ETV Bharat / bharat

100 ಕೋಟಿ ವ್ಯಾಕ್ಸಿನೇಷನ್... ಆರೋಗ್ಯ ಕಾರ್ಯಕರ್ತರಿಗೆ ಭಾರತ ಸೆಲ್ಯೂಟ್: ಮೋದಿ ಮನ್​ ಕಿ ಬಾತ್​

100 ಕೋಟಿಗೂ ಹೆಚ್ಚು ಕೋವಿಡ್-19 ಲಸಿಕೆಯ ಡೋಸ್​ ನೀಡಿದ ಬಳಿಕ ಭಾರತ ಹೊಸ ಉತ್ಸಾಹ, ಹೊಸ ಶಕ್ತಿಯೊಂದಿಗೆ ಮುನ್ನಡೆಯುತ್ತಿದೆ ಎಂದು ಪಿಎಂ ಮೋದಿ ಹೇಳಿದ್ದಾರೆ.

Prime Minister Narendra Modi
Prime Minister Narendra Modi
author img

By

Published : Oct 24, 2021, 3:08 PM IST

ನವದೆಹಲಿ: 10 ತಿಂಗಳ ಅವಧಿಯಲ್ಲಿ ಕೋವಿಡ್​ ಲಸಿಕೆಯ 100 ಕೋಟಿಗೂ ಅಧಿಕ ಡೋಸ್ ನೀಡುವ ಮೂಲಕ ಭಾರತ ಮೈಲಿಗಲ್ಲು ಸಾಧಿಸಿದ್ದು, ಆರೋಗ್ಯ ಕಾರ್ಯಕರ್ತರ ಕೊಡುಗೆಯನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.

ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ 'ಮನ್ ಕಿ ಬಾತ್​​'ನ 82ನೇ ಆವೃತ್ತಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಭಾರತ ನಮ್ಮ ಆರೋಗ್ಯ ಕಾರ್ಯಕರ್ತರಿಗೆ ಸೆಲ್ಯೂಟ್ ಮಾಡುತ್ತದೆ. ನನ್ನ ದೇಶ, ನನ್ನ ದೇಶದ ಜನರ ಸಾಮರ್ಥ್ಯಗಳ ಬಗ್ಗೆ ನನಗೆ ಚೆನ್ನಾಗಿ ತಿಳಿದಿದೆ. ನಮ್ಮ ಆರೋಗ್ಯ ಕಾರ್ಯಕರ್ತರು ನಮ್ಮ ದೇಶವಾಸಿಗಳಿಗೆ ಲಸಿಕೆ ಹಾಕುವಲ್ಲಿ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುತ್ತಾರೆಂದು ಎಂದು ನನಗೆ ತಿಳಿದಿತ್ತು ಎಂದು ಹೇಳಿದರು.

100 ಕೋಟಿಗೂ ಹೆಚ್ಚು ಕೋವಿಡ್-19 ಲಸಿಕೆಯ ಡೋಸ್​ ನೀಡಿದ ಬಳಿಕ ಭಾರತ ಹೊಸ ಉತ್ಸಾಹ, ಶಕ್ತಿಯೊಂದಿಗೆ ಮುನ್ನಡೆಯುತ್ತಿದೆ. ನಮ್ಮ ಲಸಿಕಾ ಕಾರ್ಯಕ್ರಮದ ಯಶಸ್ಸು ಭಾರತದ ಸಾಮರ್ಥ್ಯವನ್ನು ತೋರಿಸುತ್ತದೆ, ಪ್ರತಿಯೊಬ್ಬರ ಪ್ರಯತ್ನದ ಶಕ್ತಿಯನ್ನು ತೋರಿಸುತ್ತದೆ ಎಂದರು.

ಡ್ರೋನ್‌ಗಳ ಸಹಾಯದಿಂದ ಹಳ್ಳಿಗಳಲ್ಲಿ ಡಿಜಿಟಲ್ ಭೂ ದಾಖಲೆ:

ಈ ವರ್ಷ ಆಗಸ್ಟ್ 25 ರಂದು, ದೇಶವು ಪ್ರಸ್ತುತ ಮತ್ತು ಭವಿಷ್ಯದ ಸಾಧ್ಯತೆಗಳಿಗೆ ಅನುಗುಣವಾಗಿ ಹೊಸ ಡ್ರೋನ್ ನೀತಿಯನ್ನು ತಂದಿತು. ಡ್ರೋನ್ ವಲಯವು ಹಲವಾರು ನಿರ್ಬಂಧಗಳು ಮತ್ತು ನಿಬಂಧನೆಗಳಿಂದ ತುಂಬಿತ್ತು. ಇದು ಹೊಸ ಡ್ರೋನ್ ನೀತಿಯಿಂದ ಬದಲಾಗಿದೆ. ದೇಶದಲ್ಲಿ ಹೊಸ ಡ್ರೋನ್ ನೀತಿಯು ಈಗಾಗಲೇ ಉತ್ತಮ ಫಲಿತಾಂಶಗಳನ್ನು ತೋರಿಸುತ್ತಿದೆ ಎಂದು ತಿಳಿಸಿದರು.

