ನವದೆಹಲಿ: ಇಂದು ಪ್ರಸಾರವಾದ ಪ್ರಧಾನಿ ನರೇಂದ್ರ ಮೋದಿ ಅವರ ಮಾಸಿಕ ರೇಡಿಯೋ ಕಾರ್ಯಕ್ರಮವಾದ ಮನ್ ಕಿ ಬಾತ್ನ 100 ನೇ ಸಂಚಿಕೆ ಜಗದಗಲ ಪಸರಿಸಿತು. ದೇಶದ ವಿವಿಧೆಡೆ ಬಿಜೆಪಿಯಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದರೆ, ವಿದೇಶದಲ್ಲೂ ಅದು ಪ್ರಸಾರ ಕಂಡಿತು.
ಮನದಾಳದ ಮಾತಿನ ವಿಶೇಷ ಸಂಚಿಕೆಯಲ್ಲೂ ಪ್ರಧಾನಿ ಮೋದಿ ಹಲವಾರು ವಿಷಯಗಳನ್ನು ಪ್ರಸ್ತಾಪಿಸಿದರು. 'ಹರ್ ಘರ್ ತಿರಂಗಾ' ಅಥವಾ 'ಕ್ಯಾಚ್ ದಿ ರೈನ್'ನಂತಹ ಸಾಮೂಹಿಕ ಚಳುವಳಿಗಳನ್ನು ಪ್ರಚೋದಿಸುವಲ್ಲಿ ನೆರವಾಯಿತು. ಮನ್ ಕಿ ಬಾತ್ ಸಾಮೂಹಿಕ ಚಳವಳಿಗಳನ್ನು ವೇಗಗೊಳಿಸಲು ಅನುವು ಮಾಡಿಕೊಟ್ಟಿದೆ ಎಂದು ಹೇಳಿದರು.
-
EAM Dr S Jaishankar, along with the Indian diaspora, listened to the 100th episode of #MannKiBaat in New Jersey, USA today. pic.twitter.com/h3SoqIAkWo
— ANI (@ANI) April 30, 2023 " class="align-text-top noRightClick twitterSection" data="
">EAM Dr S Jaishankar, along with the Indian diaspora, listened to the 100th episode of #MannKiBaat in New Jersey, USA today. pic.twitter.com/h3SoqIAkWo
— ANI (@ANI) April 30, 2023EAM Dr S Jaishankar, along with the Indian diaspora, listened to the 100th episode of #MannKiBaat in New Jersey, USA today. pic.twitter.com/h3SoqIAkWo
— ANI (@ANI) April 30, 2023
ಕಮಲದ ನಾರುಗಳಿಂದ ಬಟ್ಟೆ ತಯಾರಿಸುವ ಮಣಿಪುರದ ವಿಜಯಶಾಂತಿ ಅವರನ್ನು ಕಾರ್ಯಕ್ರಮದಲ್ಲಿ ಪ್ರಶಂಸಿಸಿದ ಪಿಎಂ, ವಿಜಯಶಾಂತಿ ಅವರ ಈ ಅನನ್ಯ ಪರಿಸರ ಸ್ನೇಹಿ ಕಲ್ಪನೆಗೆ ಫಿದಾ ಆಗಿದ್ದಾರೆ. ಇದರ ನೇಯ್ಗೆಯ ವಿಧಾನವನ್ನೂ ಹೊಗಳಿದರು.
ಮನ್ ಕಿ ಬಾತ್ ಕೇವಲ ಸಮಸ್ಯೆಗಳನ್ನು ಬಿಚ್ಚಿಡುವುದು ಮಾತ್ರವಲ್ಲದೇ, ಮಹಿಳಾ ಸಬಲೀಕರಣದ ವಿವಿಧ ಆಯಾಮಗಳನ್ನೂ ಅರುಹಿದೆ. ಛತ್ತೀಸ್‌ಗಢದ ದಿಯೋರಾ ಗ್ರಾಮದ ಮಹಿಳೆಯರು, ತಮಿಳುನಾಡಿನ ಬುಡಕಟ್ಟು ಮಹಿಳೆಯರು ಟೆರಾಕೋಟಾ ಕಪ್‌ಗಳನ್ನು ತಯಾರಿಸುತ್ತಾರೆ. ವೆಲ್ಲೂರಿನ ಸರೋವರವನ್ನು ಮಹಿಳೆಯರೇ ಸೇರಿಕೊಂಡು ಪುನರುಜ್ಜೀವನಗೊಳಿಸಿದ್ದಾರೆ ಎಂದು ನೆನೆದರು.
