ETV Bharat / bharat

ಪ್ರಾದೇಶಿಕ ಭಾಷೆಗಳಲ್ಲಿಯೂ ಸುಪ್ರೀಂ ಕೋರ್ಟ್‌ ತೀರ್ಪು: ಸಿಜೆಐ ಅಭಿಪ್ರಾಯ ಶ್ಲಾಘಿಸಿದ ಪ್ರಧಾನಿ ಮೋದಿ

ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಗಣನೀಯ ಬದಲಾವಣೆಗೆ ಮುಂದಾಗುತ್ತಿರುವ ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಪ್ರಮುಖ ವಿಚಾರವೊಂದಕ್ಕೆ ಶ್ಲಾಘಿಸಿದ್ದಾರೆ.

PM Modi lauds CJI Chandrachud SC judgments copy  SC judgments available in regional languages  CJI Chandrachud  ಸುಪ್ರೀಂ ತೀರ್ಪುಗಳು ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯ  ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಾಗುವಂತೆ ಮಾಡುವ ಪ್ರಯತ್ನ  ಸಿಜೆಐರನ್ನು ಶ್ಲಾಘಿಸಿದ ಪ್ರಧಾನಿ  ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್  ಪ್ರಧಾನಿ ನರೇಂದ್ರ ಮೋದಿ  ಸುಪ್ರೀಂ ಕೋರ್ಟ್‌ನ ತೀರ್ಪು  ಭಾರತದ ಭಾಷಾ ವೈವಿಧ್ಯತೆ  ಕೋರ್ಟ್ ತೀರ್ಪುಗಳನ್ನು ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯ  ಸುಪ್ರೀಂ ಕೋರ್ಟ್‌ನ ತೀರ್ಪುಗಳನ್ನು ಭಾಷಾಂತರಿಸಲು  ಕೌನ್ಸಿಲ್‌ನ ಫೆಸಿಲಿಟೇಶನ್ ಸಮಾರಂಭ  ಆರ್ಟಿಫಿಶಿಯಲ್ ಇಂಟೆಲಿಜೆನ್ಸ್
ಸಿಜೆಐರನ್ನು ಶ್ಲಾಘಿಸಿದ ಪ್ರಧಾನಿ
author img

By

Published : Jan 23, 2023, 8:21 AM IST

ನವದೆಹಲಿ: ಸುಪ್ರೀಂ ಕೋರ್ಟ್ ತೀರ್ಪುಗಳು ಪ್ರಾದೇಶಿಕ ಭಾಷೆಗಳಲ್ಲಿಯೂ ಲಭ್ಯವಾಗುವಂತೆ ಮಾಡುವ ಬಗೆಗಿನ ಭಾರತದ ಮುಖ್ಯ ನ್ಯಾಯಮೂರ್ತಿ(ಸಿಜೆಐ) ಡಿ.ವೈ.ಚಂದ್ರಚೂಡ್ ಅವರ ಅಭಿಪ್ರಾಯವನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ಇತ್ತೀಚೆಗೆ ನಡೆದ ಸಮಾರಂಭವೊಂದರಲ್ಲಿ ಮಾತನಾಡಿದ ಸಿಜೆಐ, ಪ್ರತಿ ಭಾರತೀಯನಿಗೆ ತಮ್ಮದೇ ಆದ ಭಾಷೆಯಲ್ಲಿ ಸುಪ್ರೀಂ ಕೋರ್ಟ್‌ ತೀರ್ಪುಗಳು ದೊರೆಯಬೇಕು ಎಂದಿದ್ದರು. ಈ ಕುರಿತ ವಿಡಿಯೋವನ್ನು ಪ್ರಧಾನಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಪ್ರಾದೇಶಿಕ ಭಾಷೆಗಳಲ್ಲಿ ಸುಪ್ರೀಂ ಕೋರ್ಟ್‌ ತೀರ್ಪುಗಳು ಲಭ್ಯವಾಗುವಂತೆ ಕೆಲಸ ಮಾಡುವ ಅಗತ್ಯತೆಯ ಬಗ್ಗೆ ನ್ಯಾ.ಚಂದ್ರಚೂಡ್ ಹೇಳಿದ್ದರು. ತೀರ್ಪುಗಳನ್ನು ಭಾಷಾಂತರಗೊಳಿಸುವ ಅಗತ್ಯತೆ ಇದ್ದಲ್ಲಿ ತಂತ್ರಜ್ಞಾನವನ್ನು ಬಳಸಿಕೊಳ್ಳುವಂತೆಯೂ ಅವರು ಸೂಚಿಸಿದ್ದರು. "ಇದು ಶ್ಲಾಘನೀಯ ಚಿಂತನೆ. ಅನೇಕರಿಗೆ, ವಿಶೇಷವಾಗಿ ಯುವಕರಿಗೆ ಸಹಾಯವಾಗುತ್ತದೆ" ಎಂದು ಪ್ರಧಾನಿ ಮೋದಿ ಟ್ವೀಟ್​ ಮೂಲಕ ಪ್ರತಿಕ್ರಿಯಿಸಿದ್ದರು.

