ಸೂರತ್ (ಗುಜರಾತ್): ಅಂತಾರಾಷ್ಟ್ರೀಯ ವಜ್ರ ಮತ್ತು ಆಭರಣ ವ್ಯಾಪಾರಕ್ಕಾಗಿ ವಿಶ್ವದ ಅತಿದೊಡ್ಡ ಅತ್ಯಾಧುನಿಕ ಕೇಂದ್ರವಾಗಿರುವ ಸೂರತ್ ಡೈಮಂಡ್ ಬೋರ್ಸ್ (Surat Diamond Bourse -SDB) ಕಟ್ಟಡವನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಉದ್ಘಾಟಿಸಿದರು. ಈ ಡೈಮಂಡ್ ಬೋರ್ಸ್ ಕಟ್ಟಡವು 67 ಲಕ್ಷ ಚದರ್ ಅಡಿಗಿಂತ ಹೆಚ್ಚು ವಿಸ್ತೀರ್ಣದಲ್ಲಿ ತಲೆ ಎತ್ತಿದ್ದು, ವಿಶ್ವದ ಅತಿದೊಡ್ಡ ಕಚೇರಿ ಸಂಕೀರ್ಣ ಎಂಬ ಹೆಗ್ಗಳಿಕೆ ಪಡೆದಿದೆ.
ಸೂರತ್ ಡೈಮಂಡ್ ಬೋರ್ಸ್ ಉದ್ಘಾಟನೆಗೂ ಮುನ್ನ 353 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಸೂರತ್ ವಿಮಾನ ನಿಲ್ದಾಣದ ನೂತನ ಟರ್ಮಿನಲ್ ಕಟ್ಟಡವನ್ನೂ ಪಿಎಂ ಮೋದಿ ಉದ್ಘಾಟಿಸಿದರು. ಬಳಿಕ ಸಮಾರಂಭ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಇಂದು ಸೂರತ್‌ನ ಜನರು ಮತ್ತು ಇಲ್ಲಿನ ವ್ಯಾಪಾರಿಗಳು ಮತ್ತು ಉದ್ಯಮಿಗಳಿಗೆ ಇನ್ನೂ ಎರಡು ಉಡುಗೊರೆಗಳು ದೊರೆತಿವೆ. ಸೂರತ್ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಉದ್ಘಾಟನೆಯಾಗಿದೆ ಮತ್ತು ಎರಡನೇ ದೊಡ್ಡ ವಿಷಯವೆಂದರೆ ಈಗ ಸೂರತ್ ವಿಮಾನ ನಿಲ್ದಾಣವು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸ್ಥಾನಮಾನವನ್ನು ಪಡೆದುಕೊಂಡಿದೆ. ಈ ಅದ್ಭುತ ಟರ್ಮಿನಲ್ ಮತ್ತು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕಾಗಿ ನಾನು ಸೂರತ್‌ನ ಜನರು ಮತ್ತು ಗುಜರಾತ್‌ನ ಜನರನ್ನು ಅಭಿನಂದಿಸುತ್ತೇನೆ ಎಂದು ತಿಳಿಸಿದರು.