-
#WATCH | London, UK | After listening to the 100th episode of #MannKiBaat, Indian High Commissioner to the UK, Vikram Doraiswami says, "...I think the great bit for the community was to be involved with it as a community rather than individually listening to it at home..." pic.twitter.com/fsRChfSGGi
— ANI (@ANI) April 30, 2023 " class="align-text-top noRightClick twitterSection" data="
">#WATCH | London, UK | After listening to the 100th episode of #MannKiBaat, Indian High Commissioner to the UK, Vikram Doraiswami says, "...I think the great bit for the community was to be involved with it as a community rather than individually listening to it at home..." pic.twitter.com/fsRChfSGGi
— ANI (@ANI) April 30, 2023#WATCH | London, UK | After listening to the 100th episode of #MannKiBaat, Indian High Commissioner to the UK, Vikram Doraiswami says, "...I think the great bit for the community was to be involved with it as a community rather than individually listening to it at home..." pic.twitter.com/fsRChfSGGi
— ANI (@ANI) April 30, 2023
ಆತ್ಮನಿರ್ಭರ್ ಭಾರತವನ್ನು ಉತ್ತೇಜಿಸುವುದರಿಂದ ಹಿಡಿದು ಮೇಕ್ ಇನ್ ಇಂಡಿಯಾ ಮತ್ತು ಬಾಹ್ಯಾಕಾಶ ಸ್ಟಾರ್ಟ್‌ಅಪ್, ಆಟಿಕೆ ಉದ್ಯಮವನ್ನು ಮರುಸ್ಥಾಪಿಸುವ ಉದ್ದೇಶವು ಮನ್ ಕಿ ಬಾತ್‌ನೊಂದಿಗೆ ಪ್ರಾರಂಭವಾಯಿತು ಎಂದು 100 ನೇ ಆವೃತ್ತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದರು.
'ಬೇಟಿ ಬಚಾವೋ, ಬೇಟಿ ಪಢಾವೋ' ಅಭಿಯಾನದ ಬಳಿಕ ಹರಿಯಾಣದಲ್ಲಿ ಲಿಂಗ ಅನುಪಾತ ಸುಧಾರಿಸಿದೆ. ಈ ಅಭಿಯಾನವನ್ನು ಹರಿಯಾಣದಿಂದಲೇ ಆರಂಭಿಸಿದ್ದೇವೆ. ‘ಸೆಲ್ಫಿ ವಿತ್ ಡಾಟರ್’ ಅಭಿಯಾನ ನನ್ನ ಮೇಲೆ ಸಾಕಷ್ಟು ಪ್ರಭಾವ ಬೀರಿದೆ. ಸೆಲ್ಫಿ ವಿತ್ ಡಾಟರ್ ಅಭಿಯಾನವು ಈಗ ಜಾಗತಿಕ ಗಮನ ಸೆಳೆದಿದೆ. ಮಗಳ ಮಹತ್ವವನ್ನು ಜನರು ಅರ್ಥಮಾಡಿಕೊಳ್ಳುವುದು ಈ ಅಭಿಯಾನದ ಉದ್ದೇಶವಾಗಿತ್ತು ಎಂದು ಪ್ರಧಾನಿ ಅಭಿಪ್ರಾಯಪಟ್ಟರು.
-
#WATCH | London, UK | After listening to the 100th episode of #MannKiBaat at India House, singer Raageshwari says, "I think it is fantastic. Waking up at 4 in the morning, getting ready and coming here - absolutely fruitful...I think it brings not just the country together but it… pic.twitter.com/Giu1YzQcuY
— ANI (@ANI) April 30, 2023 " class="align-text-top noRightClick twitterSection" data="
">#WATCH | London, UK | After listening to the 100th episode of #MannKiBaat at India House, singer Raageshwari says, "I think it is fantastic. Waking up at 4 in the morning, getting ready and coming here - absolutely fruitful...I think it brings not just the country together but it… pic.twitter.com/Giu1YzQcuY
— ANI (@ANI) April 30, 2023#WATCH | London, UK | After listening to the 100th episode of #MannKiBaat at India House, singer Raageshwari says, "I think it is fantastic. Waking up at 4 in the morning, getting ready and coming here - absolutely fruitful...I think it brings not just the country together but it… pic.twitter.com/Giu1YzQcuY
— ANI (@ANI) April 30, 2023
ವಿದೇಶದಲ್ಲಿ ಮನ್ ಕಿ ಬಾತ್: ಪ್ರಧಾನಿ ನರೇಂದ್ರ ಮೋದಿಯವರ 'ಮನ್ ಕಿ ಬಾತ್' ನ 100 ನೇ ಸಂಚಿಕೆಯನ್ನು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ನ್ಯೂಜೆರ್ಸಿಯಲ್ಲಿ ಭಾರತೀಯರೊಂದಿಗೆ ಆಲಿಸಿದರು. ಇನ್ನೊಬ್ಬ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಲಂಡನ್‌ನಲ್ಲಿರುವ ಭಾರತೀಯರೊಂದಿಗೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಲಂಡನ್ನ ಇಂಡಿಯಾ ಹೌಸ್ನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗಿಯಾದ ಗಾಯಕಿ ರಾಗೇಶ್ವರಿ ಅವರು ಭಾಗವಹಿಸಿದ್ದರು. "ಇದೊಂದು ಅದ್ಭುತ ಕಾರ್ಯಕ್ರಮವಾಗಿದೆ. ಬೆಳಗ್ಗೆ 4 ಗಂಟೆಗೆ ಎದ್ದು, ಕಾರ್ಯಕ್ರಮಕ್ಕೆ ಹಾಜರಾಗಿದ್ದೇನೆ. ಇದು ಸಂಪೂರ್ಣವಾಗಿ ಫಲಪ್ರದವಾಗಿದೆ. ದೇಶ ಒಗ್ಗಟ್ಟಾಗಲು, ಯುವಕರನ್ನು ಕಾರ್ಯಕ್ರಮ ಪ್ರೇರೇಪಿಸುತ್ತದೆ" ಎಂದು ಹೇಳಿದರು.
