ETV Bharat / bharat

ಇಂದು ಹೈದರಾಬಾದ್​​ಗೆ ಪ್ರಧಾನಿ ಭೇಟಿ: ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ - ಏಮ್ಸ್ ಮತ್ತು ಐದು ರಾಷ್ಟ್ರೀಯ ಹೆದ್ದಾರಿ ಯೋಜನೆ

ಪ್ರಧಾನಿ ಮೋದಿ ಇಂದು ತೆಲಂಗಾಣ ರಾಜಧಾನಿ ಹೈದರಾಬಾದ್​ಗೆ ಭೇಟಿ ನೀಡಲಿದ್ದು ಸುಮಾರು 11 ಸಾವಿರ ಕೋಟಿ ರೂ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಈ ನಡುವೆ ಪ್ರಧಾನಿ ಕಾರ್ಯಕ್ರಮಕ್ಕೆ ಸಿಎಂ ಚಂದ್ರಶೇಖರ್​ ರಾವ್ ಈ ಬಾರಿಯೂ ಗೈರಾಗಲಿದ್ದಾರೆ ಎಂದು ತಿಳಿದು ಬಂದಿದೆ.

PM Modi visits Hyderabad today to launch projects worth over Rs. 11k  Cr
ಇಂದು ಹೈದರಾಬಾದ್​​ಗೆ ಪ್ರಧಾನಿ ಭೇಟಿ: ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ
author img

By

Published : Apr 8, 2023, 9:12 AM IST

Updated : Apr 8, 2023, 10:34 AM IST

ಹೈದರಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ತೆಲಂಗಾಣದಲ್ಲಿ 11,300 ಕೋಟಿ ರೂಪಾಯಿಗಳ ಯೋಜನೆಗಳಿಗೆ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡಲಿದ್ದಾರೆ. ಇದೇ ವೇಳೆ ಸಿಕಂದರಾಬಾದ್ - ತಿರುಪತಿ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಚಾಲನೆ ನೀಡಲಿದ್ದಾರೆ. ಇಂದು ಬೆಳಗ್ಗೆ 11.30ಕ್ಕೆ ಹೈದರಾಬಾದ್​ಗೆ ಆಗಮಿಸುವ ಅವರು, ಹಲವು ಅಭಿವೃದ್ಧಿ ಕಾರ್ಯಗಳಿಗೆ ಅಡಿಪಾಯ ಹಾಕಲಿದ್ದಾರೆ. ಆ ಬಳಿಕ ಇಲ್ಲಿನ ಪರೇಡ್ ಮೈದಾನದಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

  • Telangana CM KCR to not attend PM Modi's program today

    PM Modi will inaugurate projects worth Rs 11,360 crore in Telangana today. CM KCR was invited following the protocol. Also, CM KCR will not be receiving PM Modi at Begumpet airport during his arrival today.

    (file pics) pic.twitter.com/C0XTBVKAPR

    — ANI (@ANI) April 8, 2023 " class="align-text-top noRightClick twitterSection" data=" ">

ಪ್ರಧಾನಿ ಮೋದಿ ಬೀಬಿನಗರದ ಏಮ್ಸ್ ಮತ್ತು ಐದು ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಸಿಕಂದರಾಬಾದ್ ರೈಲು ನಿಲ್ದಾಣದ ಪುನರಾಭಿವೃದ್ಧಿಯ ಅಡಿಪಾಯಕ್ಕೂ ಕೂಡಾ ಇಂದೇ ಚಾಲನೆ ನೀಡಲಿದ್ದಾರೆ. ಸಿಕಂದರಾಬಾದ್-ತಿರುಪತಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಲಿದ್ದಾರೆ. ಇದು ಹೈದರಾಬಾದ್ ಮತ್ತು ತಿರುಪತಿಯೊಂದಿಗೆ ನೇರ ಸಂಪರ್ಕ ಕಲ್ಪಿಸಲಿದೆ. ಈ ರೈಲು ಎರಡು ನಗರಗಳ ನಡುವಿನ ಪ್ರಯಾಣದ ಸಮಯವನ್ನು ಸುಮಾರು ಮೂರೂವರೆ ಗಂಟೆಗಳಷ್ಟು ಕಡಿಮೆ ಮಾಡುತ್ತದೆ ಮತ್ತು ಯಾತ್ರಿಕ ಪ್ರಯಾಣಿಕರಿಗೆ ವಿಶೇಷವಾಗಿ ಪ್ರಯೋಜನ ಮಾಡಿ ಕೊಡಲಿದೆ.

