ನವದೆಹಲಿ: ಇಂದು ಭಾರತದ ಮಾಜಿ ಉಪ ಪ್ರಧಾನಿ ಹಾಗೂ ಬಿಜೆಪಿ ಹಿರಿಯ ನಾಯಕ ಎಲ್.ಕೆ ಅಡ್ವಾಣಿ ಅವರ 95ನೇ ಜನ್ಮದಿನದ ನಿಮಿತ್ತ ಅವರ ನಿವಾಸಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಡ್ವಾಣಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.
ಪ್ರಸ್ತುತ ಮಾಸ್ಕೋದಲ್ಲಿರುವ ವಿದೇಶಾಂಗ ಸಚಿವ ಎಸ್. ಜೈಶಂಕರ್ ಎಲ್‌ಕೆ ಅಡ್ವಾಣಿ ಅವರಿಗೆ “ಪೂಜ್ಯ ಎಲ್‌ಕೆ ಅಡ್ವಾಣಿ ಅವರಿಗೆ ಜನ್ಮದಿನದ ಶುಭಾಶಯಗಳು. ಅವರು ದೇಶಕ್ಕೆ ನೀಡಿದ ಹಲವಾರು ಕೊಡುಗೆಗಳು ಮತ್ತು ಸೇವೆಗಳು ನಮಗೆ ಯಾವಾಗಲೂ ಸ್ಫೂರ್ತಿ ನೀಡುತ್ತವೆ” ಎಂದು ಟ್ವಿಟರ್ ಮೂಲಕ ಶುಭ ಹಾರೈಸಿದ್ದಾರೆ.
-
Prime Minister #NarendraModi and Union Defence Minister #RajnathSingh visited BJP patriarch #LKAdvani to mark his 95th birthday.@narendramodi @rajnathsingh @BJP4India pic.twitter.com/psMZKJkkbe
— IANS (@ians_india) November 8, 2022 " class="align-text-top noRightClick twitterSection" data="
">Prime Minister #NarendraModi and Union Defence Minister #RajnathSingh visited BJP patriarch #LKAdvani to mark his 95th birthday.@narendramodi @rajnathsingh @BJP4India pic.twitter.com/psMZKJkkbe
— IANS (@ians_india) November 8, 2022Prime Minister #NarendraModi and Union Defence Minister #RajnathSingh visited BJP patriarch #LKAdvani to mark his 95th birthday.@narendramodi @rajnathsingh @BJP4India pic.twitter.com/psMZKJkkbe
— IANS (@ians_india) November 8, 2022
ಗೃಹ ಸಚಿವ ಅಮಿತ್ ಶಾ ಕೂಡ ಅಡ್ವಾಣಿ ಅವರಿಗೆ ಹೃತ್ಪೂರ್ವಕವಾಗಿ ಶುಭಾಶಯ ಕೋರಿದ್ದಾರೆ. ಗೌರವಾನ್ವಿತ ಎಲ್.ಕೆ. ಅಡ್ವಾಣಿ ಅವರಿಗೆ ಜನ್ಮದಿನದ ಶುಭಾಶಯಗಳು. ತಮ್ಮ ನಿರಂತರ ಪರಿಶ್ರಮದಿಂದ ದೇಶಾದ್ಯಂತ ಸಂಘಟನೆಯನ್ನು ಬಲಪಡಿಸಿದರೆ ಮತ್ತೊಂದೆಡೆ ತಮ್ಮ ಅಧಿಕಾರವಧಿಯಲ್ಲಿ ದೇಶದ ಅಭಿವೃದ್ಧಿಗೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಅವರಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯವನ್ನು ದೇವರು ಕೊಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಟ್ವೀಟ್ ಮಾಡಿದ್ದಾರೆ.
-
#WATCH | Delhi: Prime Minister Narendra Modi visited the residence of veteran BJP leader LK Advani to greet him on his birthday.
— ANI (@ANI) November 8, 2022 " class="align-text-top noRightClick twitterSection" data="
(Source: DD) pic.twitter.com/CXGstXfcoU
">#WATCH | Delhi: Prime Minister Narendra Modi visited the residence of veteran BJP leader LK Advani to greet him on his birthday.
— ANI (@ANI) November 8, 2022
(Source: DD) pic.twitter.com/CXGstXfcoU#WATCH | Delhi: Prime Minister Narendra Modi visited the residence of veteran BJP leader LK Advani to greet him on his birthday.
— ANI (@ANI) November 8, 2022
(Source: DD) pic.twitter.com/CXGstXfcoU
ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಮತ್ತು ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಟ್ವೀಟ್ ಮಾಡಿ “ಬಿಜೆಪಿಯ ಪ್ರಮುಖ ದೀಪಗಳಲ್ಲಿ ಒಬ್ಬರಾದ ಎಲ್‌ಕೆ ಅಡ್ವಾಣಿ ಭಾರತದ ರಾಜಕೀಯ ಧೀಮಂತರು. ನಾನು ಕಂಡ ಅತ್ಯುತ್ತಮ ಮನುಷ್ಯರಲ್ಲಿ ಒಬ್ಬರಾದ ಬಿಜೆಪಿ ಹಿರಿಯ ನಾಯಕ ಎಲ್‌ಕೆ ಅಡ್ವಾಣಿ ಅವರಿಗೆ ಜನ್ಮದಿನದ ಶುಭಾಶಯಗಳು” ಎಂದು ಹಾರೈಸಿದ್ದಾರೆ.
ಇನ್ನು ಕೇಂದ್ರ ಸಚಿವರಾದ ರಾಜೀವ್ ಚಂದ್ರಶೇಖರ್ ಮತ್ತು ಕಿರಣ್ ರಿಜಿಜು ಕೂಡ ಎಲ್‌ಕೆ ಅಡ್ವಾಣಿಯವರಿಗೆ ಶುಭ ಹಾರೈಸಿದ್ದಾರೆ. ಬಿಜೆಪಿ ನಾಯಕರು, ಇತರೆ ಪಕ್ಷಗಳ ರಾಜಕಾರಣಿಗಳು ಸಾಮಾಜಿಕ ಜಾಲತಾಣಗಳಲ್ಲಿ ಎಲ್‌ಕೆ ಅಡ್ವಾಣಿಯವರಿಗೆ ಜನ್ಮದಿನಕ್ಕೆ ಶುಭ ಕೋರಿದ್ದಾರೆ.
ಇದನ್ನೂ ಓದಿ:ಶೇ 50ರಷ್ಟು ಮೀಸಲಾತಿ ಮಿತಿ ಕೇವಲ ಎಸ್ಸಿ, ಎಸ್ಟಿ ಮತ್ತು ಆರ್ಥಿಕ ದುರ್ಬಲರಿಗೆ ಮಾತ್ರ