ETV Bharat / bharat

ಇರಾನ್​ ನೂತನ ಅಧ್ಯಕ್ಷ ರೈಸಿಗೆ ಶುಭ ಕೋರಿದ ಪ್ರಧಾನಿ ಮೋದಿ - ‘ಭಾರತ ಮತ್ತು ಇರಾನ್​ ನಡುವಿನ ಆತ್ಮೀಯ ಸಂಬಂಧ

‘ಭಾರತ ಮತ್ತು ಇರಾನ್​ ನಡುವಿನ ಆತ್ಮೀಯ ಸಂಬಂಧವನ್ನು ಮತ್ತಷ್ಟು ಬಲಪಡಿಸಲು ಮತ್ತು ನೂತನ ಅಧ್ಯಕ್ಷ ರೈಸಿಯೊಂದಿಗೆ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ’ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

Ebrahim Raisi
ಮೋದಿ-ರೈಸಿ
author img

By

Published : Jun 20, 2021, 5:13 PM IST

ನವದೆಹಲಿ: ಇರಾನ್​ನ ನೂತನ ಅಧ್ಯಕ್ಷ ಇಬ್ರಾಹಿಂ ರೈಸಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಕೋರಿದ್ದಾರೆ. ‘ಭಾರತ ಮತ್ತು ಇರಾನ್​ ನಡುವಿನ ಆತ್ಮೀಯ ಸಂಬಂಧವನ್ನು ಮತ್ತಷ್ಟು ಬಲಪಡಿಸಲು ಮತ್ತು ರೈಸಿಯೊಂದಿಗೆ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ’ ಎಂದು ನಮೋ ಟ್ವೀಟ್ ಮಾಡಿದ್ದಾರೆ.

  • Congratulations to His Excellency Ebrahim Raisi on his election as President of the Islamic Republic of Iran. I look forward to working with him to further strengthen the warm ties between India and Iran.

    — Narendra Modi (@narendramodi) June 20, 2021 " class="align-text-top noRightClick twitterSection" data=" ">

ಇರಾನ್ ಅಧ್ಯಕ್ಷ ಚುನಾವಣೆಯಲ್ಲಿ ರೈಸಿ ಸೇರಿದಂತೆ ನಾಲ್ವರು ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಆದರೆ ಈ ಬಾರಿ ಕಡಿಮೆ ಮತದಾನವಾಗಿದ್ದು, ರೈಸಿ ಅವರ ಪರ 1.78 ಕೋಟಿ ಮತ ಚಲಾವಣೆಯಾಗಿತ್ತು. ಪ್ರತಿಸ್ಪರ್ಧಿ ಮೊಹಸೆನ್ ರೆಜಿ 33 ಲಕ್ಷ ಮತ ಪಡೆದಿದ್ದರು. ನ್ಯಾಯಾಂಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದ ರೈಸಿ, ಅಧ್ಯಕ್ಷೀಯ ಚುನಾವಣೆಯಲ್ಲಿ ಭಾರಿ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಇದನ್ನೂ ಓದಿ:ಇರಾನ್​ನ ನೂತನ ಅಧ್ಯಕ್ಷರಾಗಿ ಇಬ್ರಾಹಿಂ ರೈಸಿ ಆಯ್ಕೆ!

ರೈಸಿ, ಇರಾನ್ ಉನ್ನತ ನಾಯಕ ಆಯತೊಲ್ಲಾ ಖಮೇನಿ ಅವರ ಆಪ್ತರಾಗಿದ್ದಾರೆ. ಸರ್ವೋಚ್ಛ ನಾಯಕ ಖಮೇನಿ ಮತ್ತು ನಿಮ್ಮ ನೇತೃತ್ವದಲ್ಲಿ ಸರ್ಕಾರ ಜನರ ಆಶೋತ್ತರಗಳನ್ನು ಈಡೇರಿಸಲಿದೆ ಎಂಬ ಭರವಸೆ ಇದೆ ಅನೇಕ ನಾಯಕರು ಅಭಿಪ್ರಾಯ ಪಟ್ಟಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.