ETV Bharat / bharat

ರೈಲ್ವೆ ನಿಲ್ದಾಣದ ಜಾಹೀರಾತು ಪರದೆ ಮೇಲೆ ಪೋರ್ನ್ ವಿಡಿಯೋ ಪ್ರಸಾರ! - Patna Railway Station

ರೈಲ್ವೆ ನಿಲ್ದಾಣದ ಜಾಹೀರಾತು ಸ್ಕ್ರೀನ್​ ಮೇಲೆ ಪೋರ್ನ್ ವಿಡಿಯೋ ಪ್ಲೇ ಆಗಿದ್ದು, ತಕ್ಷಣವೇ ಪರದೆಯನ್ನು ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಸ್ಥಗಿತಗೊಳಿಸಿದೆ.

Patna Railway Station
ಪಾಟ್ನಾ ರೈಲ್ವೆ ನಿಲ್ದಾಣ
author img

By

Published : Mar 20, 2023, 12:21 PM IST

ಪಾಟ್ನಾ (ಬಿಹಾರ) : ರೈಲ್ವೆ ನಿಲ್ದಾಣವೊಂದರ ಜಾಹೀರಾತು ಸ್ಕ್ರೀನ್​ ಮೇಲೆ ಪೋರ್ನ್(ಅಶ್ಲೀಲ) ವಿಡಿಯೋ ಪ್ರಸಾರವಾದ ಘಟನೆ ಭಾನುವಾರ ನಡೆದಿದೆ. ಹೌದು, ಬಿಹಾರದ ರಾಜಧಾನಿ ಪಾಟ್ನಾ ರೈಲ್ವೆ ಜಂಕ್ಷನ್‌ನಲ್ಲಿರುವ ಜಾಹೀರಾತು ಸ್ಕ್ರೀನ್​ ಮೇಲೆ ವಿಡಿಯೋ ಪ್ರಸಾರವಾಗಿತ್ತು. ಸೈಬರ್ ಅಪರಾಧಿಗಳು ಹ್ಯಾಕ್ ಮಾಡಿ, ಜಾಹೀರಾತಿನ ಪರದೆಯ ಮೇಲೆ ವಿಡಿಯೋ ಪ್ಲೇ ಮಾಡಿದ್ದಾರೆ. ಇದರಿಂದ ನಿಲ್ದಾಣದಲ್ಲಿದ್ದ ರೈಲ್ವೆ ಅಧಿಕಾರಿಗಳು ಹಾಗೂ ಪ್ರಯಾಣಿಕರು ತೀವ್ರ ಮುಜುಗರಕ್ಕೆ ಒಳಗಾಗಿದ್ದರು ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಭಾನುವಾರ ರಾತ್ರಿ 9.30ರ ಸುಮಾರಿಗೆ ಜಾಹೀರಾತು ಫಲಕದ ಪರದೆ ಮೇಲೆ ಇದ್ದಕ್ಕಿದ್ದಂತೆ ಅಶ್ಲೀಲ ವಿಡಿಯೊ ಪ್ಲೇ ಆಗಿದೆ. ಅಸಭ್ಯ ವಿಡಿಯೋ ದಾರಿಹೋಕರನ್ನು ವಿಚಲಿತರನ್ನಾಗಿಸಿತ್ತು. ಜೊತೆಗೆ ಇಡೀ ಪಾಟ್ನಾ ಜಂಕ್ಷನ್ ಕೆಲಹೊತ್ತು ಅಲ್ಲೋಲ ಕಲ್ಲೋಲವಾದಂತೆ ಭಾಸವಾಗಿತ್ತು. ಪ್ರಯಾಣಿಕರು ವಿಶೇಷವಾಗಿ ತಮ್ಮ ಕುಟುಂಬದೊಂದಿಗೆ ಪ್ರಯಾಣಿಸುವ ವೇಳೆ, ಮುಖ್ಯ ರಸ್ತೆಗೆ ಎದುರಾಗಿರುವ ಈ ಬೋರ್ಡ್‌ನ ಡಿಸ್ಪ್ಲೇ ಪರದೆಯಿಂದ ಮುಖ ತಿರುಗಿಸಿಕೊಂಡು ಹೋಗುತ್ತಿದುದು ಕಂಡುಬಂತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಜುಗರದ ಸನ್ನಿವೇಶ: ರಾತ್ರಿ 9.30ರ ನಂತರ ನಗ್ನ ವಿಡಿಯೋ ಪ್ರಸಾರವಾಗುತ್ತಿದ್ದರಿಂದ ಇಲ್ಲಿ ನೆರೆದಿದ್ದವರು ಮುಜುಗರ ಎದುರಿಸಬೇಕಾಯಿತು ಎಂದು ನಿಲ್ದಾಣದಲ್ಲಿದ್ದ ಜನರು ಹೇಳಿದ್ದಾರೆ. ಘಟನೆಯ ಬಗ್ಗೆ ನಿಲ್ದಾಣದ ಆಡಳಿತ ಮಂಡಳಿಗೆ ತಿಳಿದ ತಕ್ಷಣವೇ ಡಿಸ್ಪ್ಲೇ ಪರದೆಯನ್ನು ಆಫ್ ಮಾಡಲಾಯಿತು ಎಂದು ಅಧಿಕಾರಿಯೊಬ್ಬರು ಹೇಳಿದರು. ಈ ಕುರಿತು ಪಾಟ್ನಾ ರೈಲ್ವೆ ಜಂಕ್ಷನ್‌ನಲ್ಲಿರುವ ಆರ್‌ಪಿಎಫ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಡಿಸ್ಪ್ಲೇ ಸ್ಕ್ರೀನ್‌ನಲ್ಲಿ ಅಶ್ಲೀಲ ವಿಡಿಯೋ ಪ್ಲೇ ಆಗುತ್ತಿರುವ ಬಗ್ಗೆ ಆರ್‌ಪಿಎಫ್‌ಗೆ ತಿಳಿದ ಕೂಡಲೇ ಪರದೆಯನ್ನು ಆಫ್ ಮಾಡಲಾಗಿದೆ. ರೈಲ್ವೆ ಇಲಾಖೆಯ ನಿರ್ಲಕ್ಷ್ಯವೂ ಇದಕ್ಕೆ ಕಾರಣ ಎಂದು ಪ್ರಯಾಣಿಕರು ಹಾಗೂ ಸ್ಥಳೀಯರು ದೂರಿದ್ದಾರೆ.

