ETV Bharat / bharat

ಮನ್​ ಕೀ ಬಾತ್​ನಲ್ಲಿ ರಾಜ್ಯದ "ಲಾಲಿ ಹಾಡು" ಪ್ರಸಾರ: ಜೋಗುಳ ಗೀತೆಗೆ ಮೋದಿ ಮೆಚ್ಚುಗೆ - ಇ ಸಂಜೀವನಿ ಆ್ಯಪ್ ಡಿಜಿಟಲ್ ಇಂಡಿಯಾದ ಶಕ್ತಿ

ಮನ್​ ಕಿ ಬಾತ್​ನ 98ನೇ ಆವೃತ್ತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದ ಲಾಲಿ ಹಾಡನ್ನು ಮೆಚ್ಚಿದರು. ಚಾಮರಾಜನಗರದ ಮಂಜುನಾಥ್​ ಎಂಬವರು ಬರೆದ ಹಾಡನ್ನು ಪ್ರಸಾರ ಮಾಡಲಾಯಿತು.

mann-ki-baat
ಮನ್​ ಕಿ ಬಾತ್​
author img

By

Published : Feb 26, 2023, 1:27 PM IST

ನವದೆಹಲಿ: ಕರ್ನಾಟಕ ಜಾನಪದ ಶೈಲಿಯ "ಲಾಲಿ ಹಾಡು" ಪ್ರಧಾನಿ ನರೇಂದ್ರ ಮೋದಿ ಅವರು ನಡೆಸಿಕೊಡುವ ಮಾಸಿಕ ಕಾರ್ಯಕ್ರಮ ಮನ್​ ಕೀ ಬಾತ್​ನಲ್ಲಿಂದು ಪ್ರತಿಧ್ವನಿಸಿತು. ಚಾಮರಾಜನಗರದ ಬಿ.ಎಂ.ಮಂಜುನಾಥ್​ ಬರೆದ ಸುಂದರ ಗೀತೆ, ಲಾಲಿ ಬರಹ ಸ್ಪರ್ಧೆಯಲ್ಲಿ ಮೊದಲ ಪ್ರಶಸ್ತಿ ಬಾಚಿಕೊಂಡಿದೆ. "ಮಲಗು ಕಂದ" ಹಾಡನ್ನು ಮನ್​ ಕೀ ಬಾತ್​ನಲ್ಲಿ ಪ್ರಸಾರ ಕೂಡ ಮಾಡಲಾಯಿತು.

ತಾಯಿ ಮತ್ತು ಅಜ್ಜಿಯ ಪ್ರೇರಣೆಯಿಂದ ಪದಗಳಲ್ಲಿ ಮೂಡಿಬಂದ ಭಾವ ತುಂಬಿದ್ದ 35 ಸೆಕೆಂಡುಗಳ ಲಾಲಿ ಹಾಡು ಹೃದಯಸ್ಪರ್ಶಿಯಾಗಿತ್ತು. ಇದನ್ನು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮಾತಿನಲ್ಲಿ ಪ್ರಸ್ತಾಪಿಸಿದರು. ಇದಲ್ಲದೇ, ಅಸ್ಸಾಂನ ದಿನೇಶ್​ ಗೋವಾಲಾ ಅವರ ವಿರಚಿತ ಮಡಕೆ ಕುಶಲಕರ್ಮಿಗಳ ಪ್ರತಿಬಿಂಬಿಸುವ ಹಾಡು, ಸ್ವಾತಂತ್ರ್ಯ ಹೋರಾಟಗಾರರ ಕೇಂದ್ರೀಕೃತ ಆಂಧ್ರಪ್ರದೇಶದ ಟಿ.ವಿಜಯ್ ದುರ್ಗಾ ಅವರು ಬರೆದ ಹಾಡನ್ನೂ ಪ್ರಧಾನಿಗಳು ಮೆಚ್ಚುಗೆ ಸೂಚಿಸಿದರು.

ಯುಪಿಐ, ಇ-ಸಂಜೀವನಿ ಆ್ಯಪ್: ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್(ಯುಪಿಐ) ವ್ಯವಸ್ಥೆ ಮತ್ತು ಇ ಸಂಜೀವಿನಿ ಆ್ಯಪ್ ಡಿಜಿಟಲ್ ಇಂಡಿಯಾದ ಶಕ್ತಿಗೆ ಉಜ್ವಲ ಉದಾಹರಣೆಯಾಗಿದೆ. ವಿಶ್ವದ ಹಲವು ದೇಶಗಳು ಭಾರತದ UPI ಗೆ ಆಕರ್ಷಿತವಾಗಿವೆ ಎಂದು ಪ್ರಧಾನಿ ಹೇಳಿದರು.

