ETV Bharat / bharat

75 ಸಾವಿರ ಫಲಾನುಭವಿಗಳಿಗೆ ಮನೆ ಹಸ್ತಾಂತರಿಸಿದ ಪ್ರಧಾನಿ ಮೋದಿ

ಉತ್ತರ ಪ್ರದೇಶದ ಲಖನೌದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ವಿವಿಧ ಅಭಿವೃದ್ಧಿ ಪರ ಯೋಜನೆಗಳಿಗೆ ಚಾಲನೆ ನೀಡಿದ್ದು, ಇದೇ ವೇಳೆ ಸುಮಾರು 75 ಸಾವಿರ ಫಲಾನುಭವಿಗಳಿಗೆ ಮನೆ ಹಸ್ತಾಂತರ ಮಾಡಿದರು.

PM Narendra Modi
PM Narendra Modi
author img

By

Published : Oct 5, 2021, 3:25 PM IST

ಲಖನೌ(ಉತ್ತರ ಪ್ರದೇಶ): ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಮನೆಗಳನ್ನ 75 ಸಾವಿರ ಫಲಾನುಭವಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ಹಸ್ತಾಂತರ ಮಾಡಿದ್ದಾರೆ. ಪ್ರಧಾನ್​ ಮಂತ್ರಿ ಆವಾಸ್​ ಯೋಜನೆಯಡಿ ಈ ಮನೆಗಳು ನಿರ್ಮಾಣವಾಗಿದ್ದು, ವರ್ಚುಯಲ್​ ಸಭೆ ಮೂಲಕ ಇವುಗಳ ಕೀ ಹಸ್ತಾಂತರ ಮಾಡಿದರು.

ಉತ್ತರ ಪ್ರದೇಶದಲ್ಲಿ ಸುಮಾರು 4,737 ಕೋಟಿ ರೂ. ಮೌಲ್ಯದ 75 ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿ ಮಾತನಾಡಿದ ನಮೋ, 2014ರಿಂದ ನಮ್ಮ ಸರ್ಕಾರ ಪಿಎಂ ಆವಾಸ್ ಯೋಜನೆಯಡಿ 1 ಕೋಟಿ 13 ಲಕ್ಷಕ್ಕೂ ಹೆಚ್ಚು ಮನೆ ನಿರ್ಮಾಣ ಮಾಡಲು ಅನುಮೋದನೆ ನೀಡಿತ್ತು. ಈಗಾಗಲೇ 50 ಲಕ್ಷಕ್ಕೂ ಹೆಚ್ಚು ಮನೆ ನಿರ್ಮಾಣ ಮಾಡಿ ಬಡವರಿಗೆ ಹಸ್ತಾಂತರ ಮಾಡಲಾಗಿದೆ ಎಂದರು.

  • Lucknow: PM Narendra Modi inaugurated & laid foundation stones of 75 Urban Development Projects of Uttar Pradesh under Smart Cities Mission & AMRUT.

    He also flagged off 75 buses under FAME-II for 7 cities incl Lucknow, Kanpur, Varanasi, Prayagraj, Gorakhpur, Jhansi & Ghaziabad pic.twitter.com/ztUn4zE8y8

    — ANI UP (@ANINewsUP) October 5, 2021 " class="align-text-top noRightClick twitterSection" data=" ">

ಆಜಾದಿ ಕೀ ಅಮೃತ್​ ಮಹೋತ್ಸವ ಕಾರ್ಯಕ್ರಮದ ನಿಮಿತ್ತ ಲಖನೌದಲ್ಲಿ 'ನ್ಯೂ ಅರ್ಬನ್​​ ಇಂಡಿಯಾ ಥೀಮ್​'​​ ಅಡಿ ಮೂರು ದಿನಗಳ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿದ್ದರು. ಇದರ ಜೊತೆಗೆ ಲಖನೌ, ಕಾನ್ಪುರ್​, ವಾರಾಣಸಿ, ಪ್ರಯಾಗ್​ರಾಜ್​​ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಸಂಚಾರ ಮಾಡುವ 75 ಎಲೆಕ್ಟ್ರಿಕ್​ ಬಸ್​ಗಳಿಗೆ ಚಾಲನೆ ನೀಡಿದರು.

ಇದನ್ನೂ ಓದಿರಿ: ಅನ್ನದಾತರ ಬೆಳೆ ನೀರು ಪಾಲು.. ಸಾವಿರಾರು ಕ್ವಿಂಟಲ್​ ಭತ್ತ ಮಳೆಗಾಹುತಿ!

ಕಾರ್ಯಕ್ರಮದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್​, ಹರ್ದೀಪ್​​ ಸಿಂಗ್​​ ಪುರಿ, ಉತ್ತರ ಪ್ರದೇಶ ಗವರ್ನರ್​​ ಆನಂದಿಬೆನ್​ ಪಟೇಲ್​, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಭಾಗಿಯಾಗಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.