ETV Bharat / bharat

Maulana Abul Kalam Azad: ಆಜಾದ್ ಜನ್ಮದಿನ.. ಗೌರವ ನಮನ ಸಲ್ಲಿಸಿದ ಪ್ರಧಾನಿ ಮೋದಿ - ರಾಷ್ಟ್ರೀಯ ಶಿಕ್ಷಣ ದಿನ

ದೇಶದ ಮೊದಲ ಶಿಕ್ಷಣ ಸಚಿವ ಮೌಲಾನಾ ಅಬುಲ್ ಕಲಾಂ ಆಜಾದ್ (Maulana Abul Kalam Azad) ಅವರ ಜನ್ಮದಿನವಾದ ನಿಮಿತ್ತ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರಿಗೆ ಗೌರವ ನಮನ ಸಲ್ಲಿಸಿದರು.

PM Modi
ಪ್ರಧಾನಿ ನರೇಂದ್ರ ಮೋದಿ
author img

By

Published : Nov 11, 2021, 9:44 AM IST

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Prime Minister Narendra Modi)) ಅವರು ಗುರುವಾರ ದೇಶದ ಮೊದಲ ಶಿಕ್ಷಣ ಸಚಿವ ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ಜನ್ಮದಿನದ ನಿಮಿತ್ತ ಅವರಿಗೆ ಗೌರವ ಸಲ್ಲಿಸಿದ್ದಾರೆ. ಮತ್ತು ಸ್ವಾತಂತ್ರ್ಯ ಹೋರಾಟದಲ್ಲಿ ಅವರ ಪಾತ್ರ ಸ್ಪೂರ್ತಿದಾಯಕವಾಗಿದೆ ಎಂದು ಶ್ಲಾಘಿಸಿದ್ದಾರೆ.

ಮೌಲಾನಾ ಅಬುಲ್ ಕಲಾಂ ಆಜಾದ್ (Maulana Abul Kalam Azad) ಅವರು 'ಓರ್ವ ಮಾರ್ಗದರ್ಶಕ ಮತ್ತು ಬುದ್ಧಿಜೀವಿ. ಸ್ವಾತಂತ್ರ್ಯ ಹೋರಾಟದಲ್ಲಿ ಅವರ ಪಾತ್ರ ಸ್ಪೂರ್ತಿದಾಯಕವಾಗಿದೆ. ಅವರು ಶಿಕ್ಷಣ ಕ್ಷೇತ್ರದ ಬಗ್ಗೆ ಉತ್ಸುಕರಾಗಿದ್ದರು ಮತ್ತು ಸಮಾಜದಲ್ಲಿ ಸಹೋದರತ್ವದ ಭಾವನೆ ಹೆಚ್ಚಿಸಲು ಶ್ರಮಿಸಿದ್ದರು' ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ಕೇಂದ್ರ ಸಚಿವ ನಿತಿನ್ ಗಡ್ಕರಿ (itin Gadkari ) ಕೂಡ ಆಜಾದ್ ಅವರ ಜನ್ಮದಿನದಂದು ಅವರಿಗೆ ಗೌರವ ಸಲ್ಲಿಸಿದ್ದಾರೆ. 'ಸ್ವತಂತ್ರ ಭಾರತದ ಮೊದಲ ಶಿಕ್ಷಣ ಸಚಿವರು ಮತ್ತು ಭಾರತ ರತ್ನ ಪ್ರಶಸ್ತಿ ಪುರಸ್ಕೃತರಾದ ಮೌಲಾನಾ ಅಬುಲ್ ಕಲಾಂ ಆಜಾದ್ ಜಿ (Maulana Abul Kalam Azad) ಅವರಿಗೆ ಅವರ ಜನ್ಮ ವಾರ್ಷಿಕೋತ್ಸವದಂದು ನಮನಗಳು. ರಾಷ್ಟ್ರೀಯ ಶಿಕ್ಷಣ ದಿನದ ಶುಭಾಶಯಗಳು' ಎಂದು ಗಡ್ಕರಿ ಟ್ವೀಟ್ ಮಾಡಿ, 'ರಾಷ್ಟ್ರೀಯ ಶಿಕ್ಷಣ ದಿನ' (NationalEducationDay) ಎಂದು ಹ್ಯಾಶ್‌ಟ್ಯಾಗ್ ಹಾಕಿದ್ದಾರೆ.

ರಾಷ್ಟ್ರೀಯ ಶಿಕ್ಷಣ ದಿನ (NationalEducationDay) ಅಥವಾ ರಾಷ್ಟ್ರೀಯ ಶಿಕ್ಷಾ ದಿವಸ್ (Rashtriya Shiksha Diwas ) ಅನ್ನು ಪ್ರತಿ ವರ್ಷ ನ.11 ರಂದು ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ಜನ್ಮದಿನದಂದು ಆಚರಿಸಲಾಗುತ್ತದೆ.

ಇದನ್ನೂ ಓದಿ: onake obavva Jayanthi: ಇಂದು ಒನಕೆ ಓಬವ್ವ ಜಯಂತಿ... ಶುಭ ಕೋರಿದ ಅನೇಕ ಗಣ್ಯರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.