ETV Bharat / bharat

ಈ ಗ್ರಾಮದ ಮೇಲೆ ಕೆಂಪಿರುವೆ ದಾಳಿ.. ಇದು ಹಾಲಿವುಡ್​ ಸಿನಿಮಾ ಕತೆಯಲ್ಲ! - ಈ ಗ್ರಾಮದ ಮೇಲೆ ಕೆಂಪಿರುವೆ ದಾಳಿ

ಹಾಲಿವುಡ್​ ಸಿನಿಮಾದಲ್ಲಿ ನೀವು ಇರುವೆಗಳ ದಾಳಿಯಂತಹ ದೃಶ್ಯವನ್ನು ನೋಡಿರಬಹುದು. ಒಡಿಶಾದ ಗ್ರಾಮವೊಂದಕ್ಕೆ ಭೇಟಿ ನೀಡಿದರೆ ನಿಮಗೆ ಆ ಅನುಭವ ನಿಜಕ್ಕೂ ಆಗಬಹುದು. ಇಲ್ಲಿನ ಊರೊಂದು ಕೆಂಪು ಇರುವೆಗಳ ಕಾಟಕ್ಕೆ ನಲುಗಿ ಹೋಗಿದೆ. ಅವುಗಳ ಕಡಿತದಿಂದ ಜನರು ಕೈ ಕಾಲುಗಳನ್ನು ಊದಿಸಿಕೊಂಡಿದ್ದಾರೆ.

Poisonous red ants invade Odisha village
ಒಡಿಶಾದ ಗ್ರಾಮದ ಮೇಲೆ ಕೆಂಪಿರುವೆ ದಾಳಿ
author img

By

Published : Sep 5, 2022, 8:23 PM IST

ಪುರಿ(ಒಡಿಶಾ): ಒಡಿಶಾದ ಗ್ರಾಮವೊಂದಕ್ಕೆ ಕೆಂಪು ಇರುವೆಗಳ ಕಾಟ ಜೋರಾಗಿದೆ. ಕಳೆದ ಎರಡು ತಿಂಗಳಿನಿಂದ ಈ ಕೆಂಪಿರುವೆಗಳು ಜನರು, ಪ್ರಾಣಿಗಳ ಮೇಲೆ ದಾಳಿ ಮಾಡಿ ಸಂಕಷ್ಟಕ್ಕೆ ಸಿಲುಕಿಸಿವೆ. ದಾರಿಯಲ್ಲಿ ಎಲ್ಲೇ ನಡೆದಾಡಿದರೂ ಎದುರಾಗುವ ಇರುವೆಗಳು ಕಚ್ಚಿ ಜನರನ್ನು ಹೈರಾಣು ಮಾಡಿವೆ. ಈ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿದ್ದು, ಇದೀಗ ಕೀಟನಾಶಕ ಸಿಂಪಡಣೆಗೆ ಮುಂದಾಗಿದ್ದಾರೆ.

ಒಡಿಶಾದ ಪುರಿ ಜಿಲ್ಲೆಯ ಬ್ರಾಹ್ಮಣಸಾಹಿ ಇರುವೆ ದಾಳಿಗೆ ಒಳಗಾಗಿ ಕಂಗಾಲಾದ ಗ್ರಾಮ. ಇಲ್ಲಿ ಕಳೆದ 3 ತಿಂಗಳಿಂದ ಕೆಂಪು ಇರುವೆಗಳ ದೊಡ್ಡ ಗುಂಪೇ ಇಡೀ ಗ್ರಾಮವನ್ನು ಆವರಿಸಿಕೊಂಡಿದೆ. ಇಷ್ಟು ಸಂಖ್ಯೆಯ ಕೆಂಪು ಇರುವೆಗಳನ್ನು ತಾವು ಹಿಂದೆಂದೂ ಕಂಡಿರಲಿಲ್ಲ. ಇವುಗಳ ದಾಳಿಯಿಂದ ಇನ್ನಿಲ್ಲದ ಸಂಕಷ್ಟಕ್ಕೆ ಸಿಲುಕಿದ್ದೇವೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