  • At a recent function, the Hon’ble CJI Justice DY Chandrachud spoke of the need to work towards making SC judgments available in regional languages. He also suggested the use of technology for it. This is a laudatory thought, which will help many people, particularly youngsters. pic.twitter.com/JQTXCI9gw0

    — Narendra Modi (@narendramodi) January 22, 2023 " class="align-text-top noRightClick twitterSection" data=" ">

ವೈದ್ಯಕೀಯ ಮತ್ತು ಎಂಜಿನಿಯರಿಂಗ್‌ನಂತಹ ತಾಂತ್ರಿಕ ಶಿಕ್ಷಣವನ್ನು ಪ್ರಾದೇಶಿಕ ಭಾಷೆಗಳಲ್ಲಿಯೂ ಲಭ್ಯವಾಗುವಂತೆ ಮಾಡಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ. ಭಾರತವು ಹಲವಾರು ಭಾಷೆಗಳನ್ನು ಹೊಂದಿದೆ. ಇದು ನಮ್ಮ ಸಾಂಸ್ಕೃತಿಕ ಕಂಪು ಎಲ್ಲೆಡೆ ಪಸರಿಸುತ್ತದೆ. ಮಾತೃ ಭಾಷೆಯಲ್ಲಿ ಎಂಜಿನಿಯರಿಂಗ್ ಮತ್ತು ವೈದ್ಯಕೀಯದಂತಹ ವಿಷಯಗಳನ್ನು ಅಧ್ಯಯನ ಮಾಡುವ ಆಯ್ಕೆಯನ್ನು ನೀಡುವುದೂ ಸೇರಿದಂತೆ ಭಾರತೀಯ ಭಾಷೆಗಳನ್ನು ಪ್ರೋತ್ಸಾಹಿಸಲು ಕೇಂದ್ರ ಅನೇಕ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಪ್ರಧಾನಿ ತಿಳಿಸಿದ್ದರು.

ಮಹಾರಾಷ್ಟ್ರ ಮತ್ತು ಗೋವಾದ ಬಾರ್ ಕೌನ್ಸಿಲ್‌ನಿಂದ ನಡೆದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ್ದ ನ್ಯಾ.ಚಂದ್ರಚೂಡ್ ಅವರು, "ನಮ್ಮ ಉದ್ದೇಶದ ಮುಂದಿನ ಹಂತವು ಪ್ರತಿ ಭಾರತೀಯ ಭಾಷೆಯಲ್ಲಿ ಕೋರ್ಟ್‌ನ ತೀರ್ಪುಗಳ ಅನುವಾದ ಪ್ರತಿಗಳನ್ನು ಒದಗಿಸುವುದಾಗಿದೆ. ಇಂಗ್ಲಿಷ್‌ನಲ್ಲಿರುವ ಭಾಷಾ ಸಂಕೀರ್ಣತೆಯನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ಆದ್ದರಿಂದ ನಾವು ನಮ್ಮ ನಾಗರಿಕರನ್ನು ಅವರು ಅರ್ಥಮಾಡಿಕೊಳ್ಳಬಹುದಾದ ಭಾಷೆಯಲ್ಲಿಯೇ ಮತ್ತು ಅವರು ಗ್ರಹಿಸಬಹುದಾದ ರೀತಿಯಲ್ಲಿ ತಲುಪಿಸಬೇಕಿದೆ" ಎಂದಿದ್ದರು.

"ನಾವು ಮಾಡುವ ಕೆಲಸವು ನಮ್ಮ ಜನಸಂಖ್ಯೆಯ ಶೇ 99 ಅನ್ನು ತಲುಪುತ್ತಿಲ್ಲ. ಆದ್ದರಿಂದ ನಾನು ತಂತ್ರಜ್ಞಾನವನ್ನು ನಂಬುತ್ತೇನೆ. ನೀವು ತಂತ್ರಜ್ಞಾನವನ್ನು ಅಳವಡಿಸಿಕೊಂಡಾಗ ಯಾವಾಗಲೂ ಒಂದು ನಿರ್ದಿಷ್ಟ ಮಟ್ಟದ ಟೀಕೆಗಳಿರುತ್ತವೆ. ನಮ್ಮ ಜನರಲ್ಲಿ ತಾಂತ್ರಿಕ ವಿಭಜನೆ ಇದೆ. ಅನೇಕರಿಗೆ ತಂತ್ರಜ್ಞಾನದ ಅರಿವಿಲ್ಲ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ಮೂಲಕ ನ್ಯಾಯಾಲಯದ ತೀರ್ಪುಗಳನ್ನು ಇತರ ಭಾಷೆಗಳಿಗೆ ಭಾಷಾಂತರಿಸಲು ನೆರವಾಗಲಿದೆ" ಎಂದರು. "ಇದರಿಂದ ಹಳ್ಳಿಗಳಲ್ಲಿ ವಾಸಿಸುವ ಜನರು ತಮ್ಮ ಭಾಷೆಯಲ್ಲಿ ಕೋರ್ಟ್‌ ನಿರ್ಧಾರಗಳ ಬಗ್ಗೆ ಸುಲಭವಾಗಿ ಮಾಹಿತಿ ಪಡೆಯಬಹುದು. ನ್ಯಾಯಾಲಯದ ತೀರ್ಪುಗಳು ಕಾಗದರಹಿತವಾಗಿರಬೇಕು, ಇದು ನನ್ನ ಧ್ಯೇಯ" ಎಂದು ನ್ಯಾ.ಡಿ.ವೈ.ಚಂದ್ರಚೂಡ್ ಹೇಳಿದ್ದರು.

ಇದನ್ನೂ ಓದಿ: ಇಂಡೋ - ಪಾಕ್ ಗಡಿಯಿಂದ 2 ಕಿಮೀ ದೂರದಲ್ಲಿ ಹೈಟೆಕ್ ಡ್ರೋನ್​ ಹೊಡೆದುರುಳಿಸಿದ ಪೊಲೀಸರು: 5 ಕೆಜಿ ಹೆರಾಯಿನ್​ ಜಪ್ತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.