ETV Bharat / bharat

Instant Loans: ತ್ವರಿತ ಸಾಲ ತೆಗೆದುಕೊಳ್ಳಬೇಕೇ? ಈ ವಿಚಾರಗಳ ಬಗ್ಗೆ ಗಮನಹರಿಸಿ.. - ಮೊಬೈಲ್​ನಿಂದ ಸಾಲ ಪಡೆಯಬೇಕಾದಾಗ ಅನುಸರಿಸಬೇಕಾದ ಕ್ರಮಗಳು

ಒಂದು ವೇಳೆ ಸಾಲ ನೀಡುವ ಕಂಪನಿ ಅಧಿಕೃತವಲ್ಲದಿದ್ದರೆ, ಸಾಲ ಪಡೆಯುವ ನಿಮಗೆ ಯಾವುದೇ ರೀತಿಯ ಹಕ್ಕುಗಳು ಇರುವುದಿಲ್ಲ. ಇದು ಕೆಲವೊಮ್ಮೆ ಗಂಭೀರವಾದ ಪರಿಣಾಮಗಳಿಗೆ ಕಾರಣವಾಗಬಹುದು. ಇದರಿಂದ ಅನಧಿಕೃತ ಕಂಪನಿಗಳಿಂದ ಸಾಲ ಪಡೆಯುವ ಗೋಜಿಗೆ ಹೋಗದಿರುವುದೇ ಉತ್ತಮ.

Points to ponder before taking instant loans
Instant Loans: ತ್ವರಿತ ಸಾಲ ತೆಗೆದುಕೊಳ್ಳಬೇಕೇ? ಈ ವಿಚಾರಗಳ ಬಗ್ಗೆ ಗಮನಹರಿಸಿ..
author img

By

Published : Jan 22, 2022, 9:33 AM IST

ಹೈದರಾಬಾದ್: ಹಣದ ಅವಶ್ಯಕತೆ ಇರುವವರು ಸಾಲ ಪಡೆಯಲು ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳ ಮೊರೆ ಹೋಗುತ್ತಾರೆ. ಹೆಚ್ಚಿನ ಬಡ್ಡಿದರಗಳನ್ನು ವಿಧಿಸಿದರೂ ಬ್ಯಾಂಕ್‌ಗಳ ಷರತ್ತುಗಳಿಗೆ ಒಪ್ಪಿಕೊಳ್ಳುವ ಸ್ಥಿತಿ ಇರುತ್ತದೆ. ಹೆಚ್ಚಿನ ಜನರು ಯಾವುದೇ ಸುಲಭವಾಗಿ ಸಾಲ ಪಡೆದರೂ, ಸಾಲ ತೆಗೆದುಕೊಂಡ ನಂತರ ನಿಜವಾದ ಪರಿಸ್ಥಿತಿ ಗೊತ್ತಾಗುತ್ತದೆ.

ಮೇಲ್ನೋಟಕ್ಕೆ ಸಾಲದ ಹೊರೆ ಸ್ವಲ್ವವೇ ಹೆಚ್ಚಾಗಿರುತ್ತದೆ ಎಂದು ಅಂದುಕೊಂಡರೂ, ಸಾಲದ ಜೊತೆಗೆ ಬಡ್ಡಿದರ, ಸಂಸ್ಕರಣಾ ಶುಲ್ಕ ಮತ್ತು ಇತರ ವೆಚ್ಚಗಳು ಸಾಲದ ಹೊರೆಯನ್ನು ಮತ್ತಷ್ಟು ಹೆಚ್ಚಿಸುವ ಕಾರಣದಿಂದ ಸಾಲ ಪಡೆದವರು ಕಂಗಾಲಾಗುವ ಸಾಧ್ಯತೆ ಹೆಚ್ಚಿರುತ್ತದೆ. ಇದು ತ್ವರಿತ ಸಾಲ (Instant Loan) ಪಡೆದುಕೊಳ್ಳುವವರ ಮೇಲೆ ಈ ತರಹದಲ್ಲಿ ಸಾಲ ಹೊರೆ ಹೆಚ್ಚಾಗುತ್ತದೆ.

