ETV Bharat / bharat

ಕಬಡ್ಡಿ.. ಕಬಡ್ಡಿ.. ಅಂತಾ ಎದುರಾಳಿ ಅಖಾಡಕ್ಕೆ ನುಗ್ಗಿದ ಎಸ್​ಐ ಜೀವಂತವಾಗಿ ವಾಪಾಸ್​ ಬರಲೇ ಇಲ್ಲ! - ತಿರುಪತಿ ಅಪರಾಧ ಸುದ್ದಿ

ಕಬಡ್ಡಿ.. ಕಬಡ್ಡಿ.. ಅಂತಾ ಎದುರಾಳಿ ತಂಡದ ರಂಗ ಪ್ರವೇಶ ಮಾಡಿದ್ದ ಎಸ್​ಐವೊಬ್ಬರು ಅಖಾಡದಲ್ಲಿ ಪ್ರಾಣಬಿಟ್ಟ ಘಟನೆ ಆಂಧ್ರಪ್ರದೇಶದ ತಿರುಪತಿಯಲ್ಲಿ ನಡೆದಿದೆ..

inspector died while playing Kabaddi, inspector died while playing Kabaddi in Andhra Pradesh,  inspector died while playing Kabaddi, Andhra Pradesh news, Tirupati crime news, SI Died in Andhra Pradesh, ತೆಲಂಗಾಣದಲ್ಲಿ ಕಬ್ಬಡಿ ಆಡುತ್ತಲೇ ಪ್ರಾಣಬಿಟ್ಟ ಇನ್ಸ್​ಪೆಕ್ಟರ್​, ಆಂಧ್ರಪ್ರದೇಶ ಸುದ್ದಿ, ತಿರುಪತಿ ಅಪರಾದ ಸುದ್ದಿ, ತಿರುಪತಿ ಅಪರಾಧ ಸುದ್ದಿ, ತಿರುಪತಿಯಲ್ಲಿ ಎಸ್​ಐ ಸಾವು
ಕಬಡ್ಡಿ.. ಕಬಡ್ಡಿ..
author img

By

Published : Apr 15, 2022, 10:17 AM IST

Updated : Apr 15, 2022, 12:53 PM IST

ತಿರುಪತಿ: ಕಬಡ್ಡಿ ಆಟ ನಡೆಯುತ್ತಿದ್ದ ವೇಳೆ ಎಸ್​ಐವೊಬ್ಬರು ಎದುರಾಳಿ ತಂಡದ ಕಣಕ್ಕೆ ನುಗ್ಗಿದ್ದಾರೆ. ವಾಪಾಸ್​ ತಮ್ಮ ಕಣಕ್ಕೆ ಬರುತ್ತಿದ್ದ ವೇಳೆ ಎಸ್​ಐಗೆ ಹೃದಯಾಘಾತ ಸಂಭವಿಸಿ ಸಾವನ್ನಪ್ಪಿದ್ದಾರೆ. ಈ ಘಟನೆ ಮಲ್ಲಂಗುಂಟ ಗ್ರಾಮದಲ್ಲಿ ನಡೆದಿದೆ.

ಓದಿ: ಕಬಡ್ಡಿ ಕ್ರೀಡಾಕೂಟ : ಕೋರ್ಟಿಗಿಳಿದು ತೊಡೆ ತಟ್ಟಿದ ಶಾಸಕ ಪುಟ್ಟರಾಜು

ಅಂಬೇಡ್ಕರ್​ ಜಯಂತಿಯಂದು ಗ್ರಾಮದಲ್ಲಿ ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗಿತ್ತು. ಈ ವೇಳೆ ಪಡಮರ ಪೊಲೀಸ್ ಠಾಣೆಯ ಎಂ. ಸುಬ್ರಹ್ಮಣ್ಯಂ (57) ಪಂದ್ಯಾವಳಿಯಲ್ಲಿ ಭಾಗಿಯಾಗಿದ್ದಾರೆ. ಕಬಡ್ಡಿ ಪಂದ್ಯ ನಡೆಯುತ್ತಿದ್ದ ವೇಳೆ ಎದುರಾಳಿ ಅಖಾಡಕ್ಕೆ ತೆರಳಿದ್ದಾರೆ. ಈ ವೇಳೆ ಅಖಾಡದಿಂದ ಹೊರ ಬರುತ್ತಿದ್ದಂತೆ ಅವರಿಗೆ ಎದೆ ನೋವು ಕಾಣಿಸಿಕೊಂಡು ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ.

ಓದಿ: ಟೂರ್ನಿಯ ವೇಳೆ ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರನಿಗೆ ಗುಂಡಿಟ್ಟು ಹತ್ಯೆ

ಇನ್ಸ್​ಪೆಕ್ಟರ್​ರನ್ನು ನೆರೆದಿದ್ದ ಜನರು ಮತ್ತು ಆಟಗಾರರು ಕೂಡಲೇ ಆಸ್ಪತ್ರೆಗೆ ಕೊಂಡೊಯ್ದರು. ಆದ್ರೆ, ಇನ್ಸ್​ಪೆಕ್ಟರ್ರ​ನ್ನು ಪರಿಶೀಲಿಸಿದ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. 1984ರಲ್ಲಿ ಪೊಲೀಸ್​ ವೃತ್ತಿ ಜೀವನ ಆರಂಭಿಸಿದರು. ಇವರಿಗೆ 2019ರಲ್ಲಿ ಎಸ್​ಐ ಆಗಿ ಬಡ್ತಿ ಸಿಕ್ಕಿತ್ತು. ಸುಬ್ರಹ್ಮಣ್ಯಂ ಹೆಂಡ್ತಿ ಮತ್ತು ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.

Last Updated : Apr 15, 2022, 12:53 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.