ಒಡಿಶಾದ ಗ್ರಾಮದ ಮೇಲೆ ಕೆಂಪಿರುವೆ ದಾಳಿ

ಮಣ್ಣಿನ ಮನೆಗಳಲ್ಲಿ ಇರುವೆಗಳ ವಾಸ: ಜನರನ್ನು ಕಡಿದು ಹಿಂಸೆ ನೀಡುತ್ತಿರುವ ಕೆಂಪು ಇರುವೆಗಳು ಗ್ರಾಮದಲ್ಲಿರುವ ಮಣ್ಣಿನ ಮನೆಗಳನ್ನೇ ವಾಸಸ್ಥಾನವನ್ನಾಗಿ ಮಾಡಿಕೊಂಡಿವೆ. ಈ ಮೊದಲು ಹತ್ತಿರದ ಕಾಲುವೆಯ ಭಾಗದಲ್ಲಿ ಕಾಣಿಸುತ್ತಿದ್ದ ಇವು ಇದೀಗ ಗ್ರಾಮಕ್ಕೆ ಲಗ್ಗೆ ಇಟ್ಟಿವೆ.

ಇರುವೆಗಳ ಕಡಿತ, ನೋವು ವಿಪರೀತ: ಗುಂಪು ಗುಂಪಾಗಿ ಬಂದು ದಾಳಿ ಮಾಡುವ ಈ ಕೆಂಪು ಇರುವೆಗಳ ಕಡಿತದಿಂದ ಇಲ್ಲಿನ ಜನ ರೋಸಿ ಹೋಗಿದ್ದಾರೆ. ಕಾಲು, ಕೈ ದೇಹದ ಯಾವುದೇ ಭಾಗಕ್ಕೂ ಇರುವೆ ಕಡಿದ ಬಳಿಕ ದದ್ದುಗಳು ಉಂಟಾಗಿ ಊದಿಕೊಂಡು ತುರಿಕೆ ಬರುತ್ತದೆ. ವಿಪರೀತ ನೋವು ಕಾಣಿಸಿಕೊಂಡು ಕಡಿತಕ್ಕೊಳಗಾದವರು ಇನ್ನಿಲ್ಲದ ಹಿಂಸೆ ಅನುಭವಿಸುತ್ತಿದ್ದಾರೆ.

ಇರುವೆಗಳಿಂದ ಕಾಪಾಡಲು ಜನರ ಮೊರೆ: ಗ್ರಾಮದ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಕಂಡು ಬರುವ ಈ ಇರುವೆಗಳ ಕಾಟದಿಂದ ರೋಸಿ ಹೋಗಿರುವ ಜನರು ಇವುಗಳ ಕಾಟದಿಂದ ಮುಕ್ತಿ ಮಾಡಲು ಜನರು ಅಧಿಕಾರಿಗಳಿಗೆ ಮೊರೆ ಇಟ್ಟಿದ್ದಾರೆ. ಗ್ರಾಮಕ್ಕೆ ಭೇಟಿ ನೀಡಿರುವ ಅಧಿಕಾರಿಗಳೇ ಇರುವೆಗಳ ದಾಳಿಗೆ ಒಳಗಾಗಿದ್ದಾರೆ.

ಪರಿಸ್ಥಿತಿಯ ಗಂಭೀರತೆ ಅರಿತ ಅಧಿಕಾರಿಗಳು ತಕ್ಷಣವೇ ಕ್ರಮಕ್ಕೆ ಮುಂದಾಗಿ, ಗ್ರಾಮದ ತುಂಬೆಲ್ಲಾ ಕೆಂಪು ಇರುವೆಗಳ ನಾಶಕ್ಕಾಗಿ ದ್ರಾವಣ ಸಿಂಪಡಿಸುತ್ತಿದ್ದಾರೆ. ಅಲ್ಲದೇ, ಮನೆಗಳ ಹಿತ್ತಲಿನಲ್ಲಿ ನೆಲೆಯೂರಿರುವ ಇರುವೆ ಪ್ರದೇಶವನ್ನು ಸ್ವಚ್ಛ ಮಾಡಲು ಜನರಿಗೆ ಸೂಚಿಸಲಾಗಿದೆ.