ಸೀತಾಮರ್ಹಿ ಜಿಲ್ಲೆ ನಡೆದಿತ್ತು ಆಘಾತಕಾರಿ ಘಟನೆ: ಬಿಹಾರದಲ್ಲಿ ಆಘಾತಕಾರಿ ಘಟನೆಯೊಂದು ಫೆ.23ರಂದು ನಡೆದಿತ್ತು. ನಾಲ್ಕು ವರ್ಷದ ಬಾಲಕಿ ಮೇಲೆ 12 ವರ್ಷದ ಬಾಲಕನೊಬ್ಬ ಅತ್ಯಾಚಾರ ಎಸಗಿದ್ದ. ಅಶ್ಲೀಲ ವಿಡಿಯೋಗಳನ್ನು ನೋಡಿ ಆರೋಪಿ ಬಾಲಕ ಪ್ರಚೋದನೆಗೊಂಡಿದ್ದ ಎಂದು ಪೊಲೀಸರು ತಿಳಿಸಿದ್ದರು. ಇಲ್ಲಿನ ನಾನ್ಪುರ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಸಂತ್ರಸ್ತೆ ಇತ್ತೀಚೆಗೆ ತನ್ನ ಅಜ್ಜಿಯ ಮನೆಗೆ ಹೋಗಿದ್ದಳು. ಈ ವೇಳೆ, ಹೊರಗೆ ಆಟವಾಡುತ್ತಿದ್ದಾಗ 6ನೇ ತರಗತಿ ಓದುತ್ತಿದ್ದ 12 ವರ್ಷದ ಬಾಲಕ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಇದರಿಂದ ರಕ್ತಸ್ರಾವವಾಗಿ ಮನೆಗೆ ಬಂದ ಬಾಲಕಿ ಕುಟುಂಬಸ್ಥರಿಗೆ ತನ್ನ ನೋವು ಹೇಳಿಕೊಂಡಾಗ ಕೃತ್ಯ ಬೆಳಕಿಗೆ ಬಂದಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದರು.

ಇದನ್ನೂ ಓದಿ: ಒಂದೇ ಕುಟುಂಬದ ನಾಲ್ವರ ಶವ ಪತ್ತೆ: ಶಿಕ್ಷಕರ ನೇಮಕಾತಿ ಹಗರಣ ಕಾರಣ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.