ETV Bharat / bharat

ಅಂತಾ​ರಾಷ್ಟ್ರೀಯ ಯೋಗ ದಿನ.. ವರ್ಚುವಲ್​ ಮೂಲಕ ಪ್ರಧಾನಿ ಮೋದಿ ಭಾಗಿ

author img

By

Published : Jun 20, 2021, 9:23 PM IST

ಅಂತಾರಾಷ್ಟ್ರೀಯ ಯೋಗ ದಿನದಂದು ಪ್ರಧಾನಿ ನರೇಂದ್ರ ಮೋದಿಯವರು 75 ಪಾರಂಪರಿಕ ಸ್ಥಳಗಳಲ್ಲಿ ಮತ್ತು ಇಡೀ ದೇಶದ ಯೋಗಪಟುಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಜನರು ಯೋಗ ಮಾಡುವಾಗ ಕೋವಿಡ್ ನಿಯಮಾವಳಿಗಳನ್ನು ಅನುಸರಿಸಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಸಿಂಗ್​ ಪಟೇಲ್ ಹೇಳಿದರು.

pm
ಪ್ರಧಾನಿ ಮೋದಿ

ನವದೆಹಲಿ: ಜೂನ್​ 21 ಅಂತಾರಾಷ್ಟ್ರೀಯ ಯೋಗ ದಿನ. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ರಚನೆಯಾದ ಅಂದಿನಿಂದ ಯೋಗಕ್ಕೆ ಅಂತಾರಾಷ್ಟ್ರೀಯ ಮನ್ನಣೆ ತಂದುಕೊಡಲು ನಮೋ ಸಾಕಷ್ಟು ಶ್ರಮಿಸುತ್ತಿದ್ದಾರೆ.

ಈ ಕುರಿತು 'ಈಟಿವಿ ಭಾರತ'ಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಪ್ರಹ್ಲಾದ್ ಸಿಂಗ್​ ಪಟೇಲ್, ಅಂತಾರಾಷ್ಟ್ರೀಯ ಯೋಗ ದಿನದಂದು ಪ್ರಧಾನಿ ನರೇಂದ್ರ ಮೋದಿಯವರು 75 ಪಾರಂಪರಿಕ ಸ್ಥಳಗಳಲ್ಲಿ ಮತ್ತು ಇಡೀ ದೇಶದ ಯೋಗಪಟುಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಜನರು ಯೋಗ ಮಾಡುವಾಗ ಕೋವಿಡ್ ನಿಯಮಾವಳಿಗಳನ್ನು ಅನುಸರಿಸಬೇಕು ಎಂದು ಹೇಳಿದರು.

ಇದನ್ನೂ ಓದಿ:ಸಿಡಿ ಕೇಸ್​ನಲ್ಲಿ ಸರ್ಕಾರದ ಅಸಹಕಾರ: ದಿಢೀರ್ ಮುಂಬೈಗೆ ಹಾರಿದ್ದೇಕೆ ರಮೇಶ್ ಜಾರಕಿಹೊಳಿ‌?

ಪಾರಂಪರಿಕ ತಾಣದಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಕೂಡ ಹಾಜರಾಗಲಿದ್ದಾರೆ. ದೆಹಲಿಯ ಕೆಂಪುಕೋಟೆಯಿಂದ ವರ್ಚುವಲ್​ ಮೂಲಕ ಈ ಸಭೆ ನಡೆಯಲಿದ್ದು, ಪ್ರಧಾನಿಗೆ ಸಚಿವ ಪ್ರಹ್ಲಾದ್ ಪಟೇಲ್​ ಸಾಥ್ ನೀಡಲಿದ್ದಾರೆ. ಈ ಕಾರ್ಯಕ್ರಮವು ಯೋಗದ ಮಹತ್ವದ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುತ್ತದೆ.

ದೇಶದ ಕೆಲವೆಡೆ ಅನ್​ಲಾಕ್​ ಪ್ರಕ್ರಿಯೆಗಳು ನಡೆಯುತ್ತಿದ್ದು, ಪ್ರವಾಸಿ ತಾಣಗಳತ್ತ ಜನತೆ ಬರುತ್ತಿದ್ದಾರೆ. ವಿದೇಶಿ ಪ್ರವಾಸಿಗರ ಬರುವಿಕೆಗೆ ಅವಕಾಶ ಮಾಡಿಕೊಡಲು ಚಿಂತನೆ ನಡೆಸಲಾಗುತ್ತಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.