ETV Bharat / bharat

Article 370 ಮರುಸ್ಥಾಪನೆಗೆ ಎಲ್ಲ ಪಕ್ಷಗಳ ಬೇಡಿಕೆ.. ಐತಿಹಾಸಿಕ ಸರ್ವಪಕ್ಷ ಸಭೆಯಲ್ಲಿ ಏನೆಲ್ಲ ನಡೀತು!

author img

By

Published : Jun 24, 2021, 8:38 PM IST

Updated : Jun 24, 2021, 9:46 PM IST

ಜಮ್ಮು ಮತ್ತು ಕಾಶ್ಮೀರದಲ್ಲಿನ ವಿವಿಧ ನಿರ್ಬಂಧ ಹಾಗೂ ಅರ್ಟಿಕಲ್​ 370 ರದ್ಧತಿ ವಿಚಾರವಾಗಿ ಇದೇ ಮೊದಲ ಸಲ ಪ್ರಧಾನಿ ನರೇಂದ್ರ ಮೋದಿ ಜಮ್ಮು - ಕಾಶ್ಮೀರದ ವಿವಿಧ ನಾಯಕರೊಂದಿಗೆ ಸರ್ವಪಕ್ಷ ಸಭೆ ನಡೆಸಿದರು.

PM Narendra Modi
PM Narendra Modi

ನವದೆಹಲಿ: ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರದಲ್ಲಿನ ಅಭಿವೃದ್ಧಿ ವಿಚಾರ ಹಾಗೂ ಆರ್ಟಿಕಲ್​ 370 ರದ್ಧತಿ ವಿಚಾರವಾಗಿ ಇಂದು ಪ್ರಧಾನಿ ನರೇಂದ್ರ ಮೋದಿ ಜತೆ ಸರ್ವಪಕ್ಷ ಸಭೆ ನಡೆಯಿತು. ಇದರಲ್ಲಿ ಕಾಂಗ್ರೆಸ್​ನ ಗುಲಾಂ ನಬಿ ಆಜಾದ್​, ಪಿಡಿಪಿ ಮೆಹಬೂಬಾ ಮುಫ್ತಿ ಹಾಗೂ ಓಮರ್​ ಅಬ್ದುಲ್ಲಾ ಸೇರಿದಂತೆ 14 ಪಕ್ಷಗಳ ಪ್ರಮುಖ ಮುಖಂಡರು ಭಾಗಿಯಾಗಿದ್ದರು.

ಸುಮಾರು ಮೂರು ಗಂಟೆಗಳ ಕಾಲ ನಡೆದ ಸಭೆಯಲ್ಲಿ ಎಲ್ಲ ನಾಯಕರು ತಮ್ಮ ಅಭಿಪ್ರಾಯ ತಿಳಿಸಿದ್ದು, ಸೂಕ್ತ ಸಮಯದಲ್ಲಿ ಜಮ್ಮು- ಕಾಶ್ಮೀರಕ್ಕೆ ರಾಜ್ಯದ ಸ್ಥಾನ ಮಾನ ನೀಡಲಾಗುವುದು ಎಂದು ನಮೋ ಹೇಳಿದ್ದಾರೆ ಎಂಬ ಮಾತು ತಿಳಿದು ಬಂದಿದೆ.

ಪ್ರಮುಖವಾಗಿ ಸಭೆಯಲ್ಲಿ ಪ್ರಮುಖವಾಗಿ ರಾಜ್ಯದ ಸ್ಥಾನಮಾನ ಮರು ನೀಡಿಕೆ, ಪ್ರಜಾಪ್ರಭುತ್ವ ಸ್ಥಾಪನೆಗೋಸ್ಕರ ವಿಧಾನಸಭೆ ಚುನಾವಣೆ, ಕಾಶ್ಮೀರ ಪಂಡಿತರಿಗೆ ಪುನವರ್ಸತಿ, ಬಂಧಿತರಾಗಿರುವ ರಾಜಕೀಯ ಮುಖಂಡರ ಬಿಡುಗಡೆಗೆ ಅನೇಕ ಮುಖಂಡರು ಆಗ್ರಹಿಸಿದ್ದಾರೆ.