-
#WATCH | Surat, Gujarat: Prime Minister Narendra Modi says, "The Surat Diamond Bourse exhibits the capabilities of Indian designers, Indian designers, Indian materials and Indian concepts. This building is the symbol of New India's new strength and new resolve." pic.twitter.com/wbOVAir5Mg
— ANI (@ANI) December 17, 2023 " class="align-text-top noRightClick twitterSection" data="
">#WATCH | Surat, Gujarat: Prime Minister Narendra Modi says, "The Surat Diamond Bourse exhibits the capabilities of Indian designers, Indian designers, Indian materials and Indian concepts. This building is the symbol of New India's new strength and new resolve." pic.twitter.com/wbOVAir5Mg
— ANI (@ANI) December 17, 2023#WATCH | Surat, Gujarat: Prime Minister Narendra Modi says, "The Surat Diamond Bourse exhibits the capabilities of Indian designers, Indian designers, Indian materials and Indian concepts. This building is the symbol of New India's new strength and new resolve." pic.twitter.com/wbOVAir5Mg
— ANI (@ANI) December 17, 2023
ಅಲ್ಲದೇ, ಸೂರತ್ ಡೈಮಂಡ್ ಬೋರ್ಸ್ ಭಾರತೀಯ ವಿನ್ಯಾಸಕರು, ಭಾರತೀಯ ವಸ್ತುಗಳು ಮತ್ತು ಭಾರತೀಯ ಪರಿಕಲ್ಪನೆಗಳ ಸಾಮರ್ಥ್ಯಗಳನ್ನು ಪ್ರದರ್ಶಿಸುತ್ತದೆ. ಈ ಕಟ್ಟಡವು ನವ ಭಾರತದ ಹೊಸ ಶಕ್ತಿ ಮತ್ತು ಹೊಸ ಸಂಕಲ್ಪದ ಸಂಕೇತವಾಗಿದೆ. ಸೂರತ್ ಡೈಮಂಡ್ ಬೋರ್ಸ್ ಮೋದಿ ಗ್ಯಾರಂಟಿಗೆ ಉದಾಹರಣೆ ಎಂದು ಪ್ರಧಾನಿ ಹೇಳಿದರು. ಮುಂದುವರೆದು, ನನ್ನ ಮೂರನೇ ಅವಧಿಯಲ್ಲಿ ಭಾರತವು ವಿಶ್ವದ ಅಗ್ರ ಮೂರು ಆರ್ಥಿಕತೆ ರಾಷ್ಟ್ರಗಳಲ್ಲಿ ಒಂದಾಗಲಿದೆ ಎಂಬ ಭರವಸೆಯನ್ನು ನಾನು ರಾಷ್ಟ್ರಕ್ಕೆ ನೀಡಿದ್ದೇನೆ. ಮುಂಬರುವ 25 ವರ್ಷಗಳ ಗುರಿಯನ್ನೂ ಸರ್ಕಾರ ಈಗಲೇ ನಿಗದಿಪಡಿಸಿದೆ ಎಂದರು.
-
#WATCH | Gujarat: Visuals of the Surat Diamond Bourse inaugurated by Prime Minister Narendra Modi today
— ANI (@ANI) December 17, 2023 " class="align-text-top noRightClick twitterSection" data="
