ETV Bharat / bharat

12-14 ವರ್ಷದೊಳಗಿನ ಮಕ್ಕಳ ಲಸಿಕೆಗೆ ಚಾಲನೆ: ಅರ್ಹರೆಲ್ಲರೂ ಲಸಿಕೆ ಪಡೆಯಲು ಪ್ರಧಾನಿ ಮನವಿ

ಕೋವಿಡ್​ ಲಸಿಕೆ ವಿತರಣೆಯ ಭಾರತ ಪ್ರಯತ್ನದಲ್ಲಿ ಇವತ್ತು ಮಹತ್ವದ ದಿನ. 12-14 ವರ್ಷದೊಳಗಿನ ಯುವ ಜನಾಂಗ ಲಸಿಕೆ ಪಡೆಯಲು ಅರ್ಹರಾಗಿದ್ದಾರೆ. ಅಲ್ಲದೇ, 60 ವರ್ಷ ಮೇಲ್ಪಟ್ಟ ಎಲ್ಲರೂ ಬೂಸ್ಟರ್ ಡೋಸ್ ಪಡೆಯಬಹುದಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

pm urges children
pm urges children
author img

By

Published : Mar 16, 2022, 1:02 PM IST

ನವದೆಹಲಿ: ದೇಶದಲ್ಲಿ ಕೋವಿಡ್ ಸೋಂಕಿನಿಂದ ರಕ್ಷಣೆಗಾಗಿ ಮತ್ತೊಂದು ಹಂತದ ಲಸಿಕೆ ವಿತರಣೆಗೆ ಬುಧವಾರ ಚಾಲನೆ ಸಿಕ್ಕಿದೆ. ದೇಶದಾದ್ಯಂತ 12ರಿಂದ 14 ವರ್ಷದ ಮಕ್ಕಳಿಗೆ ಲಸಿಕೆ ನೀಡಲಾಗುತ್ತಿದೆ. ಜತೆಗೆ 60 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್​ ಸಹ ಕೊಡಲಾಗುತ್ತಿದ್ದು, ಮೊದಲ ದಿನ ಎಲ್ಲೆಡೆ ಮಕ್ಕಳು ಮತ್ತು ಹಿರಿಯರು ಲಸಿಕೆ ಪಡೆಯುತ್ತಿದ್ದಾರೆ.

  • Today is an important day in India’s efforts to vaccinate our citizens. Now onwards, youngsters in the 12-14 age group are eligible for vaccines and all those above 60 are eligible for precaution doses. I urge people in these age groups to get vaccinated.

    — Narendra Modi (@narendramodi) March 16, 2022 " class="align-text-top noRightClick twitterSection" data=" ">

2021ರ ಜನವರಿ 16ರಂದು ದೇಶದಲ್ಲಿ ಮೊದಲ ಬಾರಿಗೆ ಕೋವಿಡ್​ ಲಸಿಕೆ ನೀಡಲು ಆರಂಭಿಸಲಾಗಿತ್ತು. ಪ್ರಾರಂಭದಲ್ಲಿ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡಲು ಶುರು ಮಾಡಲಾಗಿತ್ತು. ಈಗ ಲಸಿಕೆ ವಿತರಣೆಯಲ್ಲಿ ಭಾರತ ಮೈಲಿಗಲ್ಲು ಸ್ಥಾಪಿಸಿದೆ. ಇದುವರೆಗೆ 180 ಕೋಟಿಗೂ ಅಧಿಕ ಡೋಸ್​​ ಲಸಿಕೆ ಕೊಡಲಾಗಿದೆ. ಇದರಲ್ಲಿ 15-17 ವರ್ಷದೊಳಗಿನ ಹರಿಹರೆಯದವರಿಗೆ 9 ಕೋಟಿ ಡೋಸ್ ಸಹ ಸೇರಿದ್ದು, ಈಗ 12ರಿಂದ 14 ವರ್ಷದ ಮಕ್ಕಳಿಗೆ ಲಸಿಕೆ ನೀಡಲು ಆರಂಭಿಸಲಾಗಿದೆ.

