ನವದೆಹಲಿ: ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಇಂದು "ಶಿಕ್ಷಕ್ ಪರ್ವ್" ಸಮಾವೇಶ ಉದ್ಘಾಟಿಸಿದರು. ಪ್ರಧಾನಿ ಮೋದಿ ಇಂದಿನಿಂದ ಶಿಕ್ಷಣ ಕ್ಷೇತ್ರದಲ್ಲಿ ಹಲವು ಪ್ರಮುಖ ಉಪಕ್ರಮಗಳನ್ನು ಆರಂಭಿಸಿದ್ದಾರೆ.
ಭಾರತೀಯ ಸಂಕೇತ ಭಾಷಾ ಶಬ್ದಕೋಶ (Indian Sign Language Dictionary- ಇದು ಶ್ರವಣದೋಷವುಳ್ಳವರಿಗೆ ಆಡಿಯೋ ಮತ್ತು ಸಾಂಕೇತಿಕ ಭಾಷಾ ವಿಡಿಯೋ), ದೃಷ್ಟಿಹೀನರಿಗೆ ಆಡಿಯೋ ಬುಕ್ಸ್ (ಸಿಬಿಎಸ್‌ಇ)ಅನ್ನು ಪ್ರಧಾನಿ ಮೋದಿ ಬಿಡುಗಡೆ ಮಾಡಿದರು.
ಇದೇ ವೇಳೆ, ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ, ರಾಷ್ಟ್ರ ಪ್ರಶಸ್ತಿ ಪಡೆದ ಶಿಕ್ಷಕರಿಗೆ ಅಭಿನಂದನೆ ಸಲ್ಲಿಸಿದರು. ಕೋವಿಡ್ ಬಿಕ್ಕಟ್ಟಿನ ನಡುವೆಯೂ ನೀವು ಕೆಲಸ ನಿರ್ವಹಿಸಿದ್ದೀರಿ. ನಿಮ್ಮ ಶ್ರಮ ಶ್ಲಾಘನೀಯ ಎಂದರು.
ಇದನ್ನೂ ಓದಿ: Kisan Mahapanchayat: ಕರ್ನಾಲ್ನಲ್ಲಿ ಇಂಟರ್ನೆಟ್ ಸೇವೆ ಸ್ಥಗಿತ
'ಶಿಕ್ಷಕ್ ಪರ್ವ್ -2021'ನ ಗುರಿ: ‘ಗುಣಮಟ್ಟ ಮತ್ತು ಸುಸ್ಥಿರ ಶಾಲೆಗಳು. ಭಾರತದ ಶಾಲೆಗಳಿಂದ ಕಲಿಕೆ’ ಎಂಬುದಾಗಿದೆ. ಇಂದು ಆರಂಭಿಸಿದ ಉಪಕ್ರಮಗಳು ಶಿಕ್ಷಣ ಕ್ಷೇತ್ರದ ಭವಿಷ್ಯವನ್ನು ರೂಪಿಸುತ್ತವೆ. ಒಂದು ಉಪಕ್ರಮ, ಶಾಲೆಯ ಗುಣಮಟ್ಟದ ಮೌಲ್ಯಮಾಪನ ಮತ್ತು ಭರವಸೆ ಶಿಕ್ಷಣವನ್ನು ಸ್ಪರ್ಧಾತ್ಮಕವಾಗಿಸುವುದು ಮಾತ್ರವಲ್ಲದೇ ವಿದ್ಯಾರ್ಥಿಗಳನ್ನು ಭವಿಷ್ಯಕ್ಕೆ ಸಿದ್ಧವಾಗಿಸುತ್ತದೆ ಎಂದು ಹೇಳಿದರು.