ETV Bharat / bharat

ಆಂಧ್ರ ಸಿಎಂ ಸಹೋದರಿಯ ಕಾರನ್ನು ಟೋಯಿಂಗ್​ ಮಾಡಿದ ತೆಲಂಗಾಣ ಪೊಲೀಸ್

ಮುಖ್ಯಮಂತ್ರಿ ಕೆ ಚಂದ್ರಶೇಖರ್ ನೇತೃತ್ವದ ತೆಲಂಗಾಣ ಸರ್ಕಾರದ ವಿರುದ್ಧ ವೈಎಸ್​ಆರ್​ಟಿಸಿ ಕಾರ್ಯಕರ್ತರ ಪ್ರತಿಭಟನೆ ತೀವ್ರಗೊಂಡಿದ್ದು, ಇಂದು ಗಂಭೀರ ಸ್ವರೂಪ ಪಡೆಯಿತು.

author img

By

Published : Nov 29, 2022, 2:26 PM IST

Police drags away the car of YSRTP Chief Sharmila Reddy

ಹೈದರಾಬಾದ್: ತೆಲಂಗಾಣ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಸಹೋದರಿ, ವೈಎಸ್​ಆರ್​ಟಿಸಿ ಅಧ್ಯಕ್ಷೆ ವೈಎಸ್ ಶರ್ಮಿಳಾ ರೆಡ್ಡಿ ಕುಳಿತಿದ್ದ ಕಾರನ್ನೇ ಕ್ರೇನ್ ಸಹಾಯದಿಂದ ಎಳೆದುಕೊಂಡು ಹೋದ ಘಟನೆ ಇಂದು ನಡೆಯಿತು.

ವೈಎಸ್ ಶರ್ಮಿಳಾ ಅವರು ತೆಲಂಗಾಣದ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಪ್ರತಿಭಟನಾ ಸ್ಥಳಕ್ಕೆ ಬಂದ ಪೊಲೀಸರು ಅವರಿದ್ದ ಕಾರನ್ನೇ ಎಳೆದುಕೊಂಡು ಹೋಗಿದ್ದಾರೆ. ಪೊಲೀಸರು ಅವರ ಕಾರನ್ನು ಎಳೆದುಕೊಂಡು (ಟೋಯಿಂಗ್​) ಹೋಗುತ್ತಿದ್ದರೂ ಕೆಳಗಿಳಿಯದೇ ಅದರಲ್ಲೇ ಕುಳಿತಿದ್ದರು.

  • #WATCH | Hyderabad: Police drags away the car of YSRTP Chief Sharmila Reddy with the help of a crane, even as she sits inside it for protesting against the Telangana CM KCR pic.twitter.com/cXnK44N2Xd

    — ANI (@ANI) November 29, 2022 " class="align-text-top noRightClick twitterSection" data=" ">

ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಆಡಳಿತದ ವಿರುದ್ಧ ಶರ್ಮಿಳಾ ಅವರು ಪಾದಯಾತ್ರೆ ನಡೆಸುತ್ತಿದ್ದಾರೆ. ಭಾನುವಾರ ಟಿಆರ್‌ಎಸ್ ಪಕ್ಷದ ನಾಯಕ ಸುದರ್ಶನ್ ರೆಡ್ಡಿ ವಿರುದ್ಧ ತೀವ್ರವಾಗಿ ಟೀಕಿಸಿದ್ದರು. ಇದನ್ನು ಖಂಡಿಸಿ ಟಿಆರ್‌ಎಸ್ ಪಕ್ಷದ ಕಾರ್ಯಕರ್ತರು ಅವರ ವಾಹನದ ಮೇಲೆ ದಾಳಿ ಮಾಡಿ ಬೆಂಕಿ ಹಚ್ಚಿದ್ದರು. ಇದರಿಂದ ವೈಎಸ್ ಶರ್ಮಿಳಾ ಬೆಂಬಲಿಗರು ಮತ್ತು ಟಿಆರ್​ಎಸ್​ ಕಾರ್ಯಕರ್ತರ ನಡುವೆ ಮಾತಿಗೆ ಮಾತು ಬೆಳೆದು ಘರ್ಷಣೆ ಉಂಟಾಗಿತ್ತು.

ಇದನ್ನೂ ಓದಿ: ಕೇರಳ ಮೂಲದ ಯುವತಿ ಮೇಲೆ ಬೆಂಗಳೂರಲ್ಲಿ ಗ್ಯಾಂಗ್ ರೇಪ್: ಕೃತ್ಯಕ್ಕೆ ಆರೋಪಿಗಳ ಗೆಳತಿಯಿಂದಲೂ ಸಾಥ್​ ​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.