ಆಂಧ್ರಪ್ರದೇಶ : ಸಂಗಾರೆಡ್ಡಿ ಜಿಲ್ಲೆಯ ಪೊಲೀಸರು ಕಾರು ಚಾಲಕನೋರ್ವನ ಮೇಲೆ ರಸ್ತೆ ಮಧ್ಯೆಯೇ ಹಲ್ಲೆ ಮಾಡಿದ್ದು, ವಿಡಿಯೋ ವೈರಲ್ ಆಗಿದೆ. ಸದಾಶಿವಪೇಟೆ ಮಂಡಲದಲ್ಲಿ ವಾಹನ ತಪಾಸಣೆ ಸಂದರ್ಭ ಪೊಲೀಸರು ನಿರ್ದಾಕ್ಷಿಣ್ಯವಾಗಿ ಚಾಲಕನ ಜೊತೆ ವರ್ತಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ವಾಹನ ತಪಾಸಣೆ ನಡೆಸುತ್ತಿರುವಾಗ ಪೊಲೀಸರು ಚಾಲಕ ವಾಜಿದ್ ಎಂಬುವರ ವಾಹನವನ್ನು ತಡೆದು ನಿಲ್ಲಿಸಿದ್ದಾರೆ. ಈ ವೇಳೆ ಗೊಂದಲಕ್ಕೊಳಗಾದ ಚಾಲಕನ ಮೇಲೆ ಪೊಲೀಸರು ಹಲ್ಲೆ ಮಾಡಿದ್ದಾರೆ ಎಂದು ಸಹ ಚಾಲಕ ತಿಳಿಸಿದ್ದಾನೆ.
ಈ ಸಂಬಂಧ ಡಿಎಸ್ಪಿ ಬಾಲಾಜಿ ಅವರು ಪ್ರತಿಕ್ರಿಯೆ ನೀಡಿದ್ದು, ವಾಹನವನ್ನು ಕಾನ್‌ಸ್ಟೇಬಲ್‌ಗೆ ಆತ ಗುದ್ದಿದ್ದ. ಸ್ಥಳೀಯರು ಆತನನ್ನು ತರಾಟೆಗೆ ತೆಗೆದುಕೊಂಡರು. ಆ ವೇಳೆ ಚಾಲಕ ಮತ್ತು ಕಾನ್‌ಸ್ಟೇಬಲ್ ನಡುವೆ ಸಣ್ಣ ಘರ್ಷಣೆ ಉಂಟಾಗಿದೆ ಎಂದು ಮಾಹಿತಿ ನೀಡಿದ್ದಾರೆ.