ETV Bharat / bharat

ಮಕ್ಕಳ ಕಲಿಕೆಯ ಅಗತ್ಯತೆ ಪೂರೈಸಲು NIPUN​ ಭಾರತ್​ ಬದ್ಧ: ಕೇಂದ್ರ ಸಚಿವ ಪೋಖ್ರಿಯಾಲ್ - ರಾಷ್ಟ್ರೀಯ ಶಿಕ್ಷಣ ನೀತಿ 2020

3 ರಿಂದ 9 ವರ್ಷದ ಮಕ್ಕಳ ಪ್ರಾಥಮಿಕ ಕಲಿಕೆಗೆ ಬೇಕಾದ ಅಗತ್ಯತೆಗಳನ್ನು ಒದಗಿಸುವ ಸಲುವಾಗಿ ಕೇಂದ್ರ ಸರ್ಕಾರ ನಿಪುನ್ ಭಾರತ್ ಯೋಜನೆಯನ್ನು ಜಾರಿಗೆ ತಂದಿದೆ.

ರಮೇಶ್ ಪೋಖ್ರಿಯಾಲ್, ಕೇಂದ್ರ ಶಿಕ್ಷಣ ಸಚಿವ
ರಮೇಶ್ ಪೋಖ್ರಿಯಾಲ್, ಕೇಂದ್ರ ಶಿಕ್ಷಣ ಸಚಿವ
author img

By

Published : Jul 6, 2021, 9:47 AM IST

ನವದೆಹಲಿ: ದೇಶದ ಪ್ರತಿಯೊಂದು ಮಗುವಿಗೆ ಶಿಕ್ಷಣ ಸಿಗುವುದನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರವು ಪ್ರಾವೀಣ್ಯತೆಗಾಗಿ ರಾಷ್ಟ್ರೀಯ ಉಪಕ್ರಮವನ್ನು (ನಿಪುನ್​​ ಭಾರತ್) ಪ್ರಾರಂಭಿಸಿದೆ. ಕೇಂದ್ರೀಯ ಪ್ರಾಯೋಜಿತ ‘ಸಮಗ್ರ ಶಿಕ್ಷಾ’ ಯೋಜನೆ ಆಶ್ರಯದಲ್ಲಿ ಪ್ರಾರಂಭಿಸಲಾಗಿರುವ ಈ ಮಿಷನ್, ಶಿಕ್ಷಣ, ಶಿಕ್ಷಕರ ಸಾಮರ್ಥ್ಯ ವೃದ್ಧಿ, ಶಿಕ್ಷಕ ಸಂಪನ್ಮೂಲಗಳ ಅಭಿವೃದ್ಧಿ ಮತ್ತು ಕಲಿಕಾ ಸಾಮಗ್ರಿಗಳಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳಲು ಹೆಚ್ಚಿನ ಒತ್ತು ನೀಡುತ್ತದೆ.

ಈ ಯೋಜನೆ ಕುರಿತು ಮಾತನಾಡಿರುವ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್, ‘ನಿಪುನ್​​ ಭಾರತ್’​​ 3 ರಿಂದ 9 ವರ್ಷದ ಮಕ್ಕಳ ಕಲಿಕೆಗೆ ಬೇಕಾದ ಅಗತ್ಯತೆಗಳನ್ನು ಪೂರೈಸುವ ಗುರಿ ಹೊಂದಿದೆ. ಭಾಷೆ, ಸಾಕ್ಷರತೆ ಮತ್ತು ಸಂಖ್ಯಾ ಕೌಶಲ್ಯಗಳನ್ನು ಅಭಿವೃದ್ಧಿ ಪಡಿಸಲು ಶಿಕ್ಷಕರು ಪ್ರತಿ ಮಗುವಿನತ್ತ ಗಮನಹರಿಸಬೇಕಿದೆ. ಇದರಿಂದಾಗಿ ಮಕ್ಕಳು ಹೆಚ್ಚಿನ ಕಲಿಕೆಯಲ್ಲಿ ತೊಡಗಲಿದ್ದಾರೆ. ನಿಪುನ್ ಭಾರತ್ ಪ್ರಾಥಮಿಕ ಹಂತದಲ್ಲಿ ಕಲಿಕೆಯ ಅನುಭವವನ್ನು ಸಮಗ್ರ, ಅಂತರ್ಗತ ಮತ್ತು ಆಕರ್ಷಕವಾಗಿ ಮಾಡಲು ಉದ್ದೇಶಿಸಿದೆ ಎಂದಿದ್ದಾರೆ.

