ನವದೆಹಲಿ: ವಿವಿಧ ಇಲಾಖೆಗಳಲ್ಲಿ ಉದ್ಯೋಗ ದೊರಕಿರುವ 71 ಸಾವಿರ ಜನರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ 'ನೇಮಕಾತಿ ಪತ್ರ'ಗಳನ್ನು ವಿತರಿಸಿದರು. ದೇಶಾದ್ಯಂತ 45 ಸ್ಥಳಗಳಲ್ಲಿ ಈ ರೋಜ್‌ಗಾರ್ ಮೇಳ ನಡೆಯುತ್ತಿದೆ. ಕೇಂದ್ರ ಸರ್ಕಾರದ ಇಲಾಖೆಗಳು, ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿನ ಕೆಲವು ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
-
#WATCH | PM Narendra Modi distributes about 71,000 appointment letters to newly inducted recruits in Government departments and organisations, via video conferencing. https://t.co/pOfnKVO0E7 pic.twitter.com/22MzNagniq
— ANI (@ANI) May 16, 2023 " class="align-text-top noRightClick twitterSection" data="
">#WATCH | PM Narendra Modi distributes about 71,000 appointment letters to newly inducted recruits in Government departments and organisations, via video conferencing. https://t.co/pOfnKVO0E7 pic.twitter.com/22MzNagniq
— ANI (@ANI) May 16, 2023#WATCH | PM Narendra Modi distributes about 71,000 appointment letters to newly inducted recruits in Government departments and organisations, via video conferencing. https://t.co/pOfnKVO0E7 pic.twitter.com/22MzNagniq
— ANI (@ANI) May 16, 2023
ಇದನ್ನೂ ಓದಿ: ಕೇಂದ್ರದ ರೋಜಗಾರ್ ಮೇಳ: ರಾಜ್ಯದ ಸಾವಿರ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ವಿತರಣೆ
ದೇಶಾದ್ಯಂತ ಆಯ್ಕೆಯಾದ ಹೊಸ ನೇಮಕಾತಿಗಳು "ಗ್ರಾಮೀಣ ಡಾಕ್ ಸೇವಕ್(GDS), ಇನ್ಸ್‌ಪೆಕ್ಟರ್, ಕಮರ್ಷಿಯಲ್-ಕಮ್-ಟಿಕೆಟ್ ಕ್ಲರ್ಕ್, ಜೂನಿಯರ್ ಕ್ಲರ್ಕ್-ಕಮ್-ಟೈಪಿಸ್ಟ್, ಜೂನಿಯರ್ ಅಕೌಂಟ್ಸ್ ಕ್ಲರ್ಕ್, ಟ್ರ್ಯಾಕ್ ಮೇಂಟೇನರ್, ಅಸಿಸ್ಟೆಂಟ್ ಸೆಕ್ಷನ್ ಆಫೀಸರ್, ಕೆಳ ವಿಭಾಗದ ಗುಮಾಸ್ತ, ಉಪವಿಭಾಗಾಧಿಕಾರಿ, ತೆರಿಗೆ ಸಹಾಯಕರು, ಸಹಾಯಕ ಜಾರಿ ಅಧಿಕಾರಿ, ಇನ್ಸ್ಸ್ಪೆಕ್ಟರ್ಗಳು, ನರ್ಸಿಂಗ್ ಅಧಿಕಾರಿಗಳು, ಸಹಾಯಕ ಭದ್ರತಾ ಅಧಿಕಾರಿಗಳು, ಅಗ್ನಿಶಾಮಕ ಸಿಬ್ಬಂದಿ, ಸಹಾಯಕ ಲೆಕ್ಕಪರಿಶೋಧಕ ಅಧಿಕಾರಿ, ಸಹಾಯಕ ಲೆಕ್ಕಪರಿಶೋಧಕ ಅಧಿಕಾರಿ, ವಿಭಾಗೀಯ ಲೆಕ್ಕಾಧಿಕಾರಿ, ಲೆಕ್ಕ ಪರಿಶೋಧಕ, ಕಾನ್ಸ್ಟೇೆಬಲ್, ಹೆಡ್ ಕಾನ್ಸ್ಟೇೆಬಲ್, ಸಹಾಯಕ ಕಮಾಂಡೆಂಟ್, ಪ್ರಾಂಶುಪಾಲರು, ತರಬೇತಿ ಪಡೆದವರು ಪದವೀಧರ ಶಿಕ್ಷಕರು, ಸಹಾಯಕ ಕುಲಸಚಿವರು, ಸಹಾಯಕ ಪ್ರಾಧ್ಯಾಪಕರು ಸೇರಿದ್ದಾರೆ.
