ನವದೆಹಲಿ: ದಕ್ಷಿಣ ಆಫ್ರಿಕಾದ ಅಧ್ಯಕ್ಷ ಮಟಮೇಲಾ ಸಿರಿಲ್ ರಾಮಫೋಸಾ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಅವರು 15 ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲು ಇಂದು ದಕ್ಷಿಣ ಆಫ್ರಿಕಾಕ್ಕೆ ತೆರಳಿದರು. ವಿಶೇಷ ವಿಮಾನದ ಮೂಲಕ ಅವರು ದಕ್ಷಿಣ ಆಫ್ರಿಕಾದ ಜೋಹಾನ್ಸ್ ಬರ್ಗ್ಗೆ ತೆರಳಿದರು. ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾವನ್ನು ಒಳಗೊಂಡಿರುವ ವಿಶ್ವ ಆರ್ಥಿಕತೆಯ ಗುಂಪಿಗೆ ಬ್ರಿಕ್ಸ್ ಎಂದು ಕರೆಯಲಾಗುತ್ತದೆ.
-
PM Narendra Modi embarks on four-day visit to South Africa, Greece
— ANI Digital (@ani_digital) August 22, 2023 " class="align-text-top noRightClick twitterSection" data="
Read @ANI Story | https://t.co/EUEWNg7Ibp#PMModi #BRICSSummit2023 #SouthAfrica #Greece pic.twitter.com/jRICc7PYFV
">PM Narendra Modi embarks on four-day visit to South Africa, Greece
— ANI Digital (@ani_digital) August 22, 2023
Read @ANI Story | https://t.co/EUEWNg7Ibp#PMModi #BRICSSummit2023 #SouthAfrica #Greece pic.twitter.com/jRICc7PYFVPM Narendra Modi embarks on four-day visit to South Africa, Greece
— ANI Digital (@ani_digital) August 22, 2023
Read @ANI Story | https://t.co/EUEWNg7Ibp#PMModi #BRICSSummit2023 #SouthAfrica #Greece pic.twitter.com/jRICc7PYFV
ಆಗಸ್ಟ್ 22 ರಿಂದ -24 ರವಗೆ ಬ್ರಿಕ್ಸ್ ಶೃಂಗಸಭೆ ನಡೆಯಲಿದೆ. ಬ್ರಿಕ್ಸ್ ಶೃಂಗದಲ್ಲಿ ಪಾಲ್ಗೊಳ್ಳುವುದಕ್ಕಾಗಿಯೇ ಪ್ರಧಾನಿ ಇಂದಿನಿಂದ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದ್ದಾರೆ. ಈ ಮೂಲಕ ಮೋದಿ ಆಫ್ರಿಕಾಕ್ಕೆ ಮೂರನೇ ಬಾರಿಗೆ ಭೇಟಿ ನೀಡುತ್ತಿದ್ದಾರೆ. ಈ ಪ್ರವಾಸವು ಭಾರತ ಮತ್ತು ದಕ್ಷಿಣ ಆಫ್ರಿಕಾ ರಾಷ್ಟ್ರಗಳ ನಡುವಣ ರಾಜತಾಂತ್ರಿಕ ಸಂಬಂಧಗಳ 30 ನೇ ವಾರ್ಷಿಕೋತ್ಸವದ ಪ್ರತೀಕವಾಗಿದೆ ಎಂದು ಬಣ್ಣಿಸಲಾಗುತ್ತಿದೆ.
ಈ ಬಾರಿಯ ಶೃಂಗಸಭೆಯ ನೇತೃತ್ವವನ್ನು ದಕ್ಷಿಣ ಆಫ್ರಿಕಾ ವಹಿಸಿಕೊಂಡಿದೆ. ಬ್ರಿಕ್ಸ್ ಅಧ್ಯಕ್ಷರು ಸಹ ಆಫ್ರಿಕಾದ ಅಧ್ಯಕ್ಷರೇ ಆಗಿದ್ದಾರೆ. ’’BRICS ಮತ್ತು ಆಫ್ರಿಕಾ: ಪರಸ್ಪರ ವೇಗವರ್ಧಿತ ಬೆಳವಣಿಗೆ ಹಾಗೂ ಸುಸ್ಥಿರ ಅಭಿವೃದ್ಧಿ ಮತ್ತು ಅಂತರ್ಗತ ಬಹುಪಕ್ಷೀಯತೆಗಾಗಿ ಪಾಲುದಾರಿಕೆ’’ ಎಂಬ ವಿಷಯವನ್ನು ಇಟ್ಟುಕೊಂಡು ಈ ಬಾರಿಯ ಶೃಂಗಸಭೆ ಆಯೋಜಿಸಲಾಗಿದೆ.