  • ఈ ముఖ్యమైన మౌలిక సదుపాయాల అప్‌గ్రేడేషన్ ప్రాజెక్ట్ ద్వారా అసంఖ్యాకమైన ప్రజానీకానికి ప్రయోజనం చేకూరుతుంది. https://t.co/VGwC8msnMc

    — Narendra Modi (@narendramodi) April 7, 2023 " class="align-text-top noRightClick twitterSection" data=" ">

ಹೊಸ ನಿಲ್ದಾಣದಲ್ಲಿ ಏನೆಲ್ಲ ಇರಲಿವೆ?: 720 ಕೋಟಿ ರೂ. ವೆಚ್ಚದಲ್ಲಿ ಸಿಕಂದರಾಬಾದ್ ರೈಲು ನಿಲ್ದಾಣದ ಪುನರಾಭಿವೃದ್ಧಿಗೆ ವೇದಿಕೆ ಕಲ್ಪಿಸಲಾಗಿದೆ. ಈ ಮೂಲಕ ವಿಶ್ವ ದರ್ಜೆಯ ಸೌಕರ್ಯಗಳು ಮತ್ತು ಕಲಾತ್ಮಕವಾಗಿ ವಿನ್ಯಾಸಗೊಳಿಸಲಾಗುವ ಐಕಾನಿಕ್ ಸ್ಟೇಷನ್ ಕಟ್ಟಡದೊಂದಿಗೆ ಬೃಹತ್ ಬದಲಾವಣೆ ಮಾಡಲು ಯೋಜಿಸಲಾಗಿದೆ. ಮರು ಅಭಿವೃದ್ಧಿಪಡಿಸಿದ ನಿಲ್ದಾಣವು ಒಂದೇ ಸ್ಥಳದಲ್ಲಿ ಎಲ್ಲಾ ಪ್ರಯಾಣಿಕರಿಗೆ ವಿಶೇಷ ಸೌಲಭ್ಯಗಳನ್ನು ಒದಗಿಸಲಿದೆ. ವಿಶಾಲವಾದ ಮೇಲ್ಛಾವಣಿ ಪ್ಲಾಜಾ ಹೊಂದಲಿದ್ದು, ಬಹು-ಮಾದರಿ ಸಂಪರ್ಕದೊಂದಿಗೆ ಇತರ ಮಾರ್ಗಗಳಲ್ಲಿ ಪ್ರಯಾಣಿಕರನ್ನು ರೈಲುಗಳಿಂದ ಇತರ ಮಾರ್ಗಗಳಿಗೆ ತಡೆರಹಿತ ವರ್ಗಾವಣೆ ಅವಕಾಶವನ್ನು ಕಲ್ಪಿಸಲಿದೆ.

  • Telangana | PM Narendra Modi to flag off Vande Bharat Express between Secunderabad and Tirupati today.

    PM will inaugurate and lay the foundation stone of projects worth over Rs 11,300 crores in Telangana today. pic.twitter.com/K5IqWDo8vu

