ETV Bharat / bharat

ಸುನಿಲ್ ಛೆಟ್ರಿ ಬಗ್ಗೆ ಕ್ಯಾಪ್ಟನ್ ಫೆಂಟಾಸ್ಟಿಕ್ ಸಿರೀಸ್ ಬಿಡುಗಡೆ: ಪ್ರಧಾನಿ ಅಭಿನಂದನೆ

author img

By

Published : Sep 29, 2022, 1:21 PM IST

ಭಾರತದ ಖ್ಯಾತ ಫುಟ್ಬಾಲ್ ಆಟಗಾರ ಸುನಿಲ್ ಛೆಟ್ರಿ ಅವರ ಜೀವನ ಮತ್ತು ವೃತ್ತಿಜೀವನದ ಕುರಿತು ಸರಣಿ(ಸಿರೀಸ್​) ಬಿಡುಗಡೆ ಮಾಡುವುದಾಗಿ ಫಿಫಾ ಘೋಷಿಸಿದೆ. ಸುನಿಲ್ ಛೆಟ್ರಿ ಬಗ್ಗೆ ಕ್ಯಾಪ್ಟನ್ ಫೆಂಟಾಸ್ಟಿಕ್ ಎಂಬ ಸಿರೀಸ್ ಪ್ರಸಾರವಾಗಲಿದೆ.

PM Modi congratulates Sunil Chhetri following release of series Captain Fantastic
ಸುನಿಲ್ ಛೆಟ್ರಿ ಬಗ್ಗೆ ಕ್ಯಾಪ್ಟನ್ ಫೆಂಟಾಸ್ಟಿಕ್ ಸಿರೀಸ್ ಬಿಡುಗಡೆ: ಪ್ರಧಾನಿ ಅಭಿನಂದನೆ

ನವದೆಹಲಿ: ಭಾರತದ ಖ್ಯಾತ ಫುಟ್ಬಾಲ್ ಆಟಗಾರ ಸುನಿಲ್ ಛೆಟ್ರಿ ಅವರ ಜೀವನ ಮತ್ತು ವೃತ್ತಿಜೀವನದ ಕುರಿತು ಸರಣಿ(ಸಿರೀಸ್​) ಬಿಡುಗಡೆ ಮಾಡುವುದಾಗಿ ಫಿಫಾ ಘೋಷಿಸಿದ್ದು, ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಛೆಟ್ರಿ ಅವರನ್ನು ಅಭಿನಂದಿಸಿದ್ದಾರೆ. ಇದರಿಂದ ಭಾರತದಲ್ಲಿ ಫುಟ್‌ಬಾಲ್‌ ಜನಪ್ರಿಯತೆ ಇನ್ನಷ್ಟು ಹೆಚ್ಚಲಿದೆ ಎಂದು ಪ್ರಧಾನಿ ಬಣ್ಣಿಸಿದ್ದಾರೆ.

'ಒಳ್ಳೆಯದು ಸುನಿಲ್ ಛೆಟ್ರಿ! ಇದು ಖಂಡಿತವಾಗಿಯೂ ಭಾರತದಲ್ಲಿ ಫುಟ್‌ಬಾಲ್‌ನ ಜನಪ್ರಿಯತೆಯನ್ನು ಹೆಚ್ಚಿಸುತ್ತದೆ' ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. ಭಾರತೀಯ ಫುಟ್ಬಾಲ್ ದಂತಕಥೆ ಸುನಿಲ್ ಛೆಟ್ರಿ ಅವರ ವೃತ್ತಿಜೀವನವು 'ಕ್ಯಾಪ್ಟನ್ ಫೆಂಟಾಸ್ಟಿಕ್' ಹೆಸರಿನ ಸರಣಿ ರೂಪದಲ್ಲಿ ಹೊಸ ಮನ್ನಣೆ ಪಡೆದುಕೊಂಡಿದೆ. ಇದು ಮೂರು ಕಂತುಗಳಲ್ಲಿ ಛೆಟ್ರಿ ಅವರ ಜೀವನವನ್ನು ತೆರೆದಿಡಲಿದೆ.

  • You know all about Ronaldo and Messi, now get the definitive story of the third highest scoring active men's international.

    Sunil Chhetri | Captain Fantastic is available on FIFA+ now 🇮🇳

    — FIFA World Cup (@FIFAWorldCup) September 27, 2022 " class="align-text-top noRightClick twitterSection" data=" ">