Covid-19 ಸಾಂಕ್ರಾಮಿಕದಿಂದಾಗಿ ಶೃಂಗಸಭೆ ವರ್ಚುಯಲ್ ಮೂಲಕವೇ ನಡೆದಿತ್ತು. ಕೋವಿಡ್ ಬಳಿಕ ಇದೇ ಮೊದಲ ಬಾರಿಗೆ ನೇರವಾದ ಸಭೆ ನಡೆಸಲಾಗುತ್ತಿದೆ. ಪ್ರಧಾನಿ ಮೋದಿ ಅವರ ದಕ್ಷಿಣ ಆಫ್ರಿಕಾ ಮತ್ತು ಗ್ರೀಸ್ ಪ್ರವಾಸ ಆರಂಭಕ್ಕೂ ಮುನ್ನ ಮಾತನಾಡಿರುವ ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರಾ, ಬ್ರಿಕ್ ಶೃಂಗದ ಆತಿಥ್ಯ ವಹಿಸಿಕೊಂಡಿರುವ ದಕ್ಷಿಣ ಆಫ್ರಿಕಾವು ಹೆಚ್ಚಿನ ಸಂಖ್ಯೆಯ ಅತಿಥಿಗಳನ್ನ ಆಹ್ವಾನಿಸಿದೆ. ಹಾಗಾಗಿ ಅದರಲ್ಲಿ ಭಾಗವಹಿಸುವ ಎಲ್ಲರೂ ಸಹಜವಾಗಿ ಬ್ರಿಕ್ಸ್ ಸದಸ್ಯರೇ ಆಗಿದ್ದಾರೆ ಎಂದಿದ್ದಾರೆ. ಇದೇ ವೇಳೆ, ಈ ಸಮ್ಮೇಳನದಲ್ಲಿ ಭಾಗವಹಿಸಲು ಭಾರತದಿಂದ ವ್ಯಾಪಾರ ನಿಯೋಗವು ತೆರಳುತ್ತಿದೆ ಎಂದು ಇದೇ ವೇಳೆ ಅವರು ಮಾಹಿತಿ ನೀಡಿದ್ದಾರೆ.
-
#WATCH | Delhi: Prime Minister Narendra Modi departs for Johannesburg, South Africa.
— ANI (@ANI) August 22, 2023 " class="align-text-top noRightClick twitterSection" data="
He is visiting South Africa from 22-24 August at the invitation of President Cyril Ramaphosa to attend the 15th BRICS Summit being held in Johannesburg under the South African Chairmanship. pic.twitter.com/hRy220autL
">#WATCH | Delhi: Prime Minister Narendra Modi departs for Johannesburg, South Africa.
— ANI (@ANI) August 22, 2023
He is visiting South Africa from 22-24 August at the invitation of President Cyril Ramaphosa to attend the 15th BRICS Summit being held in Johannesburg under the South African Chairmanship. pic.twitter.com/hRy220autL#WATCH | Delhi: Prime Minister Narendra Modi departs for Johannesburg, South Africa.
— ANI (@ANI) August 22, 2023
He is visiting South Africa from 22-24 August at the invitation of President Cyril Ramaphosa to attend the 15th BRICS Summit being held in Johannesburg under the South African Chairmanship. pic.twitter.com/hRy220autL
ಪ್ರಧಾನಿಯವರ ಭೇಟಿಯ ಕುರಿತು ವಿವರಗಳನ್ನು ನೀಡಿದ ವಿನಯ್ ಕ್ವಾತ್ರಾ, 15 ನೇ ಬ್ರಿಕ್ಸ್ ಶೃಂಗಸಭೆ ವೇಳೆ ವಾಣಿಜ್ಯೋದ್ಯಮ ಸಭೆಗಳು, ಬ್ರಿಕ್ಸ್ ವ್ಯಾಪಾರ ಮಂಡಳಿ, ಬ್ರಿಕ್ಸ್ ಮಹಿಳಾ ವ್ಯಾಪಾರ ಒಕ್ಕೂಟ ಸಭೆಗಳಲ್ಲಿ ಭಾರತದ ವ್ಯಾಪಾರ ಒಕ್ಕೂಟದ ನಿಯೋಗವು ಮಹತ್ವದ ಚರ್ಚೆಗಳಲ್ಲಿ ಭಾಗವಹಿಸಲಿದೆ ಎಂದಿದ್ದಾರೆ.
ಈ ಶೃಂಗಸಭೆಯಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕೂಡಾ ಭಾಗವಹಿಸಲಿದ್ದಾರೆ. ಇನ್ನು ರಷ್ಯಾದ ನಿಯೋಗದ ನೇತೃತ್ವವನ್ನು ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ವಹಿಸಲಿದ್ದಾರೆ. ಪ್ರಧಾನಿ ಮೋದಿ ಬ್ರಿಕ್ಸ್ ಶೃಂಗದ ಎಲ್ಲ ಕಾರ್ಯಕ್ರಮಗಳನ್ನು ಮುಗಿಸಿಕೊಂಡು ಆಗಸ್ಟ್ 25 ರಂದು ಗ್ರೀಸ್ ಪ್ರಧಾನಿಯ ಆಹ್ವಾನದ ಮೇರೆಗೆ ಅಧಿಕೃತ ಭೇಟಿಗಾಗಿ ಗ್ರೀಸ್‌ಗೆ ಪ್ರಯಾಣಿಸಲಿದ್ದಾರೆ ಎಂದು ಕ್ವಾತ್ರಾ ಮಾಹಿತಿ ನೀಡಿದ್ದಾರೆ.
ಇದನ್ನು ಓದಿ: 'ಇಂಡಿಯಾ'ದೊಳಗೆ ಕಾಂಗ್ರೆಸ್- ಆಪ್ ಕಿತ್ತಾಟ: ಮುಂಬೈ ಸಭೆಯಲ್ಲಿ ಪಕ್ಷ ಭಾಗಿ- ದೆಹಲಿ ಸಿಎಂ ಕೇಜ್ರಿವಾಲ್