ETV Bharat / bharat

ಭಾರತವನ್ನು ವಿಶ್ವ ಹೊಗಳಿದರೆ ಅಸೂಯೆ ಪಡುವ ವಿಪಕ್ಷಗಳು: ಪ್ರಧಾನಿ ನರೇಂದ್ರ ಮೋದಿ - ಪ್ರಧಾನಿ ನರೇಂದ್ರ ಮೋದಿ

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ಮಧ್ಯಪ್ರದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದು ವಿವಿಧ ಯೋಜನೆಗಳ ಶಂಕುಸ್ಥಾಪನೆ, ಉದ್ಘಾಟನೆ ನೆರವೇರಿಸಿದರು.

ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ
author img

By PTI

Published : Oct 2, 2023, 9:39 PM IST

ಗ್ವಾಲಿಯರ್ (ಮಧ್ಯಪ್ರದೇಶ) : ವಿರೋಧ ಪಕ್ಷಗಳು ಅಭಿವೃದ್ಧಿ ವಿರೋಧಿ ಧೋರಣೆ ಹೊಂದಿವೆ. ಭಾರತವನ್ನು ವಿಶ್ವವೇ ಹೊಗಳುತ್ತಿರುವುದು ಅವುಗಳಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ದೂರದೃಷ್ಟಿ ಇಲ್ಲದ, ರಾಜಕಾರಣಕ್ಕಾಗಿ ಮಾತ್ರ ಸರ್ಕಾರವನ್ನು ಸದಾ ತೆಗಳುತ್ತಿರುತ್ತವೆ ಎಂದು ವಿಪಕ್ಷಗಳ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಹರಿಹಾಯ್ದರು.

  • #WATCH | Gwalior: PM Modi says, "Those people who don't have a new thinking or a new roadmap development can never help Madhya Pradesh progress. These people have only one work & that is to hate the country's progress & the various schemes. They forget about the country's… pic.twitter.com/0nMtcZ6Ijk

    — ANI (@ANI) October 2, 2023 " class="align-text-top noRightClick twitterSection" data=" ">

ವರ್ಷಾಂತ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಮಧ್ಯಪ್ರದೇಶದ ಗ್ವಾಲಿಯರ್​ನಲ್ಲಿ ಇಂದು 19,260 ಕೋಟಿ ರೂಪಾಯಿ ವೆಚ್ಚದ ವಿವಿಧ ಯೋಜನೆಗಳಿಗೆ ಉದ್ಘಾಟನೆ ಅಥವಾ ಶಂಕುಸ್ಥಾಪನೆ ಸೋಮವಾರ ನೆರವೇರಿಸಿದ ಬಳಿಕ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಪ್ರಗತಿ ಸಹಿಸಿಕೊಳ್ಳದ ವಿಪಕ್ಷಗಳು: ವಿರೋಧ ಪಕ್ಷಗಳ ಅಭಿವೃದ್ಧಿ ವಿರೋಧಿ ರಾಜಕೀಯವನ್ನು ತೆಗಳಿದ ಮೋದಿ, ಅವರಿಗೆ ಯಾವುದೇ ದೂರದೃಷ್ಟಿ ಅಥವಾ ಮಾರ್ಗ ನಕ್ಷೆ ಇಲ್ಲ. ಕೇಂದ್ರ ಸರ್ಕಾರ ವಿವಿಧ ಕ್ಷೇತ್ರಗಳಲ್ಲಿ ಮಾಡುತ್ತಿರುವ ಅಭಿವೃದ್ಧಿ ಮತ್ತು ದೇಶವು ಪ್ರಗತಿ ಕಾಣುತ್ತಿರುವುದು ನೋಡಿ ಸಹಿಸಿಕೊಳ್ಳಲಾಗದೇ ದ್ವೇಷಿಸುತ್ತಿವೆ ಎಂದರು.