ಸಾಲ ನೀಡುವ ಕಂಪನಿ ಅಧಿಕೃತವೇ?: ತ್ವರಿತ ಸಾಲವನ್ನು ಪಡೆಯಲು ನಿಮ್ಮ ಬಳಿ ಮೊಬೈಲ್ ಇದ್ದರೆ ಸಾಕು. ಕೆಲವೊಂದು ಫಿನ್​ಟೆಕ್​ ಕಂಪನಿ ಅಥವಾ ಆ್ಯಪ್​ಗಳ ಮೂಲಕವೇ ನೀವು ಸಾಲ ಪಡೆಯಬಹುದು. ಈ ರೀತಿಯ ಸಾಲ ಪಡೆಯುವ ಮೊದಲು ಕೆಲವೊಂದು ಅಂಶಗಳನ್ನು ನೀವು ನೆನಪಿನಲ್ಲಿ ಇಟ್ಟುಕೊಳ್ಳಬೇಕು.

ಮೊದಲನೆಯದಾಗಿ, ನಿಮಗೆ ಸಾಲ ನೀಡುವ ಕಂಪನಿಯನ್ನು ಆರ್‌ಬಿಐನಿಂದ ಅನುಮತಿ ಪಡೆದಿದೆಯೇ? ಇಲ್ಲವೇ? ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ ಅಥವಾ ಯಾವುದಾದರೂ ಬ್ಯಾಂಕ್​ನೊಡನೆ ಒಪ್ಪಂದ ಮಾಡಿಕೊಂಡಿವೇ ಎಂಬುದನ್ನು ಪರಿಶೀಲನೆ ನಡೆಸಬೇಕಾಗುತ್ತದೆ.

ಒಂದು ವೇಳೆ, ಸಾಲ ನೀಡುವ ಕಂಪನಿ ಅಧಿಕೃತವಲ್ಲದಿದ್ದರೆ, ನಿಮಗೆ ಯಾವುದೇ ರೀತಿಯ ಹಕ್ಕುಗಳು ಇರುವುದಿಲ್ಲ. ಇದು ಕೆಲವೊಮ್ಮೆ ಗಂಭೀರವಾದ ಪರಿಣಾಮಗಳಿಗೆ ಕಾರಣವಾಗಬಹುದು. ಇದರಿಂದ ಅನಧಿಕೃತ ಕಂಪನಿಗಳಿಂದ ಸಾಲ ಪಡೆಯುವ ಗೋಜಿಗೆ ಹೋಗದಿರುವುದೇ ಉತ್ತಮ.

ಕಾಲಮಿತಿಯಲ್ಲಿ ಮರುಪಾವತಿಸಿ: ಅಲ್ಪಾವಧಿಗೆ ನೀಡುವ ತ್ವರಿತ ಸಾಲಕ್ಕೆ ಬಡ್ಡಿದರ ಹೆಚ್ಚಿರುತ್ತದೆ. ಆದ್ದರಿಂದ ನಿಗದಿತ ಕಾಲ ಮಿತಿಯಲ್ಲಿ ಸಾಲ ಮರುಪಾವತಿ ಮಾಡಬೇಕಾಗುತ್ತದೆ. ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿ ಮಾಡಲು ಸಾಧ್ಯವಾಗದಿದ್ದರೆ, ಹೆಚ್ಚಿನ ಬಡ್ಡಿ ಪಾವತಿಸಬೇಕಾಗುತ್ತದೆ. ಆದ್ದರಿಂದ, 90 ದಿನಗಳಿಗಿಂತ ಕಡಿಮೆ ಅವಧಿಗೆ 20,000 ರೂಪಾಯಿಗಿಂತ ಹೆಚ್ಚಿನ ಸಾಲವನ್ನು ತೆಗೆದುಕೊಳ್ಳದಿರುವುದು ಒಳ್ಳೆಯದು.