ಇದನ್ನೂ ಓದಿ: ಕೆಲಸಕ್ಕೆ ಅರ್ಜಿ ಸಲ್ಲಿಸಿ 14 ವರ್ಷದ ನಂತರ ನೇಮಕಾತಿ ಪತ್ರ ಪಡೆದ ಮಹಿಳೆ
ಉದ್ಯೋಗ ಸೃಷ್ಟಿಗೆ ಹೆಚ್ಚಿನ ಆದ್ಯತೆ ನೀಡುವ ಪ್ರಧಾನಮಂತ್ರಿಯವರ ಬದ್ಧತೆಯನ್ನು ಈಡೇರಿಸುವ ನಿಟ್ಟಿನಲ್ಲಿ ರೋಜ್‌ಗಾರ್ ಮೇಳವು ಒಂದು ಮಹತ್ವದ ಹೆಜ್ಜೆಯಾಗಿದೆ. ರೋಜ್‌ಗಾರ್ ಮೇಳವು ಮತ್ತಷ್ಟು ಉದ್ಯೋಗ ಸೃಷ್ಟಿಯಲ್ಲಿ ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಯುವಜನರಿಗೆ ಅವರ ಸಬಲೀಕರಣ ಮತ್ತು ರಾಷ್ಟ್ರೀಯ ಅಭಿವೃದ್ಧಿಯಲ್ಲಿ ಭಾಗವಹಿಸಲು ಅರ್ಥಪೂರ್ಣ ಅವಕಾಶಗಳನ್ನು ಒದಗಿಸುತ್ತದೆ ಎಂದು ಪ್ರಕಟಣೆ ತಿಳಿಸಿದೆ. ಹೊಸದಾಗಿ ಸೇರ್ಪಡೆಗೊಂಡವರು ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಹೊಸದಾಗಿ ನೇಮಕಗೊಂಡವರಿಗೆ ಆನ್‌ಲೈನ್ ಓರಿಯಂಟೇಶನ್ ಕೋರ್ಸ್ ಆಗಿರುವ ಕರ್ಮಯೋಗಿ ಪ್ರಾರಂಭ್ ಮೂಲಕ ತರಬೇತಿ ಪಡೆಯಲು ಅವಕಾಶವನ್ನು ಪಡೆಯುತ್ತಾರೆ.
ಇದನ್ನೂ ಓದಿ: ವಜಾಗೊಂಡಿದ್ದ ಸಾರಿಗೆ ಸಿಬ್ಬಂದಿಗೆ ಷರತ್ತು ವಿಧಿಸಿ ಮರು ನೇಮಕಾತಿ ಪತ್ರ ವಿತರಣೆ
ಏನಿದು ರೋಜ್‌ಗಾರ್ ಮೇಳ?: ಕೇಂದ್ರ ಸರ್ಕಾರ ಉದ್ಯೋಗ ಸೃಷ್ಟಿಮಾಡುವ ನಿಟ್ಟಿನಲ್ಲಿ ಯಾವುದೇ ಕೆಲಸ ಮಾಡಿಲ್ಲ. ಮೋದಿ ಸರ್ಕಾರ ಬಂದ ಬಳಿಕ ನಿರುದ್ಯೋಗ ಪ್ರಮಾಣ ಹೆಚ್ಚಾಗಿದೆ ಎಂದು ವಿಪಕ್ಷಗಳು ಈಗಾಗಲೇ ಸಾಕಷ್ಟು ಟೀಕೆಗಳನ್ನು ಮಾಡಿವೆ. ಈ ಹಿನ್ನೆಲೆಯಲ್ಲಿ 10 ಲಕ್ಷ ಉದ್ಯೋಗ ಸೃಷ್ಟಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ರೋಜ್‌ಗಾರ್ ಮೇಳ ಪ್ರಾರಂಭಿಸಿದೆ. ಕಳೆದ ವರ್ಷ ಅಕ್ಟೋಬರ್ 22 ರಂದು ಪ್ರಧಾನಿ ಮೋದಿ ಅವರು 'ರೋಜ್‌ಗಾರ್ ಮೇಳ'ಕ್ಕೆ ಚಾಲನೆ ನೀಡಿದ್ದರು.
ಇದನ್ನೂ ಓದಿ: ಕೇಂದ್ರದ ವಿವಿಧ ಹುದ್ದೆಗಳಿಗೆ ನೇಮಕಾತಿ: 71 ಸಾವಿರ ಮಂದಿಗೆ ಪ್ರಧಾನಿ ಮೋದಿಯಿಂದ ನೇಮಕಾತಿ ಪತ್ರ