ನವದೆಹಲಿ: ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ಕೋವಿಡ್ ರಾಮಬಾಣ ಕೋವಿಶೀಲ್ಡ್ ಲಸಿಕೆ ಅಭಿವೃದ್ಧಿಗೊಂಡಿದ್ದು, ಈಗಾಗಲೇ ಎಲ್ಲ ರಾಜ್ಯಗಳಿಗೂ ಇದು ರವಾನೆಯಾಗಿದೆ.
ಕೋವಿಶೀಲ್ಡ್ ಲಸಿಕೆ ರವಾನೆಯಾಗುವುದಕ್ಕೂ ಮುಂಚಿತವಾಗಿ ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಅದಾರ್ ಪೂನಾವಾಲಾ ಭಾವನಾತ್ಮಕ ಟ್ವೀಟ್ ಶೇರ್ ಮಾಡಿದ್ದಾರೆ. ಲಸಿಕೆ ಅಭಿವೃದ್ಧಿಪಡಿಸುವಲ್ಲಿ ಪ್ರಯತ್ನಿಸಿರುವ ಪ್ರತಿ ಸಿಬ್ಬಂದಿಯ ಫೋಟೋ ಒಂದೇ ಗ್ರೂಪ್ನಲ್ಲಿದ್ದು, ಮತ್ತೊಂದು ಛಾಯಾಚಿತ್ರದಲ್ಲಿ ಅದಾರ್ ಪೂನಾವಾಲಾ ಟ್ರಕ್ನಲ್ಲಿ ಕುಳಿತುಕೊಂಡಿದ್ದಾರೆ. ಅದರಲ್ಲಿ ಕೋವಿಶೀಲ್ಡ್ ಲಸಿಕೆ ಸಾಗಣೆಯ ಪೆಟ್ಟಿಗೆಗಳಿವೆ.
ಸೆರಂ ಇನ್ಸ್ಟಿಟ್ಯೂಟ್ನ ತಂಡಕ್ಕೆ ಇದೊಂದು ಭಾವನಾತ್ಮಕ ಸಮಯವಾಗಿದ್ದು, ಕಂಪನಿಯಿಂದ ಮೊದಲ ಹಂತದ ಲಸಿಕೆ ಭಾರತದ ವಿವಿಧ ನಗರಗಳಿಗೆ ರವಾನೆಯಾಗಿದೆ ಎಂದು ಬರೆದುಕೊಂಡಿದ್ದಾರೆ.
-
An emotional moment for the team at @SerumInstIndia as the first shipments of #Covishield finally leave for multiple locations across India. pic.twitter.com/AmrZLesmj5
— Adar Poonawalla (@adarpoonawalla) January 12, 2021 " class="align-text-top noRightClick twitterSection" data="
">An emotional moment for the team at @SerumInstIndia as the first shipments of #Covishield finally leave for multiple locations across India. pic.twitter.com/AmrZLesmj5
— Adar Poonawalla (@adarpoonawalla) January 12, 2021An emotional moment for the team at @SerumInstIndia as the first shipments of #Covishield finally leave for multiple locations across India. pic.twitter.com/AmrZLesmj5
— Adar Poonawalla (@adarpoonawalla) January 12, 2021
ಕೋವಿಶೀಲ್ಡ್ ಲಸಿಕೆ ಈಗಾಗಲೇ ದೆಹಲಿ, ಚೆನ್ನೈ, ಬೆಂಗಳೂರು, ಲಕ್ನೋ, ಕೋಲ್ಕತ್ತಾ, ಗುವಾಹಟಿ ಹಾಗೂ ಪಾಟ್ನಾ ಸೇರಿದಂತೆ ಪ್ರಮುಖ ನಗರಗಳಿಗೆ ರವಾನೆಯಾಗಿವೆ. ಏಪ್ರಿಲ್ 2021ರೊಳಗೆ ಕೇಂದ್ರ ಸರ್ಕಾರ ಸೆರಂನಿಂದ 5.60 ಕೋಟಿ ಡೋಸ್ ಖರೀದಿ ಮಾಡಲು ನಿರ್ಧರಿಸಿದ್ದು, ಇದರ ಬೆಲೆ ಪ್ರತಿ ಡೋಸ್ಗೆ 200 ರೂ. ಆಗಿದೆ.