ETV Bharat / bharat

ಗುಜರಾತ್​ನಲ್ಲಿ ಬಿಜೆಪಿ ಪ್ರಚಾರ ಅಬ್ಬರ.. ಮತದಾರರನ್ನು ಆಕರ್ಷಿಸಿದ ಮೋದಿ ತದ್ರೂಪಿ ಲಾಲ್ಜಿ ದೇವಾರಿಯಾ

author img

By

Published : Nov 29, 2022, 4:11 PM IST

Updated : Nov 29, 2022, 4:51 PM IST

ಕಛ್‌ನ ಅಂಜಾರ್‌ನಲ್ಲಿ ಮೋದಿ ಬಿರುಸಿನ ಚುನಾವಣೆ ಪ್ರಚಾರ ಕೈಗೊಂಡಿದ್ದರೆ, ಇತ್ತ ಮೋದಿಯಂತೆ ಕಾಣುವ ಲಾಲ್ಜಿ ದೇವಾರಿಯಾ ತಮ್ಮ ಚೇಷ್ಟೆಗಳಿಂದ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿ ಆಕರ್ಷಣೆಯ ಕೇಂದ್ರಬಿಂದುವಾದರು.

Lalji Dewaria is attractive as Modi
ಮೋದಿಯಂತೆ ಕಂಗೊಳಿಸಿ ಆಕರ್ಷಿಸಿದ ಲಾಲ್ಜಿ ದೇವಾರಿಯಾ

ಕಚ್ (ಅಂಜಾರ್): ವಿಧಾನಸಭಾ ಚುನಾವಣೆ ದಿನಗಳು ಸಮೀಪ ಬರುತ್ತಿದ್ದಂತೆ ಗುಜರಾತ್‌ನ ಹಲವು ಭಾಗಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಬ್ಬರದ ಪ್ರಚಾರವು ಸುಂಟರಗಾಳಿಯಂತೆ ಅಪ್ಪಳಿಸಿದೆ. ಮೋದಿ ಅವರು ಕಚ್‌ನ 6 ವಿಧಾನಸಭಾ ಕ್ಷೇತ್ರಗಳಲ್ಲಿ ಬಿರುಸಿನ ಪ್ರಚಾರ ಕೈಗೊಂಡಿದ್ದು, ಈ ವೇಳೆ ಕಛ್‌ನ ಅಂಜಾರ್‌ನಲ್ಲಿ ಪ್ರಧಾನಿ ಅವರ ತದ್ರೂಪಿಯಂತಿರುವ ಲಾಲ್ಜಿ ದೇವಾರಿಯಾ ತಮ್ಮ ಚೇಷ್ಟೆಗಳಿಂದ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿ ಆಕರ್ಷಣೆಯ ಕೇಂದ್ರಬಿಂದುವಾದರು.

ಅಪಾರ ಜನಸಮೂಹ ನಡುವೆಯೂ ಲಾಲ್ಜಿ ದೇವಾರಿಯಾ ಮೋದಿ ತರಹ ಸನ್ನೆ, ವಿಜಯದ ಚಿಹ್ನೆ ತೋರಿಸಿ ಪ್ರೇಕ್ಷಕರ ಹೃದಯ ಗೆದ್ದರು. ಬಹಳಷ್ಟು ಬಿಜೆಪಿ ಕಾರ್ಯಕರ್ತರು ಲಾಲ್ಜಿ ದೇವರಿಯಾ ಜತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡರು. ಅತ್ತ ‘ಮೋದಿ, ಮೋದಿ...’ ಘೋಷಣೆಗಳು ಚುನಾವಣಾ ರ್ಯಾಲಿಯಲ್ಲಿ ಪ್ರತಿಧ್ವನಿಸುತ್ತಿದ್ದವು. ಇತ್ತ ಲಾಲ್ಜಿ ದೇವರಿಯಾ ಜನರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು.

ಮತದಾರರನ್ನು ಆಕರ್ಷಿಸಿದ ಮೋದಿ ತದ್ರೂಪಿ ಲಾಲ್ಜಿ ದೇವಾರಿಯಾ

ಮೋದಿಯ ಲುಕ್ ಹೋಲುವ ಮಾಸ್​ ಪ್ರಚಾರಕ ಲಾಲ್ಜಿ ದೇವಾರಿಯಾ ಅವರ ಕೈಕುಲುಕಲು ಬಿಜೆಪಿ ಕಾರ್ಯಕರ್ತರು ಮುಗಿಬಿದ್ದಿದ್ದರು. ಮೋದಿ ಇಲ್ಲಿಗೆ ಬರುವ ಅವಶ್ಯಕತೆ ಇಲ್ಲ. ಕಚ್‌ನಲ್ಲಿ ಬಿಜೆಪಿ 6ಕ್ಕೆ ಆರೂ ಸ್ಥಾನಗಳನ್ನು ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಲಾಲ್ಜಿ ದೇವರಿಯಾ ಸಂವಾದದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ:ಸೈಲೆಂಟ್ ಸುನೀಲ್ ಬಿಜೆಪಿ ಸೇರ್ಪಡೆಗೆ ಅವಕಾಶವಿಲ್ಲ : ನಳಿನ್‍ಕುಮಾರ್ ಕಟೀಲ್

Last Updated : Nov 29, 2022, 4:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.