ಫಿಫಾ, ಕ್ರೀಡಾ ಆಡಳಿತ ಮಂಡಳಿ, ಮಂಗಳವಾರ ಛೆಟ್ರಿಯ ವೃತ್ತಿಜೀವನ ಮತ್ತು ಜೀವನದ ಬಗ್ಗೆಗಿನ ಸೀರಿಸ್​​ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ FIFA+ನಲ್ಲಿ ಲಭ್ಯವಿದೆ ಎಂದು ಘೋಷಿಸಿದೆ. 'ರೊನಾಲ್ಡೊ ಮತ್ತು ಮೆಸ್ಸಿ ಬಗ್ಗೆ ನಿಮಗೆಲ್ಲ ಗೊತ್ತು, ಈಗ ಮೂರನೇ ಅತಿ ಹೆಚ್ಚು ಗೋಲ್​ ಬಾರಿಸಿರುವ ಸಕ್ರಿಯ ಅಂತಾರಾಷ್ಟ್ರೀಯ ಆಟಗಾರನ ಬಗ್ಗೆ ನೀವು ತಿಳಿಯಿರಿ. ಸುನಿಲ್ ಛೆಟ್ರಿ | ಕ್ಯಾಪ್ಟನ್ ಫೆಂಟಾಸ್ಟಿಕ್ ಈಗ FIFA+ ನಲ್ಲಿ ಲಭ್ಯವಿದೆ' ಎಂದು ಫಿಫಾ ವಿಶ್ವಕಪ್ ಟ್ವಿಟರ್​ ಖಾತೆಯಲ್ಲಿ ಟ್ವೀಟ್​ ಮಾಡಲಾಗಿದೆ.

ಈ ಸೀರಿಸ್​ನಲ್ಲಿ ಛೆಟ್ರಿ ಬಗ್ಗೆ ಯಾರಿಗೂ ತಿಳಿಯದ ಬಹಳಷ್ಟು ಸಂಗತಿಗಳು ಇರಲಿವೆ. ಸುನಿಲ್​ ಅವರ ಹದಿಹರೆಯದ ಪೂರ್ವದ ಕಷ್ಟದ ದಿನಗಳು, 20ನೇ ವಯಸ್ಸಿನಲ್ಲೇ ಭಾರತಕ್ಕೆ ಅವರ ಚೊಚ್ಚಲ ಪ್ರವೇಶ, ಅವರ ಭಾವಿ ಪತ್ನಿ ಮತ್ತು ಅವರ ಆರಂಭಿಕ ದಿನಗಳು ಮತ್ತು ಅನೇಕ ಪ್ರಶಸ್ತಿಗಳೊಂದಿಗೆ ಫುಟ್‌ಬಾಲ್ ಆಟಗಾರರಾಗಿ ಉತ್ತುಂಗಕ್ಕೇರಿರುವುದು ಹಾಗೂ ದಾಖಲೆಗಳನ್ನು ನೀವು ನೋಡಬಹುದಾಗಿದೆ.

ಸುನಿಲ್​ ಛೆಟ್ರಿ ಅವರು 84 ಗೋಲುಗಳೊಂದಿಗೆ ಅಂತಾರಾಷ್ಟ್ರೀಯ ಫುಟ್‌ಬಾಲ್‌ನಲ್ಲಿ ಸಕ್ರಿಯ ಆಟಗಾರರಲ್ಲಿ ಮೂರನೇ ಅತಿ ಹೆಚ್ಚು ಗೋಲು ಗಳಿಸಿದವರಾಗಿದ್ದಾರೆ. ಇತರ ದಂತಕಥೆಗಳಾದ ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ (90) ಮತ್ತು ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ (117) ಮೊದಲೆರಡು ಸ್ಥಾನದಲ್ಲಿದ್ದಾರೆ.

2007, 2009, ಮತ್ತು 2012 ನೆಹರು ಕಪ್ ಟ್ರೋಫಿ ಮತ್ತು 2011, 2015, ಮತ್ತು 2021ರ ದಕ್ಷಿಣ ಏಷ್ಯಾ ಫುಟ್ಬಾಲ್ ಫೆಡರೇಶನ್ (SAFF) ಚಾಂಪಿಯನ್‌ಶಿಪ್​ನಲ್ಲಿ ಭಾರತದ ಗೆಲುವಿಗೆ ಛೆಟ್ರಿ ಪ್ರಮುಖ ಪಾತ್ರವಹಿಸಿದ್ದರು. ಸ್ಟಾರ್ ಫುಟ್ಬಾಲ್ ಆಟಗಾರನಿಗೆ ಏಳು ಬಾರಿ ಎಐಎಫ್​ಎಫ್​ ವರ್ಷದ ಆಟಗಾರ ಪ್ರಶಸ್ತಿ ಲಭಿಸಿದೆ, ಇದೊಂದು ದಾಖಲೆಯಾಗಿದೆ. 2021ರಲ್ಲಿ ಅವರಿಗೆ ದೇಶದ ಅತ್ಯುನ್ನತ ಕ್ರೀಡಾ ಗೌರವವಾದ ಖೇಲ್ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಇದನ್ನೂ ಓದಿ: ಬೌಲರ್​ಗಳ ಸಾಹಸ, ಬ್ಯಾಟಿಂಗ್​ ವೈಭವ: ದಕ್ಷಿಣ ಆಫ್ರಿಕಾ ವಿರುದ್ದ ಭಾರತಕ್ಕೆ 8 ವಿಕೆಟ್​ ಜಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.