ಪ್ರಧಾನಿ ಮೋದಿ ಅವರ ಭೇಟಿ ವೇಳೆ, ಹೈದರಾಬಾದ್-ಸಿಕಂದರಾಬಾದ್ ಅವಳಿ ನಗರ ಪ್ರದೇಶದ ಉಪನಗರ ವಿಭಾಗದಲ್ಲಿ 13 ಹೊಸ ಮಲ್ಟಿ - ಮೋಡಲ್ ಟ್ರಾನ್ಸ್‌ಪೋರ್ಟ್ ಸರ್ವಿಸ್ (ಎಂಎಂಟಿಎಸ್) ಸೇವೆಗಳನ್ನು ಫ್ಲ್ಯಾಗ್-ಆಫ್ ಮಾಡಲಿದ್ದಾರೆ. ಪ್ರಯಾಣಿಕರಿಗೆ ವೇಗದ, ಅನುಕೂಲಕರ ಮತ್ತು ಆರಾಮದಾಯಕ ಪ್ರಯಾಣದ ಆಯ್ಕೆಯನ್ನು ಒದಗಿಸುವ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ರೈಲ್ವೆಯ ಪತ್ರಿಕಾ ಪ್ರಕಟಣೆ ತಿಳಿಸಿದೆ.

ಇದೇ ವೇಳೆ ಮೋದಿ ಅವರು ಸಿಕಂದರಾಬಾದ್-ಮಹಬೂಬ್‌ನಗರ ದ್ವಿಗುಣ ಮತ್ತು ವಿದ್ಯುದ್ದೀಕರಣವನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. 85 ಕಿ.ಮೀ.ಗೂ ಹೆಚ್ಚು ದೂರದ ಯೋಜನೆಯನ್ನು ಸುಮಾರು 1,410 ಕೋಟಿ ರೂ ವೆಚ್ಚದಲ್ಲಿ ಕೈಗೊಳ್ಳಲಾಗಿದೆ.. ಈ ದ್ವಿಪಥ ತಡೆರಹಿತ ಸಂಪರ್ಕವನ್ನು ಒದಗಿಸುತ್ತದೆ.

ಸಾರ್ವಜನಿಕ ಸಭೆ ಉದ್ದೇಶಿಸಿ ಪ್ರಧಾನಿ ಭಾಷಣ: ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ ಬಳಿಕ ಪ್ರಧಾನಿ ಪರೇಡ್ ಮೈದಾನದಲ್ಲಿ ನಡೆಯುವ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಲಿದ್ದಾರೆ. ಇದೇ ವೇಳೆ, ಹೈದರಾಬಾದ್‌ನ ಬೀಬಿನಗರದ ಏಮ್ಸ್‌ನ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇದು ದೇಶದಾದ್ಯಂತ ಆರೋಗ್ಯ ಮೂಲಸೌಕರ್ಯವನ್ನು ಬಲಪಡಿಸುವ ಪ್ರಧಾನಮಂತ್ರಿಯವರ ಅಭಿಲಾಸೆಗೆ ಒತ್ತುಕೊಡಲಿದೆ.

1350 ಕೋಟಿ ರೂ ವೆಚ್ಚದಲ್ಲಿ ಬೀಬಿನಗರದಲ್ಲಿ ಏಮ್ಸ್​ ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಲಾಗಿದೆ. ಈ ಮೂಲಕ ತೆಲಂಗಾಣದ ಜನರಿಗೆ ಅವರ ಮನೆ ಬಾಗಿಲಿಗೆ ಸಮಗ್ರ, ಗುಣಮಟ್ಟದ ಆರೋಗ್ಯ ಸೇವೆಗಳನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ತೆಲಂಗಾಣದ ಕಾರ್ಯಕ್ರಮಗಳನ್ನು ಮುಗಿಸಿಕೊಂಡು ಅವರು ತಮಿಳುನಾಡಿಗೆ ಪ್ರಯಾಣ ಬೆಳಸಲಿದ್ದಾರೆ. ರಾತ್ರಿ ಕರ್ನಾಟಕಕ್ಕೂ ಪ್ರಧಾನಿ ಭೇಟಿ ನೀಡಲಿದ್ದಾರೆ.

ಇದನ್ನು ಓದಿ:ದೆಹಲಿ ತಲುಪಿದ ರಾಜ್ಯ ನಾಯಕರು: ನಡ್ಡಾ ನಿವಾಸದಲ್ಲಿ ಮಹತ್ವದ ಸಭೆ..!

Last Updated : Apr 8, 2023, 10:34 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.