-
#WATCH | Uttar Pradesh: Students and teachers at Irfania Madarsa in Lucknow listen to the 100th episode of #MannKiBaat pic.twitter.com/J6uXAgICmS
— ANI UP/Uttarakhand (@ANINewsUP) April 30, 2023 " class="align-text-top noRightClick twitterSection" data="
">#WATCH | Uttar Pradesh: Students and teachers at Irfania Madarsa in Lucknow listen to the 100th episode of #MannKiBaat pic.twitter.com/J6uXAgICmS
— ANI UP/Uttarakhand (@ANINewsUP) April 30, 2023#WATCH | Uttar Pradesh: Students and teachers at Irfania Madarsa in Lucknow listen to the 100th episode of #MannKiBaat pic.twitter.com/J6uXAgICmS
— ANI UP/Uttarakhand (@ANINewsUP) April 30, 2023
ಜನರು ಪ್ರತ್ಯೇಕವಾಗಿ ಕೇಳುವುದಕ್ಕಿಂತ, ಸಾಮೂಹಿಕವಾಗಿ ಸೇರಿ ಕಾರ್ಯಕ್ರಮ ಆಲಿಸುವುದು ಅದ್ಭುತ ಎಂದು ಭಾವಿಸುತ್ತೇನೆ. ಲಂಡನ್ ಹೌಸ್ನಲ್ಲಿ ಇಂದು ಅದು ಸಾಕಾರವಾಗಿದೆ ಎಂದು ಇಂಗ್ಲೆಂಡ್ನ ಭಾರತೀಯ ಹೈಕಮಿಷನರ್ ವಿಕ್ರಮ್ ದೊರೈಸ್ವಾಮಿ ಹೇಳಿದರು.
-
#WATCH | New Zealand | 100-year-old Ramben blesses PM Modi, as she along with other members of the Indian diaspora, listens to the 100th episode of #MannKiBaat, in Auckland. pic.twitter.com/zR0JEmvCoH
— ANI (@ANI) April 30, 2023 " class="align-text-top noRightClick twitterSection" data="
">#WATCH | New Zealand | 100-year-old Ramben blesses PM Modi, as she along with other members of the Indian diaspora, listens to the 100th episode of #MannKiBaat, in Auckland. pic.twitter.com/zR0JEmvCoH
— ANI (@ANI) April 30, 2023#WATCH | New Zealand | 100-year-old Ramben blesses PM Modi, as she along with other members of the Indian diaspora, listens to the 100th episode of #MannKiBaat, in Auckland. pic.twitter.com/zR0JEmvCoH
— ANI (@ANI) April 30, 2023
ನ್ಯೂಜಿಲ್ಯಾಂಡ್ ಅಜ್ಜಿಯ ಆಶೀರ್ವಾದ: ನ್ಯೂಜಿಲ್ಯಾಂಡ್ನ ಆಕ್ಲೆಂಡ್ನಲ್ಲಿ ಮನ್ ಕಿ ಬಾತ್ನ 100 ನೇ ಸಂಚಿಕೆ ಪ್ರಸಾರವಾಯಿತು. ಈ ವೇಳೆ ಭಾರತೀಯರ ಜೊತೆಗೆ 100 ವರ್ಷ ವಯಸ್ಸಿನ ರಾಂಬೆನ್ ಅವರು ಪ್ರಧಾನಿಯವರ ಭಾಷಣ ಆಲಿಸಿ, ಮೋದಿ ಅವರಿಗೆ ಆಶೀರ್ವದಿಸಿದರು.