ಒಡಿಶಾ: ಇಲ್ಲಿನ ಪರದೀಪ್ ಬಂದರು ಪ್ರದೇಶದಲ್ಲಿ ಕಳ್ಳತನ ಆರೋಪದಡಿ ವ್ಯಕ್ತಿಯೊಬ್ಬನ ಕುತ್ತಿಗೆಗೆ ಚಪ್ಪಲಿ ಹಾರ ಹಾಕಿದ್ದಲ್ಲದೇ ಟ್ರಕ್ಗೆ ಕಟ್ಟಿಹಾಕಿ ಹಿಂಸಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಟ್ರಕ್ ಚಾಲಕ ಮತ್ತು ಸಹಾಯಕನನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪರದೀಪ್ ಠಾಣೆಯ ಪೊಲೀಸರು ತಿಳಿಸಿದ್ದಾರೆ.
3-4 ದಿನಗಳ ಹಿಂದೆ ಈ ಘಟನೆ ನಡೆದಿದೆ. ಕೇಂದ್ರಪಾರ ಜಿಲ್ಲೆಯ ಮಾರ್ಷಘೈ ಪ್ರದೇಶದ ಈ ಯುವಕ, ತಮ್ಮ ಮೊಬೈಲ್ ಕದ್ದಿದ್ದಾನೆ ಎಂದು ಆರೋಪಿಸಿ ಟ್ರಕ್ ಚಾಲಕ ಮತ್ತು ಆತನ ಸಹಾಯಕರು ಯುವಕನನ್ನು ಕಟ್ಟಿಹಾಕಿ ಈ ರೀತಿ ಹಿಂಸಿಸಿದ್ದಾರೆ ಎಂಬ ಮಾಹಿತಿ ಇದೆ.
-
Odisha | Police lodged case against truck driver & helper in connection with viral video of a man who was tied to a truck with garland of slippers around his neck in Paradeep port area for alleged theft.Accused driver, his helper to be produced before court today: Paradeep Police pic.twitter.com/doy1jzLcEF
— ANI (@ANI) May 26, 2022 " class="align-text-top noRightClick twitterSection" data="
">Odisha | Police lodged case against truck driver & helper in connection with viral video of a man who was tied to a truck with garland of slippers around his neck in Paradeep port area for alleged theft.Accused driver, his helper to be produced before court today: Paradeep Police pic.twitter.com/doy1jzLcEF
— ANI (@ANI) May 26, 2022Odisha | Police lodged case against truck driver & helper in connection with viral video of a man who was tied to a truck with garland of slippers around his neck in Paradeep port area for alleged theft.Accused driver, his helper to be produced before court today: Paradeep Police pic.twitter.com/doy1jzLcEF
— ANI (@ANI) May 26, 2022
ಯುವಕ ವಾಹನದಿಂದ ಮೊಬೈಲ್ ಕದ್ದು ಪರಾರಿಯಾಗಲು ಪ್ರಯತ್ನಿಸುತ್ತಿದ್ದಾಗ ಟ್ರಕ್ ಚಾಲಕ ಮತ್ತು ಅವನ ಸಹಾಯಕರು ಹಿಂಬಾಲಿಸಿ ಹಿಡಿದಿದ್ದಾರೆ. ಬಳಿಕ ಶಿಕ್ಷೆಯ ರೂಪದಲ್ಲಿ ಕೊರಳಿಗೆ ಚಪ್ಪಲಿ ಹಾರ ಹಾಕಿದ್ದಲ್ಲದೇ ಲಾರಿಯ ಇಂಜಿನ್ ಮುಂದೆ ಕಟ್ಟಿ ಹಾಕಿ 15-20 ನಿಮಿಷಗಳ ಕಾಲ ವಾಹನ ಚಲಾಯಿಸಿದ್ದಾರೆ. ಅದರ ವಿಡಿಯೋ ಸಹ ಅವರೇ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಎಂದು ಜಗತ್‌ಸಿಂಗ್‌ಪುರ ಎಸ್‌ಪಿ ಅಖಿಲೇಶ್ವರ್ ಸಿಂಗ್ ಮಾಹಿತಿ ನೀಡಿದರು.
ಸಂತ್ರಸ್ತ ಯುವಕ ದೂರು ದಾಖಲಿಸಿಲ್ಲ. ನಂತರ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ. ಒಡಿಶಾ ಮಾನವ ಹಕ್ಕುಗಳ ಆಯೋಗ ಪೊಲೀಸರಿಂದ ಪ್ರಕರಣದ ವರದಿ ಕೇಳಿದೆ.