ಚಂಡೀಗಢ(ಪಂಜಾಬ್): ಪಂಜಾಬ್‌ನ ಫಿರೋಜ್ಪುರ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಭದ್ರತಾ ಲೋಪ ಎದುರಿಸಿರುವ ಕುರಿತಾಗಿ ಕಾಂಗ್ರೆಸ್ ಮುಖಂಡ ನವಜೋತ್ ಸಿಂಗ್ ಸಿಧು ಇದೀಗ ಪಂಜಾಬ್ ಮಾಜಿ ಸಿಎಂ ಕ್ಯಾ. ಅಮರೀಂದರ್ ಸಿಂಗ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ರಾಜಕೀಯ ಮಾಡುವುದನ್ನು ನಿಲ್ಲಿಸಬೇಕು. ಪಂಜಾಬ್ನಲ್ಲಿ ರಾಷ್ಟ್ರಪತಿ ಆಳ್ವಿಕೆ ಬಗ್ಗೆ ಮಾತನಾಡುವ ಕ್ಯಾ.ಅಮರೀಂದರ್ ಸಿಂಗ್ ನಿಮ್ಮ 'ಗಿಣಿ'(ಕೇಂದ್ರದ) ಇದ್ದಹಾಗೆ ಎಂದಿದ್ದಾರೆ.
ಪ್ರಧಾನಿಗೆ ಭದ್ರತೆ ಒದಗಿಸುವಲ್ಲಿ ವಿಫಲವಾಗಿರುವ ಪಂಜಾಬ್‌ನ ಚನ್ನಿ ಸರ್ಕಾರದ ನಡೆ ಸಮರ್ಥಿಸಿಕೊಂಡಿರುವ ಸಿಧು, ಕಳೆದ ಎರಡು ದಿನಗಳಿಂದ ಭದ್ರತೆ ಬಗ್ಗೆ ಕೆಲ ಬುದ್ಧಿಹೀನರು ಮಾತನಾಡುತ್ತಿದ್ದಾರೆ. ಅದರಲ್ಲಿ ನಮ್ಮ ಮಾಜಿ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಕೂಡ ಒಬ್ಬರು. ಈ ವಿಷಯದಲ್ಲಿ ರಾಜಕೀಯ ಮಾಡುವುದನ್ನು ನಿಲ್ಲಿಸಬೇಕು. ಇಲ್ಲವಾದಲ್ಲಿ ಬರುವ ದಿನಗಳಲ್ಲಿ ತಕ್ಕ ಶಾಸ್ತಿ ಆಗಲಿದೆ ಎಂದು ಹೇಳಿದರು.
-
They (BJP) must stop playing politics. You will get a befitting reply here. All those talking about President's Rule (in Punjab), are your (BJP) parrots: Punjab Congress Chief Navjot Singh Sidhu in Chandigarh pic.twitter.com/hQxnEcsJ8J
— ANI (@ANI) January 7, 2022 " class="align-text-top noRightClick twitterSection" data="
">They (BJP) must stop playing politics. You will get a befitting reply here. All those talking about President's Rule (in Punjab), are your (BJP) parrots: Punjab Congress Chief Navjot Singh Sidhu in Chandigarh pic.twitter.com/hQxnEcsJ8J
— ANI (@ANI) January 7, 2022They (BJP) must stop playing politics. You will get a befitting reply here. All those talking about President's Rule (in Punjab), are your (BJP) parrots: Punjab Congress Chief Navjot Singh Sidhu in Chandigarh pic.twitter.com/hQxnEcsJ8J
— ANI (@ANI) January 7, 2022
ರಾಜ್ಯದಲ್ಲಿ ಬಿಜೆಪಿಗೆ ಮತವೂ ಇಲ್ಲ, ಬೆಂಬಲವೂ ಇಲ್ಲ ಎಂದು ವಾಗ್ದಾಳಿ ನಡೆಸಿರುವ ಸಿಧು, 7,000 ಕುರ್ಚಿ ಹಾಕಲಾಗಿದ್ದ ಸಭೆಯಲ್ಲಿ ಕೇವಲ 500 ಜನರು ಕುಳಿತುಕೊಂಡಿದ್ದರು. ಇಂತಹ ಸಭೆಯಲ್ಲಿ ಪ್ರಧಾನಿ ಹೇಗೆ ಮಾತನಾಡಲು ಸಾಧ್ಯ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಅರೆರೆ, ಇದು ನಾಯಿ ಮರಿ ಅಲ್ವೇ? ಖಂಡಿತಾ ಅಲ್ಲ, ಅಸಲಿ ಚಿತ್ರ ಒಳಗಿದೆ ನೋಡಿ!
ಪ್ರಧಾನಿ ಕಚೇರಿ ರಕ್ಷಣೆ ಮಾಡಲು ಲಕ್ಷಾಂತರ ಪಂಜಾಬಿಗಳು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಪ್ರತಿಯೊಬ್ಬ ಪಂಜಾಬಿ ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ರಾಷ್ಟ್ರ ರಕ್ಷಣೆ ಮಾಡಲು ತಮ್ಮ ಕೊನೆಯ ಉಸಿರಿರುವವರೆಗೂ ಹೋರಾಡುತ್ತಾರೆ ಎಂದು ತಿಳಿಸಿದರು.
ಪ್ರಧಾನಿ ಮೋದಿಗೆ ಭದ್ರತಾ ಲೋಪ ಉಂಟಾದ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಕ್ಯಾ. ಅಮರೀಂದರ್ ಸಿಂಗ್, ಪಂಜಾಬ್ನಲ್ಲಿ ಕಾಂಗ್ರೆಸ್ ಸರ್ಕಾರವನ್ನು ವಜಾಗೊಳಿಸಿ ತಕ್ಷಣವೇ ರಾಷ್ಟ್ರಪತಿ ಆಳ್ವಿಕೆ ಹೇರುವಂತೆ ಒತ್ತಾಯಿಸಿದ್ದರು.
ಇದೇ ವಿಚಾರವಾಗಿ ನಿನ್ನೆ ಮಾತನಾಡಿದ್ದ ನವಜೋತ್ ಸಿಂಗ್ ಸಿಧು, ದೆಹಲಿ ಗಡಿಯಲ್ಲಿ ರೈತರು ಒಂದು ವರ್ಷದಿಂದ ಪ್ರತಿಭಟನೆಗೆ ಕುಳಿತಿದ್ದರು. ಆದರೆ, ನಿನ್ನೆ ಕೇವಲ 15 ನಿಮಿಷಗಳ ಕಾಲ ಕಾಯಲು ಪ್ರಧಾನಿಗೆ ಆಗಲಿಲ್ಲ, ಇದರಿಂದ ಅವರಿಗೆ ತೊಂದರೆ ಆಗಿದೆ. ಈ ರೀತಿಯ ಎರಡು ಮಾನದಂಡ ಏಕೆ? ಎಂದು ಟೀಕಿಸಿದ್ದರು.