ETV Bharat / bharat

ಟೈಪ್-1 ಮಧುಮೇಹ ಹೊಂದಿರುವ ಮಕ್ಕಳಿಗೆ ಕೊರೊನಾ ತಗುಲಿದ್ರೆ ಏನಾಗುತ್ತೆ.. ಅಧ್ಯಯನ ಹೀಗೆ ಹೇಳುತ್ತೆ..

ಜನರು ತಮ್ಮ ಮಧುಮೇಹ ನಿರ್ವಹಿಸಲು ಸಹಾಯ ಮಾಡುವ ಮುಖ್ಯ ಪರೀಕ್ಷೆ ಇದು. ಹೆಚ್ಚಿನ ಎ1ಸಿ ಮಟ್ಟವು ಮಧುಮೇಹ ಸಮಸ್ಯೆಗಳಿಗೆ ಸಂಬಂಧಿಸಿದೆ. ಮಧುಮೇಹ ಹೊಂದಿರುವ ಹೆಚ್ಚಿನ ಜನರ ಎ1ಸಿ ಮಟ್ಟವು ಶೇ.7 ಅಥವಾ ಅದಕ್ಕಿಂತ ಕಡಿಮೆ ಇರಬೇಕು..

ಟೈಪ್ -1 ಮಧುಮೇಹ
ಟೈಪ್ -1 ಮಧುಮೇಹ
author img

By

Published : Mar 22, 2021, 8:17 PM IST

ಟೈಪ್-1 ಮಧುಮೇಹ ಹೊಂದಿರುವ ಮಕ್ಕಳನ್ನು ಈ ಕಾಯಿಲೆ ಇಲ್ಲದ ಮಕ್ಕಳಿಗೆ ಹೋಲಿಕೆ ಮಾಡಿ ನೋಡಿದಾಗ, ಕಾಯಿಲೆ ಇರುವ ಮಕ್ಕಳು ಕೋವಿಡ್-19 ಸಂಬಂಧಿತ ತೊಂದರೆ ಮತ್ತು ಸಾವಿಗೆ 10 ಪಟ್ಟು ಸನಿಹದಲ್ಲಿರುತ್ತಾರೆ ಎಂದು ಭಾರತೀಯ ಮೂಲದ ಸಂಶೋಧಕರು ಹೇಳುತ್ತಾರೆ.

ENDO 2021ರಲ್ಲಿ ವಾಸ್ತವಿಕವಾಗಿ ಪ್ರಸ್ತುತಪಡಿಸಲಾದ ಅಧ್ಯಯನದ ಪ್ರಕಾರ, ಹಿಮೋಗ್ಲೋಬಿನ್- ಎ1ಸಿ - ಮಕ್ಕಳಲ್ಲಿ ಶೇ.9ಕ್ಕಿಂತ ಹೆಚ್ಚಿದ್ದರೆ ಅವರಲ್ಲಿ ಕೋವಿಡ್-19 ಸಂಬಂಧಿತ ತೊಂದರೆಗಳು ಹೆಚ್ಚಿರುತ್ತವೆ. ಅದೇ ಎ1ಸಿ ಮಟ್ಟವು ಮಧುಮೇಹ ಇಲ್ಲದ ಮಕ್ಕಳಲ್ಲಿ ಶೇ.7ಕ್ಕಿಂತ ಕಡಿಮೆ ಇದ್ದು, ಅವರಲ್ಲಿ ಕೋವಿಡ್​ ರೋಗದಿಂದ ಉಂಟಾಗುವ ತೊಂದರೆ ಮತ್ತು ಸಾವು ಕಡಿಮೆ ಇರುತ್ತದೆ.

"ಸಾಂಕ್ರಾಮಿಕ ರೋಗದ ಸಮಯದಲ್ಲಿ ಮಕ್ಕಳ ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಡುವುದು ಎಂದಿಗಿಂತಲೂ ಮುಖ್ಯವಾಗಿದೆ ಎಂದು ಈ ಅಧ್ಯಯನವು ತೋರಿಸುತ್ತದೆ" ಎಂದು ಯುಎಸ್​ನ ಅರ್ಕಾನ್ಸಾಸ್ ವಿಶ್ವವಿದ್ಯಾಲಯದ ಪ್ರಮುಖ ಲೇಖಕ ಮನೀಶ್ ರೈಸಿಂಗಾನಿ ಹೇಳಿದ್ದಾರೆ.