ರಮೇಶ್ ಪೋಖ್ರಿಯಾಲ್, ಕೇಂದ್ರ ಶಿಕ್ಷಣ ಸಚಿವ
ರಮೇಶ್ ಪೋಖ್ರಿಯಾಲ್, ಕೇಂದ್ರ ಶಿಕ್ಷಣ ಸಚಿವ

ರಾಷ್ಟ್ರೀಯ ಶಿಕ್ಷಣ ನೀತಿ 2020 ಅನ್ನು ಉಲ್ಲೇಖಿಸಿದ ಸಚಿವರು, ಎಲ್ಲಾ ಮಕ್ಕಳು ಪ್ರಾಥಮಿಕ ಶಿಕ್ಷಣ ಪಡೆಯುವುದು ರಾಷ್ಟ್ರೀಯ ಮಿಷನ್​ನ ಸದುದ್ದೇಶ. ಇದನ್ನು ಗಮನದಲ್ಲಿಟ್ಟುಕೊಂಡೇ ಇಲಾಖೆಯು ನಿಪುನ್​ ಭಾರತ್​​ನ ಸಮಗ್ರ ಮಾರ್ಗಸೂಚಿಯನ್ನು ಅಭಿವೃದ್ಧಿ ಪಡಿಸಿದೆ. ತಜ್ಞರೊಂದಿಗೆ ಸೂಕ್ತ ಸಮಾಲೋಚನೆ ನಡೆಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.

ಈ ಯೋಜನೆಯು ಮೂಲಭೂತ ಸಾಕ್ಷರತೆ, ಸಂಖ್ಯಾಶಾಸ್ತ್ರದ ಪ್ರಮುಖ ತಾಂತ್ರಿಕ ಅಂಶಗಳನ್ನು ಹಾಗೂ ರಾಷ್ಟ್ರೀಯ, ರಾಜ್ಯ, ಜಿಲ್ಲೆ, ಬ್ಲಾಕ್​​, ಶಾಲಾ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲು ಆಡಳಿತಾತ್ಮಕ ಅಂಶಗಳನ್ನೊಳಗೊಂಡಿದೆ ಎಂದು ಸಚಿವರು ಮಾಹಿತಿ ನೀಡಿದರು.

ಪ್ರಸಕ್ತ ಸಾಲಿನಲ್ಲಿ ಸಮಗ್ರ ಶಿಕ್ಷಾ ಯೋಜನೆಯಡಿ ದೇಶದ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ 2688.18 ಕೋಟಿ ರೂಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ವಿವರಿಸಿದರು.

ಇದನ್ನೂ ಓದಿ: ಹುನಗುಂದ ಬಳಿ ಡಿಸಿಎಂ ಲಕ್ಷಣ್​ ಸವದಿ ಪುತ್ರನ ಕಾರು ಡಿಕ್ಕಿ: ಬೈಕ್ ಸವಾರ ಸಾವು

ರಾಜ್ಯ ಶಿಕ್ಷಣ ಸಚಿವ ಸಂಜಯ್ ಧೋತ್ರೆ ಮಾತನಾಡಿ, ಗುಣಮಟ್ಟದ ಶಿಕ್ಷಣವು ಪ್ರಬಲ ರಾಷ್ಟ್ರಗಳ ಅಡಿಪಾಯವಾಗಿದೆ. ಸಾಕ್ಷರತೆ ಮತ್ತು ಸಂಖ್ಯಾ ಕೌಶಲ್ಯಗಳಲ್ಲಿ ಮೂಲಭೂತ ಶಿಕ್ಷಣ ಅದರ ಪ್ರಮುಖ ಅಂಶವಾಗಿದೆ ಎಂದು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.