ನವದೆಹಲಿ : ನೀಟ್ ಪರೀಕ್ಷೆ ಮುಂದೂಡಿಕೆ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದ ಬೆನ್ನಲ್ಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪರೀಕ್ಷೆ ಮುಂದೂಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, "ವಿದ್ಯಾರ್ಥಿಗಳ ಸಂಕಷ್ಟದಲ್ಲಿ ಭಾರತ ಸರ್ಕಾರ ಕುರುಡಾಗಿದೆ. ನೀಟ್ ಪರೀಕ್ಷೆಯನ್ನು ಮುಂದೂಡಿ. ವಿದ್ಯಾರ್ಥಿಗಳಿಗೆ ನ್ಯಾಯಯುತ ಅವಕಾಶ ಸಿಗಲಿ" ಎಂದು ಹೇಳಿದ್ದಾರೆ.
-
GOI is blind to students’ distress.
— Rahul Gandhi (@RahulGandhi) September 7, 2021 " class="align-text-top noRightClick twitterSection" data="
Postpone #NEET exam. Let them have a fair chance.
">GOI is blind to students’ distress.
— Rahul Gandhi (@RahulGandhi) September 7, 2021
Postpone #NEET exam. Let them have a fair chance.GOI is blind to students’ distress.
— Rahul Gandhi (@RahulGandhi) September 7, 2021
Postpone #NEET exam. Let them have a fair chance.
ಸೆಪ್ಟೆಂಬರ್ 12ಕ್ಕೆ ನೀಟ್ ಪರೀಕ್ಷೆ ನಿಗದಿಯಾಗಿದೆ. ಕನ್ನಡ ಸೇರಿದಂತೆ 13 ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ಆದರೆ, ನೀಟ್ ಪರೀಕ್ಷೆ ದಿನದ ಆಸುಪಾಸಿನಲ್ಲೇ ಸಿಬಿಎಸ್ಇ, ಕರ್ನಾಟಕದ ಕಾಮೆಡ್ಕೆ (CoMEDK Exam), ಒಡಿಶಾದಲ್ಲಿ ಜೆಇಇ ಹಾಗೂ ಮಧ್ಯಪ್ರದೇಶದ 12ನೇ ತರಗತಿ ಪರೀಕ್ಷೆಗಳಿವೆ.
ಅಷ್ಟೇ ಅಲ್ಲ, ಕೆಲ ರಾಜ್ಯಗಳಲ್ಲಿ ಪ್ರವಾಹ ಪರಿಸ್ಥಿತಿಯಿಂದ ಕೆಲ ವಿದ್ಯಾರ್ಥಿಗಳಿಗೆ ಹೆಸರು ನೋಂದಾಯಿಸಿಕೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ, ಪರೀಕ್ಷೆ ಮುಂದೂಡುವಂತೆ ಕೋರಿ ಅನೇಕ ವಿದ್ಯಾರ್ಥಿಗಳು ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ: NEET 2021: ಕನ್ನಡ ಸೇರಿದಂತೆ 13 ಪ್ರಾದೇಶಿಕ ಭಾಷೆಗಳಲ್ಲಿ ನೀಟ್ ಪರೀಕ್ಷೆ
ನಿನ್ನೆ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ, ಯಾವುದೇ ಕಾರಣಕ್ಕೂ ನೀಟ್ ಪರೀಕ್ಷೆ ಮುಂದೂಡಲು ಸಾಧ್ಯವಿಲ್ಲ ಎಂದು ಹೇಳಿ ಅರ್ಜಿಯನ್ನು ತಿರಸ್ಕರಿಸಿತ್ತು. ಆದರೆ, ಈ ಬಗ್ಗೆ ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರದ ಬಳಿ ಮನವಿ ಸಲ್ಲಿಸಬಹುದು ಎಂದು ತಿಳಿಸಿತ್ತು.