"ಪ್ರಪಂಚದ ಹಲವು ದೇಶಗಳು ಭಾರತದ ಯುಪಿಐ ಕಡೆಗೆ ಸೆಳೆಯಲ್ಪಟ್ಟಿವೆ. ಕೆಲವೇ ದಿನಗಳ ಹಿಂದೆ ಭಾರತ ಮತ್ತು ಸಿಂಗಾಪುರದ ನಡುವೆ UPI-PayNow ಲಿಂಕ್ ಅನ್ನು ಪ್ರಾರಂಭಿಸಲಾಗಿದೆ. ಈಗ, ಸಿಂಗಾಪುರ ಮತ್ತು ಭಾರತದ ಜನರು ತಮ್ಮ ಮೊಬೈಲ್​ನಿಂದ ಹಣವನ್ನು ವರ್ಗಾಯಿಸುತ್ತಿದ್ದಾರೆ. ಉಭಯ ರಾಷ್ಟ್ರಗಳ ಮಧ್ಯೆ ಹಣಕಾಸಿನ ವ್ಯವಹಾರ ನೇರವಾಗಿ ಆರಂಭವಾಗಿದೆ" ಎಂದು ಅವರು ಹೇಳಿದರು.

ಕೋವಿಡ್ -19 ಸಾಂಕ್ರಾಮಿಕದ ಸಮಯದಲ್ಲಿ ಇ-ಸಂಜೀವಿನಿ ಆ್ಯಪ್ ಜನರಿಗೆ ದೊಡ್ಡ ವರವಾಗಿ ಪರಿಣಮಿಸಿದೆ. ಇದು ಡಿಜಿಟಲ್ ಇಂಡಿಯಾದ ಭವ್ಯ ಕನಸಿಗೆ ಜ್ವಲಂತ ಉದಾಹರಣೆಯಾಗಿದೆ. ಈ ಆ್ಯಪ್ ಮೂಲಕ ಟೆಲಿ ಕನ್ಸಲ್ಟೇಶನ್ ಅಂದರೆ ದೂರದಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಅನಾರೋಗ್ಯದ ಬಗ್ಗೆ ವೈದ್ಯರನ್ನು ಸಂಪರ್ಕಿಸಬಹುದು. ಇಲ್ಲಿಯವರೆಗೆ ಈ ಆ್ಯಪ್ ಬಳಸುವ ಟೆಲಿ ಕನ್ಸಲ್ಟೆಂಟ್​ಗಳ ಸಂಖ್ಯೆ 10 ಕೋಟಿ ದಾಟಿದೆ. ರೋಗಿಯ ಮತ್ತು ವೈದ್ಯರನ್ನು ದೂರದಿಂದಲೇ ಹತ್ತಿರಕ್ಕೆ ತರುವ ದೊಡ್ಡ ತಂತ್ರಜ್ಞಾನವಾಗಿದೆ ಎಂದು ಶ್ಲಾಘಿಸಿದರು.

ಸಕಾಲದಲ್ಲಿ ವೈದ್ಯರು ರೋಗಿಗಳಿಗೆ ನೆರವು ನೀಡಲು ಉಪಯುಕ್ತವಾಗಿರುವ ಸೌಲಭ್ಯವನ್ನು ಪಡೆದ ಎಲ್ಲಾ ವೈದ್ಯರು ಮತ್ತು ರೋಗಿಗಳನ್ನು ಅಭಿನಂದಿಸುತ್ತೇನೆ. ದೇಶದ ಜನರು ತಂತ್ರಜ್ಞಾನವನ್ನು ಹೇಗೆ ತಮ್ಮ ಭಾಗವಾಗಿಸಿಕೊಂಡಿದ್ದಾರೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ ಎಂದು ಪ್ರಧಾನಿ ಹೇಳಿದರು.

