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದ್ಯ ಮುರಗುಡ ಗ್ರಾಮಾಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹಿಂಸಾತ್ಮಕ ಸಂಚಾರ: ಮಧ್ಯಪ್ರದೇಶ ಮೂಲದ ಕಿರಣ್ ಕೇಶು ಪಾಲ್ವಿ ಎಂಬ ಗರ್ಭಿಣಿ ಹಾಗೂ ಇತರ 32 ಜನರು ಟ್ರ್ಯಾಕ್ಟರ್‌ನಲ್ಲಿ ತಿರವಾಡಕ್ಕೆ ತೆರಳುತ್ತಿದ್ದರು. ಆದರೆ, ಈ ರಸ್ತೆ ತಗ್ಗು ಗುಂಡಿಗಳಿಂದ ಕೂಡಗಿತ್ತು. ಟ್ರ್ಯಾಕ್ಟರ್ ಚಲಿಸುವ ಸಾಧ್ಯವಾಗದೇ​ ಹಿಂಸಾತ್ಮಕವಾಗಿ ಜರ್ಕಿಂಗ್ ಆಗಿದೆ. ಪರಿಣಾಮ ಗರ್ಭಿಣಿ ಪಾಲ್ವಿಗೆ ತೀವ್ರ ತೊಂದರೆ ಉಂಟಾಗಿದೆ. ಇದೇ ವೇಳೆ, ಚಕ್ರವೊಂದು ದೊಡ್ಡ ಹೊಂಡಕ್ಕೆ ಬಿದ್ದಿದ್ದರಿಂದ ಇಡೀ ಟ್ರ್ಯಾಕ್ಟರ್‌ ಏಕಾಏಕಿ ಪುಟಿದು ಬಿದ್ದಿದೆ. ಆಗ ಮತ್ತಷ್ಟು ನೋವು ಹೆಚ್ಚಾಗಿ ಆಕೆ ಕಣ್ಣೀರು ಹಾಕಲು ಆರಂಭಿಸಿದ್ದಾರೆ.

ಇದನ್ನೂ ಓದಿ: ಹದಗೆಟ್ಟ ರಸ್ತೆಯ ಗುಂಡಿಯಲ್ಲಿ ಸಿಲುಕಿದ ಆ್ಯಂಬುಲೆನ್ಸ್​: ಮಾರ್ಗಮಧ್ಯೆಯೇ ಮಗುವಿಗೆ ಜನ್ಮ ನೀಡಿದ ಮಹಿಳೆ

ಟ್ರ್ಯಾಕ್ಟರ್‌ ದೊಡ್ಡ ಗುಂಡಿ ಬಿದ್ದ ನಂತರ ಪಾಲ್ವಿಗೆ ನೋವು ಹೆಚ್ಚಾಯಿತು. ಅಲ್ಲದೇ, ಆಕೆಯ ಕಣ್ಣುಗಳು ಮಸುಕಾಗ ತೊಡಗಿದವು. ಇದರಿಂದ ಪಾಲ್ವಿ ಜೀವಕ್ಕೆ ಅಪಾಯವಾಗುತ್ತಿದೆ ಎಂದು ಅರಿತ ಟ್ರ್ಯಾಕ್ಟರ್ ಮಾಲೀಕರು, 108 ಆ್ಯಂಬುಲೆನ್ಸ್​ಗೆ ಕರೆ ಮಾಡಿದ್ದಾರೆ. ಆದರೆ, ರಸ್ತೆ ಹದಗೆಟ್ಟಿದ್ದರಿಂದ ಆ್ಯಂಬುಲೆನ್ಸ್ ಬರುವುದು ಕೂಡ ತಡವಾಗಿದೆ. ಹೀಗಾಗಿ ರಸ್ತೆ ಬದಿಯಲ್ಲೇ ಹೆರಿಗೆ ಮಾಡಿಸುವುದು ಬಿಟ್ಟು ಬೇರೆ ದಾರಿ ಇಲ್ಲದಂತಾಯಿತು ಎಂದು ಪಾಲ್ವಿ ಜೊತೆಗಿದ್ದ ಮಹಿಳೆಯೊಬ್ಬರು ಮಾಹಿತಿ ನೀಡಿದ್ದಾರೆ.

ಮತ್ತೊಂದೆಡೆ, ರಸ್ತೆ ಮಧ್ಯದಲ್ಲಿ ಮಹಿಳೆಗೆ ಹೆರಿಗೆ ಆಗಿರುವ ವಿಷಯ ಹೋಗೋ ಸ್ಥಳೀಯ ಆಶಾ ಕಾರ್ಯಕರ್ತೆಯರಿಗೆ ಗೊತ್ತಾಗಿದೆ. ಅಂತೆಯೇ, ಡಾ.ರೂಪಾಲಿ ಲೋಕ್ರೆ ನೇತೃತ್ವದ ವೈದ್ಯಕೀಯ ತಂಡದೊಂದಿಗೆ ಆಶಾ ಕಾರ್ಯಕರ್ತೆಯರು ಸ್ಥಳಕ್ಕೆ ಧಾವಿಸಿದ್ದಾರೆ. ನಂತರ ಮುರಗುಡ ಗ್ರಾಮಾಂತರ ಆಸ್ಪತ್ರೆಗೆ ತಾಯಿ ಹಾಗೂ ಮಗುವನ್ನು ಕರೆದೊಯ್ದಿದ್ದಾರೆ. ಸದ್ಯ ಪಾಲ್ವಿ ಮತ್ತು ಆಕೆಯ ಮಗು ಅಪಾಯದಿಂದ ಪಾರಾಗಿದ್ದಾರೆ. ಆಸ್ಪತ್ರೆಯಲ್ಲೇ ಇಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆಸ್ಪತ್ರೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇನ್ನು, ಕೆಲವು ತಿಂಗಳ ಹಿಂದೆ ಕೊಲ್ಹಾಪುರ ಮಹಾನಗರ ಪಾಲಿಕೆಯ ಇಂಜಿನಿಯರ್ ಒಬ್ಬರು ತಾಯಿ ಗುಂಡಿಗೆ ಬಿದ್ದು ಸಾವನ್ನಪ್ಪಿದ್ದ ಘಟನೆ ನಡೆದಿತ್ತು

ಇದನ್ನೂ ಓದಿ: ಹದಗೆಟ್ಟ ರಸ್ತೆ: ಇಲ್ಲಿ ಸಂಚರಿಸಿದರೆ ಜನರಿಗೆ ಪ್ರಸವವೇದನೆ.. ಉಡುಪಿಯಲ್ಲಿ ಅಣುಕು ಪ್ರದರ್ಶನದೊಂದಿಗೆ ಪ್ರತಿಭಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.