ಕಡಿಮೆ ಅವಧಿಯಲ್ಲಿ ದೊಡ್ಡ ಮೊತ್ತದ ಸಾಲವನ್ನು ಪಾವತಿ ಮಾಡಲು ಸಾಧ್ಯವಾಗುವುದಿಲ್ಲ ಆದ್ದರಿಂದ ಎಚ್ಚರಿಕೆ ಒಳ್ಳೆಯದು. ಹೊಸ ಸಾಲವನ್ನು ತೆಗೆದುಕೊಳ್ಳುವ ಮೊದಲು ನೀವು ಹಳೆಯ ಸಾಲವನ್ನು ಮರುಪಾವತಿ ಮಾಡಬೇಕು, ಇಲ್ಲದಿದ್ದರೆ ನೀವು ಸಾಲದ ಬಲೆಯಲ್ಲಿ ಸಿಲುಕಿಕೊಳ್ಳುತ್ತೀರಿ ಎಂಬ ಮುಂಜಾಗ್ರತಾ ಮನೋಭಾವ ನಿಮ್ಮಲ್ಲಿರಬೇಕು.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ನೀವೇ ನಿರ್ಧರಿಸಿ: ಫಿನ್‌ಟೆಕ್ ಕಂಪನಿಗಳು ಯಾವಾಗಲೂ ದೊಡ್ಡ ಮೊತ್ತದ ಸಾಲವನ್ನು ನೀಡಲು ಸಿದ್ಧವಾಗಿರುತ್ತವೆ. ಆದರೆ, ನಿಮಗೆ ಎಷ್ಟು ಬೇಕು ಎಂದು ನೀವೇ ನಿರ್ಧರಿಸಬೇಕು. ದೊಡ್ಡ ಮೊತ್ತವನ್ನು ತೆಗೆದುಕೊಂಡರೆ ನಂತರ ಪಾವತಿಸಲು ಕಷ್ಟವಾಗುತ್ತದೆ ಎಂಬುದನ್ನು ಮರೆಯಬಾರದು. ನಿಮ್ಮ ಅಗತ್ಯತೆಗಳು ಮತ್ತು ಸಾಲ ಮರುಪಾವತಿ ಸಾಮರ್ಥ್ಯ ಗಣನೆಗೆ ತೆಗೆದುಕೊಂಡು ಸಾಲ ತೆಗೆದುಕೊಳ್ಳಬೇಕಾಗುತ್ತದೆ.

ಒಂದೇ ಬಾರಿಗೆ ಎರಡು ಅಥವಾ ಮೂರು ಕಂಪನಿಗಳಿಂದ ಸಾಲಕ್ಕೆ ಅರ್ಜಿ ಸಲ್ಲಿಸಬೇಡಿ. ಇದು ನಿಮ್ಮ ಕ್ರೆಡಿಟ್ ಸ್ಕೋರ್​ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಸಾಲವನ್ನು ತೆಗೆದುಕೊಳ್ಳುವಾಗ ಲೋನ್ ಅಗ್ರಿಮೆಂಟ್ ಮತ್ತು ಅರ್ಜಿ ನಮೂನೆ ಗಮನವಿಟ್ಟು ಪರಿಶೀಲಿಸಿ, ಸಾಲ ನೀಡುವ ಕಂಪನಿಗಳ ನಿಯಮಗಳು ಮತ್ತು ಷರತ್ತುಗಳ ಬಗ್ಗೆ ಸಂಪೂರ್ಣವಾಗಿ ತಿಳಿದಿರುವಾಗ ಮಾತ್ರ ಸಾಲವನ್ನು ತೆಗೆದುಕೊಳ್ಳಲು ಮುಂದಾಗಬಹುದು.

ಇದನ್ನೂ ಓದಿ: ಗೃಹ ಸಾಲ ಪಡೆದು ಸಂಕಷ್ಟಕ್ಕೆ ಸಿಲುಕಿದಿದ್ದೀರಾ? ಇದನ್ನು ತಿಳಿದುಕೊಳ್ಳಿ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.