ಸದ್ಯ ಜಮ್ಮು-ಕಾಶ್ಮೀರದಲ್ಲಿ ಪ್ರಜಾಪ್ರಭುತ್ವ ಬಲಪಡಿಸಲು ನಾವು ಬದ್ಧರಾಗಿದ್ದು, ವಿವಿಧ ಮಂಡಳಿ ಹಾಗೂ ವಿಧಾನಸಭೆ ಚುನಾವಣೆ ಯಶಸ್ವಿಯಾಗಿ ನಡೆಸುವುದು ನಮ್ಮ ಮೊದಲ ಆದ್ಯತೆಯಾಗಿದೆ ಎಂದು ನಮೋ ತಿಳಿಸಿದ್ದಾಗಿ ವರದಿಯಾಗಿದೆ. ಪ್ರಜಾಪ್ರಭುತ್ವ ಅತಿದೊಡ್ಡ ಶಕ್ತಿಯಾಗಿದ್ದು, ವಿಶೇಷವಾಗಿ ಜಮ್ಮು-ಕಾಶ್ಮೀರದ ಯುಜನರಿಗೆ ರಾಜಕೀಯ ನಾಯಕತ್ವ ಒದಗಿಸಬೇಕು ಮತ್ತು ಅವರ ಆಕಾಂಕ್ಷೆ ಸರಿಯಾಗಿ ಈಡೇರಿಸಬೇಕು ಎಂದು ನಮೋ ತಿಳಿಸಿದ್ದಾರೆ. ಜತೆಗೆ ಜಮ್ಮು-ಕಾಶ್ಮೀರ ಕ್ಷೇತ್ರ ವಿಂಗಡನೆ ನಿರ್ಧಾರಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ ಎನ್ನಲಾಗಿದೆ.

  • Our democracy’s biggest strength is the ability to sit across a table and exchange views. I told the leaders of J&K that it is the people, specially the youth who have to provide political leadership to J&K, and ensure their aspirations are duly fulfilled: PM Narendra Modi pic.twitter.com/eTTdq31tIt

    — ANI (@ANI) June 24, 2021 " class="align-text-top noRightClick twitterSection" data=" ">

ಇದೇ ವಿಚಾರವಾಗಿ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಜಮ್ಮು - ಕಾಶ್ಮೀರ ವಿಚಾರವಾಗಿ ಇಂದಿನ ಸಭೆ ಅತ್ಯಂತ ಸೌಹಾರ್ದಯುತವಾಗಿ ನಡೆದಿದ್ದು, ಪ್ರತಿಯೊಬ್ಬರು ಪ್ರಜಾಪ್ರಭುತ್ವ ಮತ್ತು ಅಲ್ಲಿನ ಸಂವಿಧಾನದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದಿದ್ದಾರೆ.

ಸಭೆಯಲ್ಲಿ ಭಾಗಿಯಾದ ಮುಖಂಡರ ಅಭಿಪ್ರಾಯ

  • People of J&K are in a lot of difficulties after 5th Aug 2019. They're angry, upset & emotionally shattered. They feel humiliated. I told PM that people of J&K don't accept the manner in which Article 370 was abrogated unconstitutionally, illegally &immorally: Mehbooba Mufti, PDP pic.twitter.com/2xHZxlAlK1

ಆರ್ಟಿಕಲ್​ 370 ಮರುಸ್ಥಾಪನೆಗೆ ಹೋರಾಟ: ಮುಫ್ತಿ: ಸಭೆಯಲ್ಲಿ ಪ್ರಧಾನಿ ಮೋದಿ ಪಾಕ್​ನೊಂದಿಗೆ ಮಾತನಾಡುವ ಭರವಸೆ ನೀಡಿದ್ದು, ಅದಕ್ಕೆ ನಾನು ಅಭಿನಂದಿಸುತ್ತೇನೆ. ಒಳನುಸುಳುವಿಕೆ ಹಾಗೂ ಜಮ್ಮು- ಕಾಶ್ಮೀರದ ಶಾಂತಿಗೋಸ್ಕರ ಪಾಕಿಸ್ತಾನದೊಂದಿಗೆ ಮಾತನಾಡುವ ಅವಶ್ಯಕತೆ ಇದೆ.

ಆರ್ಟಿಕಲ್​ 370 ರದ್ದುಗೊಂಡಾಗಿನಿಂದಲೂ ಇಲ್ಲಿನ ಜನರು ಅನೇಕ ಸಮಸ್ಯೆ ಎದುರಿಸುತ್ತಿದ್ದಾರೆ. ಅದನ್ನ ಮರುಸ್ಥಾಪನೆ ಮಾಡಲು ನಮ್ಮ ಹೋರಾಟ ಮುಂದುವರೆಯಲಿದೆ. ಅದು ಪಾಕಿಸ್ತಾನದಿಂದ ಬಂದಿಲ್ಲ. ನೆಹರು, ಸರ್ದಾರ್ ಪಟೇಲ್​ ಅವರ ಕೊಡುಗೆ ಎಂದಿದ್ದಾರೆ.

PM Narendra Modi
ಸರ್ವಪಕ್ಷ ಸಭೆಯಲ್ಲಿ ಭಾಗಿಯಾದ ನಮೋ

ಆಗಸ್ಟ್​ 5, 2019ರಿಂದ ಜಮ್ಮು-ಕಾಶ್ಮೀರ ಜನರು ಸಿಟ್ಟಿಗೆದ್ದಿದ್ದು, ಆರ್ಟಿಕಲ್ 370 ರದ್ಧು ಮಾಡಿರುವುದನ್ನು ಅವರು ಒಪ್ಪಿಕೊಳ್ಳುತ್ತಿಲ್ಲ ಎಂದು ಹೇಳಿದ್ದಾರೆ.

