ETV Bharat / bharat

ನಾರಿಶಕ್ತಿಯಿಂದ ಸೇನೆಯ ಜೊತೆಗೆ ದೇಶದ ಬಲವೂ ವೃದ್ಧಿ: ಪ್ರಧಾನಿ ಮೋದಿ

ಭಾರತೀಯ ಸೇನಾ ಪಡೆಗಳಲ್ಲಿ ಮಹಿಳಾಧಿಕಾರಿಗಳ ನೇಮಕದಿಂದ ಸೇನೆಯ ಜೊತೆಗೆ ದೇಶದ ಬಲವೂ ಹೆಚ್ಚುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

pm-modi-on-women-officers-in-army
ಪ್ರಧಾನಿ ಮೋದಿ
author img

By

Published : Oct 24, 2022, 3:44 PM IST

ಕಾರ್ಗಿಲ್ (ಲಡಾಖ್): ಸೈನಿಕರೊಂದಿಗೆ ದೀಪಾವಳಿ ಆಚರಿಸಲು ಕಾರ್ಗಿಲ್​ಗೆ ಬಂದಿರುವ ಪ್ರಧಾನಿ ನರೇಂದ್ರ ಮೋದಿ ಅವರು, ವೀರಯೋಧರ ಜೊತೆ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಅವರು, "ಸಶಸ್ತ್ರ ಪಡೆಗಳಿಗೆ ನಾರಿ ಶಕ್ತಿ ಬೇಕು. ಮಹಿಳಾ ಅಧಿಕಾರಿಗಳ ಸೇರ್ಪಡೆಯಿಂದ ಸೇನೆಯ ಜೊತೆಗೆ, ದೇಶದ ಶಕ್ತಿಯೂ ಹೆಚ್ಚುತ್ತದೆ" ಎಂದರು.

ಸಶಸ್ತ್ರ ಪಡೆಗಳಲ್ಲಾದ ಸುಧಾರಣೆಗಳ ಬಗ್ಗೆ ಮಾತನಾಡುತ್ತಾ, ಶಾಶ್ವತ ಆಯೋಗದ ಅಡಿಯಲ್ಲಿ ಸೇನೆಗೆ ಮಹಿಳಾ ಅಧಿಕಾರಿಗಳನ್ನು ನೇಮಿಸಲಾಗಿದೆ. ಇದು ಸೇನೆಯಲ್ಲಾದ ಮಹತ್ತರವಾದ ಸುಧಾರಣೆ. ಕಳೆದ 8 ವರ್ಷಗಳಲ್ಲಿ ಸರ್ಕಾರ ಸಶಸ್ತ್ರ ಪಡೆಗಳಲ್ಲಿ ಸುಧಾರಣೆಗಳನ್ನು ಜಾರಿಗೆ ತರಲು ಕೇಂದ್ರ ಒತ್ತು ನೀಡಿದೆ. ಸಶಸ್ತ್ರ ಪಡೆಗಳಲ್ಲಿ ಮಹಿಳೆಯರಿಗೆ ಸ್ಥಾನಗಳನ್ನು ಮೀಸಲಿಟ್ಟಿದ್ದೇವೆ ಎಂದು ತಿಳಿಸಿದರು.

ಸೇನೆಯೇ ನನ್ನ ಕುಟುಂಬ: ಹಲವು ವರ್ಷಗಳಿಂದ ಸೇನಾಪಡೆಯೇ ನನ್ನ ಕುಟುಂಬವಾಗಿದೆ. ಕಾರ್ಗಿಲ್‌ನಲ್ಲಿ ನಿಮ್ಮೊಂದಿಗೆ ದೀಪಾವಳಿ ಆಚರಣೆ ಮಾಡುವುದೇ ನನಗೆ ಸೌಭಾಗ್ಯದ ಸಂಗತಿ ಎಂದು ಮೋದಿ ಹರ್ಷ ವ್ಯಕ್ತಪಡಿಸಿದರು.

ಸಶಸ್ತ್ರ ಪಡೆಗಳು ದೇಶದ ಸುರಕ್ಷತೆ ಮತ್ತು ಭದ್ರತೆಯ ಆಧಾರಸ್ತಂಭವಾಗಿದೆ. ಗಡಿ ಸುರಕ್ಷಿತವಾಗಿದ್ದಾಗ ಮಾತ್ರ ರಾಷ್ಟ್ರ ಸುಭಿಕ್ಷವಾಗಿರುತ್ತದೆ. ಆರ್ಥಿಕತೆ ವೃದ್ಧಿಸಿ, ನಾಗರಿಕ ಸಮಾಜ ಆತ್ಮವಿಶ್ವಾಸದಿಂದ ಬದುಕಲು ಸಾಧ್ಯ. ಬೆಳಕಿನ ಹಬ್ಬ ದೀಪಾವಳಿ ವಿಶ್ವಕ್ಕೇ ಶಾಂತಿ, ದಯೆ ಪಾಲಿಸಲಿ ಎಂದು ಅವರು ಇದೇ ವೇಳೆ ಹಾರೈಸಿದರು.

ಎಂದೂ ಮರೆಯದ ವಿಜಯದ ದೀಪಾವಳಿ: ವಿಜಯದ ಸ್ಥಳವಾದ ಕಾರ್ಗಿಲ್​ನಿಂದ ನಾನು ದೇಶವಾಸಿಗಳಿಗೆ ದೀಪಾವಳಿ ಹಬ್ಬದ ಶುಭಾಶಯಗಳನ್ನು ಕೋರುವೆ. ದೀಪಾವಳಿ ಎಂದರೆ ಭಯೋತ್ಪಾದನೆಯ ಅಂತ್ಯದ ಹಬ್ಬ. ಅದನ್ನು ನಮ್ಮ ಯೋಧರು ಹಲವು ವರ್ಷಗಳ ಹಿಂದೆಯೇ ಆಚರಿಸಿ ತೋರಿಸಿದ್ದಾರೆ ಎಂದು ಪಾಕಿಸ್ತಾನ ವಿರುದ್ಧದ ಕಾರ್ಗಿಲ್​ ವಿಜಯವನ್ನು ಸ್ಮರಿಸಿದರು. ದೇಶದ ಜನರು ಸೇನೆ ಆಚರಿಸಿದ ವಿಜಯದ ದೀಪಾವಳಿಯನ್ನು ಎಂದಿಗೂ ನೆನಪಿಟ್ಟಿರುತ್ತಾರೆ ಎಂದು ಇದೇ ವೇಳೆ ಹೇಳಿದರು.

ಇದನ್ನೂ ಓದಿ: ಯುದ್ಧ ನಮ್ಮ ಮೊದಲ ಆಯ್ಕೆ ಅಲ್ಲ, ಕೆಣಕಿದರೆ ಪರಿಣಾಮ ನೆಟ್ಟಗಿರಲ್ಲ: ಪ್ರಧಾನಿ ಮೋದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.