"ಈ ಸಂಶೋಧನೆ ಟೈಪ್-1 ಮಧುಮೇಹ ಹೊಂದಿರುವ ಮಕ್ಕಳಿಗೆ ಸಹಾಯ ಮಾಡುತ್ತದೆ ಮತ್ತು ಅವರ ಕುಟುಂಬಗಳು ಈ ಸಾಂಕ್ರಾಮಿಕ ಸಮಯದಲ್ಲಿ ಶಾಲೆಗೆ ಖುದ್ದಾಗಿ ಹಾಜರಾಗುವುದು ಹಾಗೂ ಇತರ ವೈಯಕ್ತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಸುರಕ್ಷತೆಯ ಬಗ್ಗೆ ಉತ್ತಮ ಆಯ್ಕೆಗಳನ್ನು ಮಾಡಲು ಸಹಾಯ ಮಾಡುತ್ತದೆ" ಎಂದು ರೈಸಿಂಗಾನಿ ಹೇಳುತ್ತಾರೆ.

ಅಧ್ಯಯನಕ್ಕಾಗಿ ಸಂಶೋಧಕರು ಟೈಪ್ -1 ಡಯಾಬಿಟಿಸ್ ಮತ್ತು ಕೋವಿಡ್ -19 ಹೊಂದಿರುವ ಸುಮಾರು 2,000 ಮಕ್ಕಳ ಡೇಟಾ ಪರಿಶೀಲಿಸಿದ್ದಾರೆ. ಜೊತೆಗೆ ಟೈಪ್-1 ಮಧುಮೇಹ ಹೊಂದಿರದ ಕೋವಿಡ್ -19 ಹೊಂದಿರುವ 300,000ಕ್ಕೂ ಹೆಚ್ಚು ಮಕ್ಕಳ ಡೇಟಾ ಪರಿಶೀಲಿಸಿದ್ದಾರೆ.

ಮಧುಮೇಹ ಹೊಂದಿರುವ ಮಕ್ಕಳಲ್ಲಿ ಹಿಮೋಗ್ಲೋಬಿನ್ ಎ1ಸಿ ಮಟ್ಟವನ್ನು ಅಧ್ಯಯನವು ವಿಶ್ಲೇಷಿಸಿದೆ. ಎ1ಸಿ ಅನ್ನೋದು ಸರಳ ರಕ್ತ ಪರೀಕ್ಷೆಯಾಗಿದೆ. ಇದು ಕಳೆದ ಮೂರು ತಿಂಗಳುಗಳಲ್ಲಿ ವ್ಯಕ್ತಿಯ ಸರಾಸರಿ ರಕ್ತದಲ್ಲಿನ ಸಕ್ಕರೆ ಮಟ್ಟ ಅಳೆಯುತ್ತದೆ.

ಜನರು ತಮ್ಮ ಮಧುಮೇಹ ನಿರ್ವಹಿಸಲು ಸಹಾಯ ಮಾಡುವ ಮುಖ್ಯ ಪರೀಕ್ಷೆ ಇದು. ಹೆಚ್ಚಿನ ಎ1ಸಿ ಮಟ್ಟವು ಮಧುಮೇಹ ಸಮಸ್ಯೆಗಳಿಗೆ ಸಂಬಂಧಿಸಿದೆ. ಮಧುಮೇಹ ಹೊಂದಿರುವ ಹೆಚ್ಚಿನ ಜನರ ಎ1ಸಿ ಮಟ್ಟವು ಶೇ.7 ಅಥವಾ ಅದಕ್ಕಿಂತ ಕಡಿಮೆ ಇರಬೇಕು.

ಟೈಪ್-1 ಡಯಾಬಿಟಿಸ್ ಇರುವ ಮಕ್ಕಳು ಕೋವಿಡ್ -19ನಿಂದ ಸಾಯುವ ಸಾಧ್ಯತೆ ಹೆಚ್ಚಿರುತ್ತದೆ. ಅವರಿಗೆ ಉಸಿರಾಡಲು, ನ್ಯುಮೋನಿಯಾವನ್ನು ಅಭಿವೃದ್ಧಿಪಡಿಸಲು ಅಥವಾ ಸೆಪ್ಟಿಕ್ ಆಗುವುದನ್ನು ತಡೆಯಲು ಎಂಡೋಟ್ರಾಶಿಯಲ್ ಟ್ಯೂಬ್ ಅಗತ್ಯವಿರುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.