ಜಮ್ಮು- ಕಾಶ್ಮೀರಕ್ಕೆ ಪೂರ್ಣ ಪ್ರಮಾಣದ ರಾಜ್ಯತ್ವ ನೀಡಿ: ಒಮರ್​ ಅಬ್ದುಲ್ಲಾ : ಸಭೆಯಲ್ಲಿ ಜಮ್ಮು - ಕಾಶ್ಮೀರದ ನಾಯಕರು ಪೂರ್ಣ ಪ್ರಮಾಣದ ರಾಜ್ಯತ್ವಕ್ಕಾಗಿ ಕೋರಿಕೆ ಇಟ್ಟಿದ್ದಾರೆ. ಈ ಹಿಂದಿನಂತೆ ನಮಗೆ ಪೂರ್ಣ ಪ್ರಮಾಣದ ರಾಜ್ಯ ಪುನಃ ಸ್ಥಾಪಿಸಬೇಕು. ಇದಾದ ಬಳಿಕ ಚುನಾವಣೆ ನಡೆಸಲಿ. ಇದಕ್ಕಾಗಿ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ತಿಳಿಸಿದ್ದಾರೆ. ಆರ್ಟಿಕಲ್​ 370ರದ್ಧತಿ ಒಪ್ಪಲು ಸಾಧ್ಯವಿಲ್ಲ ಎಂದಿದ್ದಾರೆ.

ಗುಲಾಮ್​​ ಅಹ್ಮದ್​ ಮೀರ್​; ಜಮ್ಮು- ಕಾಶ್ಮೀರ ಕಾಂಗ್ರೆಸ್​

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಉತ್ತಮ ಸಭೆ ನಡೆದಿದ್ದು, ಎಲ್ಲ ನಾಯಕರು ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ. ಅವರ ನಿದರ್ಶನದಂತೆ ನಾವು ರಾಜ್ಯದಲ್ಲಿ ಮುಂದುವರೆಯಲಿದ್ದೇವೆ ಎಂದಿದ್ದಾರೆ.

ನಿರ್ಮಲ್ ಸಿಂಗ್​; ಜಮ್ಮು- ಕಾಶ್ಮೀರ ಬಿಜೆಪಿ

ಜಮ್ಮು-ಕಾಶ್ಮೀರದಲ್ಲಿ ಶಾಂತಿ ನೆಲಸಬೇಕು. ಪ್ರಜಾಸತಾತ್ಮಕವಾಗಿ ಸರ್ಕಾರ ಅಲ್ಲಿ ಅಧಿಕಾರ ನಡೆಸಬೇಕು. ಬಹುತೇಕ ಎಲ್ಲ ರಾಜಕೀಯ ಪಕ್ಷಗಳು ಈ ಒಮ್ಮತಕ್ಕೆ ಬಂದಿವೆ. ಎಲ್ಲರೂ ಒಟ್ಟಾಗಿ ಕೆಲಸ ಮಾಡಿದಾಗ ಮಾತ್ರ ಇದು ಸಾಧ್ಯ. ಇದಕ್ಕೆ ಸಂಬಂಧಿಸಿದಂತೆ ಪ್ರಧಾನಿಗೆ ಮನವಿ ಮಾಡಲಾಗಿದೆ ಎಂದರು.

PM Narendra Modi meets with 14 political leaders of J&K
ಜಮ್ಮು-ಕಾಶ್ಮೀರದ 14 ಪಕ್ಷದ ಮುಖಂಡರೊಂದಿಗೆ ಚರ್ಚೆ

ಗುಲಾಂ ನಬಿ ಆಜಾದ್​; ಕಾಂಗ್ರೆಸ್​

ಆರ್ಟಿಕಲ್​ 370 ಕುರಿತು ಶೇ. 80ರಷ್ಟು ಪಕ್ಷಗಳು ಮಾತನಾಡಿವೆ. ನಮ್ಮ ಬೇಡಿಕೆಗಳು ಶೀಘ್ರದಲ್ಲೇ ಈಡೇರಿಕೆಯಾಗುವ ಸಾಧ್ಯತೆ ಇದೆ. ಜಮ್ಮು-ಕಾಶ್ಮೀರಕ್ಕೆ ಪೂರ್ಣ ಪ್ರಮಾಣದ ರಾಜ್ಯತ್ವ ಹಾಗೂ ಪ್ರಜಾಪ್ರಭುತ್ವ ಬೇಕು. ಇದಾದ ಬಳಿಕ ಚುನಾವಣೆ ನಡೆಯಲಿದೆ ಎಂದಿದ್ದಾರೆ. ಇಂದಿನ ಸರ್ವಪಕ್ಷ ಸಭೆಯಲ್ಲಿ ಜಮ್ಮು-ಕಾಶ್ಮೀರ ರಾಜ್ಯಪಾಲ ಮನೋಜ್​ ಸಿನ್ಹಾ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಅನೇಕರು ಭಾಗಿಯಾಗಿದ್ದರು.

Last Updated : Jun 24, 2021, 9:46 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.