It will be the world’s largest and modern centre for international diamond and jewellery business. pic.twitter.com/0EcWhZqiy5
">#WATCH | Gujarat: Visuals of the Surat Diamond Bourse inaugurated by Prime Minister Narendra Modi today
— ANI (@ANI) December 17, 2023
It will be the world’s largest and modern centre for international diamond and jewellery business. pic.twitter.com/0EcWhZqiy5#WATCH | Gujarat: Visuals of the Surat Diamond Bourse inaugurated by Prime Minister Narendra Modi today
— ANI (@ANI) December 17, 2023
It will be the world’s largest and modern centre for international diamond and jewellery business. pic.twitter.com/0EcWhZqiy5
ಡೈಮಂಡ್ ಬೋರ್ಸ್ ಕಟ್ಟಡದ ವಿಶೇಷತೆ: ಡೈಮಂಡ್ ಬೋರ್ಸ್ ಕಟ್ಟಡವು ಸೂರತ್ ನಗರದ ಸಮೀಪವಿರುವ ಖಾಜೋಡ್ ಗ್ರಾಮದಲ್ಲಿ ನಿರ್ಮಾಣವಾಗಿದೆ. ಇದು ವಜ್ರಗಳು ಮತ್ತು ಆಭರಣಗಳ ವ್ಯಾಪಾರಕ್ಕಾಗಿ ಜಾಗತಿಕ ಕೇಂದ್ರವಾಗಿದೆ. ಆಮದು ಮತ್ತು ರಫ್ತಿಗೆ ಅತ್ಯಾಧುನಿಕ 'ಕಸ್ಟಮ್ಸ್ ಕ್ಲಿಯರೆನ್ಸ್ ಹೌಸ್', ಚಿಲ್ಲರೆ ಆಭರಣ ವ್ಯಾಪಾರಕ್ಕಾಗಿ ಆಭರಣ ಮಳಿಗೆ ಮತ್ತು ಅಂತಾರಾಷ್ಟ್ರೀಯ ಬ್ಯಾಂಕಿಂಗ್ ಮತ್ತು ಸುರಕ್ಷಿತ ಸೌಲಭ್ಯವನ್ನು ಒಳಗೊಂಡಿದೆ. ಈ ಹಿಂದೆ ಮುಂಬೈನಲ್ಲಿ ನೆಲೆಸಿದ್ದ ವ್ಯಾಪಾರಿಗಳು ಸೇರಿದಂತೆ ಹಲವಾರು ವಜ್ರದ ವ್ಯಾಪಾರಿಗಳು ಈಗಾಗಲೇ ತಮ್ಮ ಕಚೇರಿಗಳನ್ನು ಈ ಕಟ್ಟಡದಲ್ಲಿ ಸ್ವಾಧೀನಪಡಿಸಿಕೊಂಡಿದ್ದಾರೆ ಎಂದು ಎಸ್‌ಡಿಬಿಯ ಮಾಧ್ಯಮ ಸಂಚಾಲಕ ದಿನೇಶ್ ನವಡಿಯಾ ತಿಳಿಸಿದ್ದಾರೆ.
ಸೂರತ್ ಡೈಮಂಡ್ ಬೋರ್ಸ್ ಕಟ್ಟಡವು ಡೈಮಂಡ್ ರಿಸರ್ಚ್ ಮತ್ತು ಮರ್ಕೆಂಟೈಲ್ (ಡ್ರೀಮ್) ನಗರದ ಭಾಗವಾಗಿದೆ. ಗುಜರಾತ್‌ನ ಮಾಜಿ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್ ಫೆಬ್ರವರಿ 2015ರಲ್ಲಿ ಎಸ್‌ಡಿಬಿ ಮತ್ತು ಡ್ರೀಮ್ ಸಿಟಿ ಯೋಜನೆಯ ಅಡಿಗಲ್ಲು ನೆರವೇರಿಸಿದ್ದರು. ಈಗ ಎಸ್‌ಡಿಬಿ 4,500 ವಜ್ರ ವ್ಯಾಪಾರ ಕಚೇರಿಗಳನ್ನು ಹೊಂದಿರುವ ವಿಶ್ವದ ಅತಿದೊಡ್ಡ ಕಚೇರಿ ಕಟ್ಟಡವಾಗಿದೆ. ಡ್ರೀಮ್ ಸಿಟಿಯೊಳಗೆ 35.54 ಎಕರೆ ಪ್ರದೇಶದಲ್ಲಿ ನಿರ್ಮಿಸಲಾದ ಬೃಹತ್ ರಚನೆಯು 15 ಮಹಡಿಗಳ ಒಂಬತ್ತು ಟವರ್‌ಗಳನ್ನು ಹೊಂದಿದ್ದು, 300 ಚದರ್ ಅಡಿಯಿಂದ 1 ಲಕ್ಷ ಚದರ್ ಅಡಿವರೆಗಿನ ಕಚೇರಿ ಸ್ಥಳಗಳನ್ನು ಹೊಂದಿದೆ.
ಇದನ್ನೂ ಓದಿ: ನಾಳೆ ವಿಶ್ವದ ಅತಿದೊಡ್ಡ ಕಾರ್ಪೊರೇಟ್ ಕಚೇರಿ 'ಸೂರತ್ ಡೈಮಂಡ್ ಬೋರ್ಸ್' ಪ್ರಧಾನಿ ಮೋದಿಯಿಂದ ಉದ್ಘಾಟನೆ