ETV Bharat / bharat

'ಭಾರತಕ್ಕೆ ಬರಲು ಅವಕಾಶ ನೀಡಿ': PoKಯಲ್ಲಿ ಅತ್ಯಾಚಾರಕ್ಕೊಳಗಾದ ಯುವತಿಯಿಂದ ಮೋದಿಗೆ ಮನವಿ

ಪಾಕ್​​ ಆಕ್ರಮಿತ ಕಾಶ್ಮೀರದಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿರುವ ಮಹಿಳೆಯೋರ್ವಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದು, ಭಾರತಕ್ಕೆ ಬರಲು ಅವಕಾಶ ನೀಡುವಂತೆ ಕೇಳಿಕೊಂಡಿದ್ದಾರೆ.

PoK gang rape survivor seeks PM Modi's help

author img

By

Published : Apr 12, 2022, 10:17 PM IST

Updated : Apr 13, 2022, 1:39 PM IST

ಮುಜಫರಾಬಾದ್​​: ಪಾಕ್​ ಆಕ್ರಮಿತ ಕಾಶ್ಮೀರ(ಪಿಒಕೆ)ದಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ಬದುಕುಳಿದಿರುವ ಯುವತಿಯೋರ್ವಳು ಭಾರತದ ಪ್ರಧಾನಿ ನರೇಂದ್ರ ಮೋದಿ ಬಳಿ ಮನವಿ ಮಾಡಿಕೊಂಡಿದ್ದಾರೆ. 'ನಾನು ಮತ್ತು ನನ್ನ ಮಕ್ಕಳು ಪ್ರತಿ ದಿನ ಜೀವ ಬೆದರಿಕೆ ಎದುರಿಸುತ್ತಿದ್ದು, ಭಾರತಕ್ಕೆ ಬರಲು ಅವಕಾಶ ನೀಡಿ' ಎಂದು ಸಹಾಯ ಕೋರಿದ್ದಾರೆ.

2015ರಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿರುವ ಸಂತ್ರಸ್ತೆ ಮರಿಯಾ ತಾಹಿರ್​​, ತನಗೆ ಮತ್ತು ತನ್ನ ಮಕ್ಕಳಿಗೆ ಆಶ್ರಯ ನೀಡುವಂತೆ ಮೋದಿ ಬಳಿ ಮನವಿ ಮಾಡಿಕೊಂಡಿದ್ದಾರೆ. ಕಳೆದ ಏಳು ವರ್ಷಗಳ ಹಿಂದೆ ನನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದು, ನ್ಯಾಯ ಒದಗಿಸುವಲ್ಲಿ ನ್ಯಾಯಾಲಯ, ಪೊಲೀಸರು ಮತ್ತು ಸರ್ಕಾರ ವಿಫಲವಾಗಿದೆ ಎಂದು ವಿಡಿಯೋ ಸಂದೇಶ ರವಾನೆ ಮಾಡಿದ್ದಾರೆ. ರಾಜಕಾರಣಿ ಚೌಧರಿ ತಾರಿಕ್ ಫಾರೂಕ್​ ಮತ್ತು ಪೊಲೀಸರು ನನ್ನನ್ನು ಕೊಲ್ಲಬಹುದು ಎಂದು ಮಾರಿಯಾ ಹೇಳಿಕೊಂಡಿದ್ದಾರೆ. ಕಳೆದ ಏಳು ವರ್ಷಗಳಿಂದ ನ್ಯಾಯಕ್ಕಾಗಿ ಹೋರಾಡುತ್ತಿದ್ದೇನೆ. ಆದರೆ, ನನಗೆ ನ್ಯಾಯ ಕೊಡಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ ಎಂದಿದ್ದಾರೆ.

ಇದನ್ನೂ ಓದಿ: ಮಧ್ಯಪ್ರದೇಶ ಖಾರ್ಗೋನ್​ ಹಿಂಸಾಚಾರ; ದಿಗ್ವಿಜಯ್ ವಿರುದ್ಧ ಪ್ರಕರಣ ದಾಖಲು

ಸಂತ್ರಸ್ತೆ ವಿಡಿಯೋದಲ್ಲಿ ಹೇಳಿದ್ದೇನು?: 2015ರಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿರುವ ನಾನು ಅಂದಿನಿಂದಲೂ ನ್ಯಾಯಕ್ಕಾಗಿ ಹೋರಾಡುತ್ತಿದ್ದೇನೆ. ಆದರೆ, ನನಗೆ ನ್ಯಾಯ ಸಿಕ್ಕಿಲ್ಲ. ಈ ವಿಡಿಯೋ ಮೂಲಕ ನಾನು ಭಾರತದ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡುತ್ತಿದ್ದು, ಭಾರತಕ್ಕೆ ಬರಲು ಅವಕಾಶ ನೀಡಿ. ನನ್ನ ಮಕ್ಕಳಿಗೆ ಜೀವ ಬೆದರಿಕೆ ಇದೆ. ಸ್ಥಳೀಯ ಪೊಲೀಸರು, ಹಿರಿಯ ರಾಜಕಾರಣಿ ಚೌಧರಿ ತಾರಿಕ್​ ಫಾರೂಕ್​ ಅವರು ನನ್ನನ್ನು ಮತ್ತು ನನ್ನ ಮಕ್ಕಳನ್ನು ಯಾವಾಗ ಬೇಕಾದ್ರೂ ಕೊಲ್ಲಬಹುದು. ನನಗೆ ಆಶ್ರಯ ಮತ್ತು ರಕ್ಷಣೆ ನೀಡಿ, ಎಂದು ವಿನಂತಿ ಮಾಡಿಕೊಂಡಿದ್ದಾರೆ.

Last Updated : Apr 13, 2022, 1:39 PM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.