ಲಸಿಕೆ ವಿತರಣೆ ಕುರಿತಂತೆ ಪ್ರಧಾನಿ ಮೋದಿ ಟ್ವೀಟ್​ ಮಾಡಿದ್ದು, ಕೋವಿಡ್​ ಲಸಿಕೆ ವಿತರಣೆಯ ಭಾರತ ಪ್ರಯತ್ನದಲ್ಲಿ ಇವತ್ತು ಮಹತ್ವದ ದಿನ. 12-14 ವರ್ಷದೊಳಗಿನ ಯುವ ಸಮುದಾಯ ಲಸಿಕೆ ಪಡೆಯಲು ಅರ್ಹರಾಗಿದ್ದಾರೆ. ಅಲ್ಲದೇ, 60 ವರ್ಷ ಮೇಲ್ಪಟ್ಟ ಎಲ್ಲರೂ ಬೂಸ್ಟರ್ ಡೋಸ್ ಪಡೆಯಬಹುದಾಗಿದೆ. ಹೀಗಾಗಿ ನಾನು ಸಾರ್ವಜನಿಕರಿಗೆ ಲಸಿಕೆ ಪಡೆಯಬೇಕೆಂದು ಒತ್ತಾಯಿಸುತ್ತೇನೆ ಎಂದು ಪ್ರಧಾನಿ ಹೇಳಿದ್ದಾರೆ.

  • UP | #COVID19 vaccination for children in the age group of 12-14 years ongoing at Kashi Ram Hospital in Kanpur

    My appeal to parents is to get their children vaccinated as soon as possible. Registrations will be done in both modes, online and offline: Dr Nepal Singh, CMO Kanpur pic.twitter.com/buT1edGDZL

    — ANI UP/Uttarakhand (@ANINewsUP) March 16, 2022 " class="align-text-top noRightClick twitterSection" data=" ">

ಲಸಿಕೆ ಪಡೆದ ಮಕ್ಕಳ ಹರ್ಷ: ಕರ್ನಾಟಕ, ಉತ್ತರ ಪ್ರದೇಶ, ಅಸ್ಸೋಂ, ನವದೆಹಲಿ, ಗುಜರಾತ್​ ಸೇರಿ ಹಲವು ರಾಜ್ಯಗಳಲ್ಲೂ ಮಕ್ಕಳಿಗೆ ಮೊದಲ ಡೋಸ್​​ ಲಸಿಕೆ ವಿತರಣೆಗೆ ಚಾಲನೆ ಸಿಕ್ಕಿದೆ. ಲಸಿಕೆ ಪಡೆದ ಮಕ್ಕಳು ಹರ್ಷ ವ್ಯಕ್ತಪಡಿಸಿದ್ದಾರೆ. ಕೋವಿಡ್​ ಲಸಿಕೆ ಪಡೆಯಲು ಅರ್ಹರೆಲ್ಲರೂ ಲಸಿಕೆ ಹಾಕಿಸಿಕೊಳ್ಳಬೇಕು. ನಾವು ಪ್ರಧಾನಿ ಮೋದಿ ಅವರಿಗೆಗೆ ಧನ್ಯವಾದ ಹೇಳುತ್ತೇವೆ. ಮುನ್ನೆಚ್ಚರಿಕೆ ಕ್ರಮವಾಗಿ ನಾವೆಲ್ಲರೂ ಲಸಿಕೆ ಹಾಕಿಸಿಕೊಳ್ಳುತ್ತಿದ್ದೇವೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.

  • Gujarat | #COVID19 vaccination for children in the age group of 12-14 years and for everyone above 60 years of age begins today, across the country. Visuals from Ahemdabad. pic.twitter.com/mxBalWqV47

    — ANI (@ANI) March 16, 2022 " class="align-text-top noRightClick twitterSection" data=" ">

ಆರೋಗ್ಯ ಕೇಂದ್ರಗಳು, ಆಸ್ಪತ್ರೆಗಳು ಮತ್ತು ಶಾಲೆಗಳಲ್ಲೂ ಲಸಿಕೆ ವಿತರಣೆ ಮಾಡಲಾಗುತ್ತಿದೆ. ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ಕಾರ್ಯಕರ್ತರು ಲಸಿಕೆ ವಿತರಣೆ ಕಾರ್ಯದಲ್ಲಿ ತೊಡಗಿದ್ದು, ಸಚಿವರು, ಶಾಸಕರು ಸಹ ಲಸಿಕೆ ಪಡೆಯಲು ಮಕ್ಕಳಿಗೆ ಪ್ರೋತ್ಸಾಹಿಸುತ್ತಿದ್ದಾರೆ.

ಇದನ್ನೂ ಓದಿ: ಒಂದೇ ಹೆಸರು, ಒಂದೇ ಶಾಲೆ, ಒಂದೇ ಉದ್ಯೋಗ.. ಸೇಮ್ ಪಿಂಚ್.. ಮೌನಿಕಾತ್ರಯರ ಕುತೂಹಲಕಾರಿ ಕತೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.