ಇ-ಸಂಜೀವಿನಿ ಬಳಕೆದಾರರ ಜೊತೆ ಮಾತು: ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಮೋದಿ ಅವರು, ಸಿಕ್ಕಿಂನ ಡಾ.ಮದನ್ ಮಣಿ ಅವರೊಂದಿಗೆ ಮಾತನಾಡಿದರು. ಸಿಕ್ಕಿಂ ವೈದ್ಯರು ಉತ್ತರ ಪ್ರದೇಶದ ಚಂದೌಲಿ ಜಿಲ್ಲೆಯ ನಿವಾಸಿ ಮದನ್ ಮೋಹನ್ ಅವರೊಂದಿಗೆ ಇ-ಸಂಜೀವಿನಿ ಆ್ಯಪ್​ ಮೂಲಕ ಆರೋಗ್ಯ ವಿಚಾರಿಸಿದ್ದ ಬಗ್ಗೆ ಮಾಹಿತಿ ಹಂಚಿಕೊಂಡರು. ಇ-ಸಂಜೀವಿನಿ ಆ್ಯಪ್ ಮೂಲಕ ಟೆಲಿಕನ್ಸಲ್ಟೇಶನ್‌ನ ಪ್ರಯೋಜನವನ್ನು ಪಡೆದ ರೋಗಿಯಾಗಿ ತಮ್ಮ ಅನುಭವವನ್ನು ಅವರು ಹಂಚಿಕೊಂಡರು.

ಮಾಸಿಕ ರೇಡಿಯೋ ಕಾರ್ಯಕ್ರಮದಲ್ಲಿ ಹಲವಾರು ವಿಷಯಗಳನ್ನು ಪ್ರಸ್ತಾಪಿಸುವ ಪ್ರಧಾನಿಗಳು, ಈ ಬಾರಿ ಭಾರತೀಯ ಆಟಿಕೆಗಳು ಮತ್ತು ಕಥೆ ಹೇಳುವುದರ ಬಗ್ಗೆ ಮಾತನಾಡಿದರು. ಸಾರ್ವಜನಿಕ ಸಹಭಾಗಿತ್ವದ ಅಭಿವ್ಯಕ್ತಿಯಾಗಿ 'ಮನ್ ಕಿ ಬಾತ್' ಕಾರ್ಯಕ್ರಮವನ್ನು ಜನರು ಅದ್ಭುತ ವೇದಿಕೆಯನ್ನಾಗಿ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮನ್ ಕಿ ಬಾತ್‌ನಲ್ಲಿ ಭಾರತೀಯ ಆಟಿಕೆಗಳನ್ನು ಉಲ್ಲೇಖಿಸಿದ್ದೆ. ಜನರು ಅವುಗಳನ್ನು ಪ್ರಚಾರಕ್ಕೆ ತಂದರು. ಈಗ ಭಾರತೀಯ ಆಟಿಕೆಗಳು ಎಷ್ಟು ಕ್ರೇಜ್ ಪಡೆದಿವೆ ಎಂದರೆ, ವಿದೇಶಗಳಲ್ಲಿಯೂ ಅವುಗಳು ಮೆಚ್ಚುಗೆ ಪಡೆದಿವೆ. ಹಿರಿಯರು ಕಥೆ ಹೇಳುವ ವಿಧಾನವೂ ಕೂಡ ಭಾರತೀಯ ಶೈಲಿಯಾಗಿದೆ. ಅದೀಗ ವಿದೇಶದಲ್ಲೂ ಖ್ಯಾತಿ ಪಡೆದಿದೆ ಎಂದು ಹೇಳಿದರು.

'ಮನ್ ಕಿ ಬಾತ್' ಮಾಸಿಕ ಭಾಷಣವಾಗಿದ್ದು, ಪ್ರತಿ ತಿಂಗಳ ಕೊನೆಯ ಭಾನುವಾರದಂದು ಆಲ್ ಇಂಡಿಯಾ ರೇಡಿಯೊದಲ್ಲಿ ಪ್ರಸಾರವಾಗುತ್ತದೆ. ಅದರ ಮೂಲಕ ಪ್ರಧಾನಿ ನರೇಂದ್ರ ಮೋದಿ ದೇಶವಾಸಿಗಳೊಂದಿಗೆ ಸಂವಾದ ನಡೆಸುತ್ತಾರೆ. ಇಂದಿನ ಮನ್​ ಕೀ ಬಾತ್​ 98 ನೇ ಆವೃತ್ತಿಯಾಗಿದೆ.

ಇದನ್ನೂ ಓದಿ: ಪುಲ್ವಾಮ: ಗುಂಡು ಹಾರಿಸಿ ಕಾಶ್ಮೀರಿ ಪಂಡಿತನ ಹತ್ಯೆಗೈದ ಉಗ್ರರು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.