ಭಾರತ ಈಗ ಜಾಗತಿಕ ವೇದಿಕೆಗಳಲ್ಲಿ ಪ್ರಶಂಸೆಗೆ ಒಳಪಡುತ್ತಿದೆ. ಭಾರತದಲ್ಲಿ ತಮ್ಮ ಭವಿಷ್ಯವನ್ನು ಕಂಡುಕೊಳ್ಳಲು ಹಲವು ರಾಷ್ಟ್ರಗಳು ಹವಣಿಸುತ್ತಿವೆ. ರಾಜಕೀಯ ಲಾಭ, ಅಧಿಕಾರದಾಸೆಯಿಂದ ಕೂಡಿರುವ ಬಿಜೆಪಿ ವಿರೋಧಿ ಪಕ್ಷಗಳಿಗೆ ಇದು ಇಷ್ಟವಾಗುತ್ತಿಲ್ಲ. ಭಾರತ ವಿಶ್ವದಾದ್ಯಂತ ಖ್ಯಾತಿ ಗಳಿಸುತ್ತಿರುವುದು ಸಹಿಸಲಾಗುತ್ತಿಲ್ಲ. ಇಂತಹ ಅಭಿವೃದ್ಧಿ ವಿರೋಧಿಗಳು, ಹೊಟ್ಟೆ ಕಿಚ್ಚಿನಿಂದಾಗಿ ರಾಷ್ಟ್ರ ಪ್ರಗತಿ ಕಂಡಿಲ್ಲ ಎಂದು ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ ಎಂದು ಟೀಕಿಸಿದರು.

  • #WATCH | Gwalior: PM Modi says, "The people of the country had given those opposing development 60 years. 60 years is not a less time. If in nine years all this development & progress can happen in the country, a lot could have happened in 60 years. Even they had a chance & it is… pic.twitter.com/5gBsLIeucB

ಡಬಲ್​ ಎಂಜಿನ್​ನಿಂದ ಮಧ್ಯಪ್ರದೇಶ ಅಭಿವೃದ್ಧಿ: ಡಬಲ್ ಇಂಜಿನ್ ಸರ್ಕಾರದಿಂದಾಗಿ (ರಾಜ್ಯ ಮತ್ತು ಕೇಂದ್ರ ಒಂದೇ ಸರ್ಕಾರ) 'ಭಿಮಾರು' ಪ್ರದೇಶವಾಗಿದ್ದ ಮಧ್ಯಪ್ರದೇಶ ಈಗ ಟಾಪ್​ 10 ಅಭಿವೃದ್ಧಿ ಹೊಂದಿದ ರಾಜ್ಯಗಳಲ್ಲಿ ಸ್ಥಾನ ಪಡೆದಿದೆ. ಬಿಜೆಪಿ ಸರ್ಕಾರ ರಾಜ್ಯವನ್ನು ಹಿಂದುಳಿದ ಹಣೆಪಟ್ಟಿಯಿಂದ ಹೊರತಂದಿದೆ ಎಂದು ಮೋದಿ ಹೇಳಿದರು.

ವಿರೋಧ ಪಕ್ಷಗಳ ಆಡಳಿತವಿರುವ ರಾಜ್ಯಗಳಲ್ಲಿ ಅಪರಾಧ ಮತ್ತು ಭ್ರಷ್ಟಾಚಾರ ಮಿತಿಮೀರಿದೆ. ಮೂಲಸೌಕರ್ಯ ಅಭಿವೃದ್ಧಿ ಮತ್ತು ವಿವಿಧ ಕ್ಷೇತ್ರಗಳಲ್ಲಿನ ಬೆಳವಣಿಗೆ ತೀರಾ ಕುಂಠಿತಗೊಂಡಿವೆ. ಆದರೆ, ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಇವೆಲ್ಲವೂ ಪ್ರಮುಖ ಲಕ್ಷಣಗಳಾಗಿವೆ. ದ್ವೇಷವನ್ನೇ ತುಂಬಿಕೊಂಡಿರುವ ವಿಪಕ್ಷಗಳು, ಅಭಿವೃದ್ಧಿಯನ್ನು ಮರೆಮಾಚಿದ್ದಾರೆ ಎಂದರು.

ಮುಂದಿನ ದಿನಗಳಲ್ಲಿ ಭಾರತ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕ ರಾಷ್ಟ್ರವಾಗಿ ಬೆಳೆಯಲಿದೆ. ನಿಮ್ಮ ಒಂದು ಮತವು ಅದನ್ನು ಸಾಕಾರ ಮಾಡಲಿದೆ. ದೇಶದ ಪ್ರಮುಖ ಮೂರು ರಾಜ್ಯಗಳಲ್ಲಿ ಮಧ್ಯಪ್ರದೇಶವು ವಿಶಿಷ್ಟವಾಗಿ ಬೆಳೆಸುವುದೇ ನಮ್ಮ ಗುರಿಯಾಗಿದೆ ಎಂದು ಮೋದಿ ತಿಳಿಸಿದರು.

ಇದನ್ನೂ ಓದಿ: 'ಗಲಭೆಕೋರರು, ಕಲ್ಲು ತೂರಾಟದಿಂದ ರಾಜಸ್ಥಾನವನ್ನು ರಕ್ಷಿಸಿ': ಕಾಂಗ್ರೆಸ್​ ಸರ್ಕಾರದ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.