ವಿಷದಿಂದ ಕೂಡಿದ ಲಾಲಾರಸ: ಈ ಕೆಂಪು ಇರುವೆಗಳು 8 - 9 ತಿಂಗಳ ಹಿಂದೆಯೇ ಕಾಣಿಸಿಕೊಂಡಿದ್ದವು. ಆದರೆ, ಅವುಗಳ ಉಪಟಳ ಈಗಿನಷ್ಟು ಇರಲಿಲ್ಲ. ಕಳೆದ 2-3 ತಿಂಗಳಿಂದ ಕಾಟ ವಿಪರೀತವಾಗಿದೆ. ಅವುಗಳು ಕಚ್ಚಿದ ಬಳಿಕ ಬಿಡುವ ಲಾಲಾರಸದಿಂದ ಅನೇಕ ಗ್ರಾಮಸ್ಥರಲ್ಲಿ ದದ್ದುಗಳು ಮತ್ತು ಕೈಕಾಲುಗಳಲ್ಲಿ ಊತ ಕಂಡು ಬಂದಿದೆ. ಕೆಂಪು ಇರುವೆಗಳು ವಿಷಕಾರಿಯಾಗಿವೆ ಎಂದು ಗ್ರಾಮಸ್ಥರೊಬ್ಬರು ತಿಳಿಸಿದ್ದಾರೆ.

ಈ ವಿಷಕಾರಿ ಇರುವೆಗಳು ಮನುಷ್ಯರು ಮಾತ್ರವಲ್ಲದೇ ಪ್ರಾಣಿಗಳ ಮೇಲೂ ದಾಳಿ ಮಾಡುತ್ತಿವೆ. ಹಲ್ಲಿ, ಕಪ್ಪೆ, ಹಾವು, ಬೆಕ್ಕು, ನಾಯಿ, ದನ ಕರುಗಳ ಮೇಲೂ ದಾಳಿ ಮಾಡುತ್ತಿವೆ. ಇವುಗಳ ಕಡಿತದ ಬಳಿಕ ಉಂಟಾಗುವ ನೋವು ಯಮಯಾತನೆ ಎಂದು ಇನ್ನೊಬ್ಬರು ಹಂಚಿಕೊಂಡಿದ್ದಾರೆ.

ಕೀಟನಾಶಕದಿಂದ ಇರುವೆಗಳ ನಿಯಂತ್ರಣ: ಈ ಗ್ರಾಮ ಅರಣ್ಯ ಪ್ರದೇಶವನ್ನು ಸುತ್ತುವರಿದ ಕಾರಣ ಇರುವೆಗಳ ಕಾಟ ಉಂಟಾಗಿದೆ. ಇವುಗಳನ್ನು ನಿಯಂತ್ರಿಸಲು ಈಗಾಗಲೇ ಕೀಟನಾಶಕ ಸಿಂಪಡಣೆ ಮಾಡಲಾಗಿದೆ. ಪ್ರವಾಹದಿಂದಾಗಿ ಇರುವೆಗಳು ವಲಸೆ ಬಂದು ಗ್ರಾಮದಲ್ಲಿ ಉಳಿದುಕೊಳ್ಳುತ್ತಿವೆ. ಇದರಿಂದ ಜನರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಕೀಟನಾಶಕದಿಂದ ಇವುಗಳನ್ನು ನಿಯಂತ್ರಿಸಬಹುದು ಎಂದು ಗ್ರಾಮಕ್ಕೆ ಭೇಟಿ ನೀಡಿದ ವಿಜ್ಞಾನಿಗಳ ತಂಡ ತಿಳಿಸಿದೆ.

ಓದಿ: ಬೆಂಗಳೂರಲ್ಲಿ ವರುಣನ ಆರ್ಭಟ : 51 ವರ್ಷಗಳಲ್ಲಿ ದಾಖಲೆಯ ಮಳೆ.. ಕಂಪ್ಲೀಟ್ ಸ್ಟೋರಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.