ನವದೆಹಲಿ: ಇತ್ತೀಚೆಗಷ್ಟೇ ಯುರೋಪ್ ಪ್ರವಾಸ ಕೈಗೊಂಡಿದ್ದ ಪ್ರಧಾನಿ ಮೇ 16 ರಂದು ನೇಪಾಳ ಪ್ರವಾಸ ಕೈಗೊಳ್ಳಲಿದ್ದಾರೆ. ನೇಪಾಳದ ಪ್ರಧಾನಿ ಶೇರ್ ಬಹದ್ದೂರ್ ದೇವುಬಾ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಈ ಪ್ರವಾಸ ಕೈಗೊಳ್ಳಲಿದ್ದು, ಬುದ್ಧ ಪೂರ್ಣಿಮೆಯಂದು ಲುಂಬಿನಿಗೆ ಅಧಿಕೃತ ಭೇಟಿ ನೀಡಲಿದ್ದಾರೆ ವಿದೇಶಾಂಗ ಇಲಾಖೆ ಮಾಹಿತಿ ನೀಡಿದೆ. ಈ ಭೇಟಿಯು ಹಿಮಾಲಯ ರಾಷ್ಟ್ರದೊಂದಿಗೆ ಉತ್ತಮ ಸಂಬಂಧ ಮತ್ತು ರಾಜತಾಂತ್ರಿಕತೆ ಬಲ ಪಡಿಸುತ್ತದೆ ಎಂದು ಹೇಳಲಾಗುತ್ತಿದೆ.
ಪ್ರಧಾನಿ 2014 ರಲ್ಲಿ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ ಮಾಡಿದಾಗಿನಿಂದ ಇಲ್ಲಿಯವರೆಗೆ ನೇಪಾಳಕ್ಕೆ ಭೇಟಿ ನೀಡುತ್ತಿರುವ ಐದನೇ ಭೇಟಿಯಾಗಲಿದೆ. ಲುಂಬಿನಿಯಲ್ಲಿ ಪವಿತ್ರ ಮಾಯಾದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಧಾನಿ ವಿಶೇಷ ಪ್ರಾರ್ಥನೆ ಸಲ್ಲಿಕೆ ಮಾಡಲಿದ್ದಾರೆ. ನೇಪಾಳ ಸರ್ಕಾರದ ಅಧೀನದಲ್ಲಿರುವ ಲುಂಬಿನಿ ಡೆವಲಪ್‌ಮೆಂಟ್ ಟ್ರಸ್ಟ್ ಆಯೋಜಿಸಿರುವ ಬುದ್ಧ ಜಯಂತಿ ಕಾರ್ಯಕ್ರಮದಲ್ಲಿ ಅವರು ಭಾಷಣ ಮಾಡಲಿದ್ದಾರೆ.
ಪ್ರತ್ಯೇಕವಾಗಿ, ಲುಂಬಿನಿ ಮೊನಾಸ್ಟಿಕ್ ವಲಯದೊಳಗಿರುವ ನವದೆಹಲಿಯ ಅಂತಾರಾಷ್ಟ್ರೀಯ ಬೌದ್ಧ ಒಕ್ಕೂಟಕ್ಕೆ (ಐಬಿಸಿ) ಸೇರಿದ ಜಾಗದಲ್ಲಿ ಬೌದ್ಧ ಸಂಸ್ಕೃತಿ ಮತ್ತು ಪರಂಪರೆಯ ಕೇಂದ್ರದ ನಿರ್ಮಾಣಕ್ಕಾಗಿ ಶಿಲಾನ್ಯಾಸ ಸಮಾರಂಭದಲ್ಲಿ ಪ್ರಧಾನ ಮಂತ್ರಿಗಳು ಭಾಗವಹಿಸಲಿದ್ದಾರೆ.
ಇದನ್ನು ಓದಿ:ಮೈಸೂರಿಗೆ ಆಗಮಿಸಿ ತಂದೆ ಹುಟ್ಟುಹಬ್ಬ ಆಚರಿಸಿದ IMF ಪ್ರಥಮ ಉಪಮುಖ್ಯಸ್ಥೆ ಗೀತಾ ಗೋಪಿನಾಥ್