ನವದೆಹಲಿ: ವಿಶ್ವ ಸುಸ್ಥಿರ ಅಭಿವೃದ್ಧಿ ಶೃಂಗಸಭೆ 2021 ಅನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಇಂದು ಉದ್ಘಾಟಿಸಿದರು.
‘ನಮ್ಮ ಸಾಮಾನ್ಯ ಭವಿಷ್ಯವನ್ನು ಮರು ವ್ಯಾಖ್ಯಾನಿಸುವುದು: ಎಲ್ಲರಿಗೂ ಸುರಕ್ಷಿತ ವಾತಾವರಣ ಕಲ್ಪಿಸುವುದು’ ಈ ಶೃಂಗಸಭೆಯ ಪ್ರಮುಖ ಧ್ಯೇಯವಾಗಿದೆ.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಸುಸ್ಥಿರ ಅಭಿವೃದ್ಧಿ ಕಾಯ್ದುಕೊಂಡಿದ್ದಕ್ಕಾಗಿ ಟಿ.ಇ.ಆರ್.ಐ ಅನ್ನು ಅಭಿನಂದಿಸಿದರು. ಈ ರೀತಿಯ ಜಾಗತಿಕ ವೇದಿಕೆಗಳು ನಮ್ಮ ಪ್ರಸ್ತುತ ಮತ್ತು ಭವಿಷ್ಯಕ್ಕೆ ಅತಿ ಮುಖ್ಯವಾಗಿದೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಮಾನವೀಯತೆಯ ಪ್ರಗತಿ ಹೇಗೆ ತೆರೆದುಕೊಳ್ಳುತ್ತದೆ ಎಂಬುದನ್ನು ಈ ಎರಡು ವಿಷಯಗಳು ವ್ಯಾಖ್ಯಾನಿಸುತ್ತವೆ. ಮೊದಲನೇಯದು ನಮ್ಮ ಜನರ ಆರೋಗ್ಯ. ಎರಡನೇಯದು ನಮ್ಮ ಗ್ರಹದ ಆರೋಗ್ಯ. ಎರಡೂ ಪರಸ್ಪರ ಸಂಬಂಧ ಹೊಂದಿದ್ದು, ಈ ಎರಡೂ ವಿಷಯಗಳು ಅತಿ ಮಹತ್ವ ಹೊಂದಿವೆ ಎಂದು ತಿಳಿಸಿದರು.
ಈ ಸುದ್ದಿಯನ್ನೂ ಓದಿ: ದೇಶದ ಸಾರ್ವಭೌಮತ್ವ ರಕ್ಷಣೆಗೆ ಯಾವುದೇ ಸವಾಲು ಎದುರಿಸಲು ಸೇನೆ ಸಿದ್ಧ: ರಾಜನಾಥ್ ಸಿಂಗ್
ನಾವು ಎದುರಿಸುತ್ತಿರುವ ಸವಾಲುಗಳು ಎಲ್ಲರಿಗೂ ತಿಳಿದಿರುವ ವಿಚಾರ. ತಮ್ಮ ಇತಿಮಿತಿಗಳನ್ನು ಮೀರಿ ಯೋಚಿಸಬೇಕಾಗಿದೆ. ಯುವಕರನ್ನು ಮುಂದೆ ತರಬೇಕಾಗಿದೆ ಮತ್ತು ಸುಸ್ಥಿರ ಅಭಿವೃದ್ಧಿಯತ್ತ ಕೆಲಸ ಮಾಡಬೇಕಾಗಿದೆ ಎಂದು ಪ್ರತಿಪಾದಿಸಿದರು. ಹವಾಮಾನ ವೈಪರೀತ್ಯದೆಡೆಗೂ ಗಮನ ಹರಿಸಬೇಕಿದೆ ಎಂದು ತಿಳಿಸಿದರು.