ಜನರ ಕಲ್ಪನೆಯನ್ನು ಸೆರೆಹಿಡಿಯುವ ವಿಷಯವೆಂದರೆ ಭಾರತದಲ್ಲಿ ಡ್ರೋನ್‌ಗಳ ಬಳಕೆಯಾಗಿದೆ. ಯುವಕರು ಮತ್ತು ಸ್ಟಾರ್ಟ್‌ಅಪ್‌ಗಳ ಪ್ರಪಂಚವು ಈ ವಿಷಯದ ಬಗ್ಗೆ ಬಹಳ ಆಸಕ್ತಿ ಹೊಂದಿದೆ. ಡ್ರೋನ್‌ಗಳ ಸಹಾಯದಿಂದ ಗ್ರಾಮಗಳಲ್ಲಿನ ಭೂಮಿಯ ಡಿಜಿಟಲ್ ದಾಖಲೆಗಳನ್ನು ಸಿದ್ಧಪಡಿಸುತ್ತಿರುವ ವಿಶ್ವದ ಮೊದಲ ರಾಷ್ಟ್ರಗಳಲ್ಲಿ ಭಾರತವು ಒಂದು ಎಂದು ಎತ್ತಿ ತೋರಿಸಿದೆ. ಲಸಿಕಾ ಅಭಿಯಾನದಲ್ಲೂ ಡ್ರೋನ್​ಗಳು ವಿಶೇಷ ಪಾತ್ರ ನಿರ್ವಹಿಸುತ್ತಿವೆ ಎಂದು ಮೋದಿ ತಿಳಿಸಿದರು.

ಹಬ್ಬದ ವೇಳೆ 'ವೋಕಲ್​ ಫಾರ್​ ಲೋಕಲ್​' ಮಂತ್ರ:

ಮುಂಬರುವ ಹಬ್ಬಗಳಿಗಾಗಿ ಶಾಪಿಂಗ್ ಮಾಡುವಾಗ ಸ್ಥಳೀಯರು ತಯಾರಿಸಿದ ವಸ್ತುಗಳನ್ನು ಖರೀದಿಸಿ, 'ವೋಕಲ್​ ಫಾರ್​ ಲೋಕಲ್​' ಮಂತ್ರ ಪಾಲಿಸಿ. 'ಮೇಡ್ ಇನ್ ಇಂಡಿಯಾ' ಉತ್ಪನ್ನವನ್ನು ಖರೀದಿಸಿದರೆ, ಸಣ್ಣ-ಪುಟ್ಟ ಬಡ ವ್ಯಾಪಾರಿಗಳ ಮನೆ ಬೆಳಗುತ್ತದೆ. ನೀವು ಅವರಿಂದ ಖರೀದಿಸುವ ಸ್ಥಳೀಯ ಉತ್ಪನ್ನಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಿ ಎಂದು ಪಿಎಂ ಮನವಿ ಮಾಡಿದರು.

ಸ್ವಚ್ಛ ಭಾರತ ಅಭಿಯಾನ:

ಅದರಂತೆಯೇ ಹಬ್ಬದ ವೇಳೆಯಲ್ಲಿ ಶುಚಿತ್ವಕ್ಕೆ ಆದ್ಯತೆ ನೀಡಿ. ನಿಮ್ಮ ಮನೆ ಹಾಗೂ ನೆರೆಹೊರೆಯ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡಿ. ಮುಖ್ಯವಾಗಿ ಏಕ-ಬಳಕೆಯ ಪ್ಲಾಸ್ಟಿಕ್​​ ಬಳಸದಿರಿ. ನಾವೆಲ್ಲರೂ ಒಂದಾದಾಗ ಮಾತ್ರ ದೇಶವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಬಹುದು ಎಂದು 'ಸ್ವಚ್ಛ ಭಾರತ ಅಭಿಯಾನ'ದ ಮಹತ್ವವನ್ನು ಮತ್ತೊಮ್ಮೆ ನೆನಪಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.