ETV Bharat / bharat

ದೋವಲ್​, ಅಮಿತ್​​ ಶಾ, ರಾಜನಾಥ್​ ಸಿಂಗ್ ಜೊತೆ ಮೋದಿ ಮಹತ್ವದ ಸಭೆ: ಗಡಿಯಲ್ಲಿ ರಾವತ್​

ಪ್ರಧಾನಿ ನರೇಂದ್ರ ಮೋದಿ ರಾಜನಾಥ್ ಸಿಂಗ್​, ಅಮಿತ್ ಶಾ ಹಾಗೂ ಅಜಿತ್​ ದೋವಲ್​ ಜೊತೆ ಮಹತ್ವದ ಸಭೆ ನಡೆಸುತ್ತಿದ್ದು, ಭಾರಿ ಕುತೂಹಲಕ್ಕೆ ಕಾರಣವಾಗಿದೆ.

pm-modi-chairs-high-level-meeting
pm-modi-chairs-high-level-meeting
author img

By

Published : Jun 29, 2021, 7:15 PM IST

Updated : Jun 29, 2021, 8:01 PM IST

ನವದೆಹಲಿ: ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್​ ದೋವಲ್​, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ರಕ್ಷಣಾ ಮಂತ್ರಿ ರಾಜನಾಥ್​ ಸಿಂಗ್ ಜೊತೆ ಪ್ರಧಾನಿ ಮಹತ್ವದ ಸಭೆ ನಡೆಸಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಜಮ್ಮು-ಕಾಶ್ಮೀರದ ಏರ್​ ಬೇಸ್​​ನಲ್ಲಿ ಡ್ರೋಣ್ ದಾಳಿ ಬೆನ್ನಲ್ಲೇ ನಡೆಯುತ್ತಿರುವ ಈ ಸಭೆ ಹೆಚ್ಚಿನ ಕುತೂಹಲಕ್ಕೆ ಕಾರಣವಾಗಿದೆ.

  • PM holds high-level meeting with Defence Minister Rajnath Singh, Union Home Minister Amit Shah and NSA Ajit Doval, discussions held on futuristic challenges in the defence sector & equipping our forces with modern equipment: Sources

    (File photos) pic.twitter.com/hkM6aJhq8M

    — ANI (@ANI) June 29, 2021 " class="align-text-top noRightClick twitterSection" data=" ">

ಕಳೆದ ಎರಡು ದಿನಗಳ ಹಿಂದೆ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಲಡಾಖ್​ಗೆ ಭೇಟಿ ನೀಡಿದ್ದರು. ಅವರು ದೆಹಲಿಗೆ ವಾಪಸ್​​ ಆಗುತ್ತಿದ್ದಂತೆ ಈ ಸಭೆ ನಡೆಯುತ್ತಿದ್ದು, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಸಭೆಯಲ್ಲಿ ಪಾಲ್ಗೊಂಡಿದ್ದು ಮಹತ್ವ ಪಡೆದುಕೊಂಡಿದೆ.

ಲಭ್ಯವಾಗಿರುವ ಮಾಹಿತಿ ಪ್ರಕಾರ ಭಾರತದಲ್ಲಿನ ರಕ್ಷಣಾ ವಲಯ ಹಾಗೂ ಸೇನೆ ಮತ್ತಷ್ಟು ಬಲಿಷ್ಠಗೊಳಿಸುವ ಸಲುವಾಗಿ ಈ ಸಭೆ ನಡೆಯುತ್ತಿದೆ ಎನ್ನಲಾಗಿದೆ. ಆದರೆ ಜಮ್ಮು-ಕಾಶ್ಮೀರದ ವಿಮಾನ ನಿಲ್ದಾಣದಲ್ಲಿ ನಡೆದ ಸ್ಫೋಟದ ಬಗ್ಗೆ ಹಾಗೂ ಅದರ ಹಿಂದಿರುವ ಕೈವಾಡದ ಬಗ್ಗೆ ಈ ವೇಳೆ ಚರ್ಚೆ ನಡೆಯುವ ಸಾಧ್ಯತೆ ಹೆಚ್ಚಾಗಿದೆ. ಇದರ ತನಿಖೆ ನಡೆಸಲು ಈಗಾಗಲೇ ಎನ್​ಐಎಗೆ ಸೂಚಿಸಲಾಗಿದೆ.

ಕಳೆದ ಕೆಲ ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಜಮ್ಮು-ಕಾಶ್ಮೀರದ ವಿವಿಧ ಮುಖಂಡರೊಂದಿಗೆ ಮಹತ್ವದ ಸಭೆ ನಡೆಸಿದ್ದರು. ಇದೀಗ ಪ್ರಮುಖ ಸಚಿವರೊಂದಿಗೆ ಚರ್ಚೆ ನಡೆಸಿದ್ದು, ಜಮ್ಮು-ಕಾಶ್ಮೀರ ವಿಚಾರವಾಗಿ ಮತ್ತಷ್ಟು ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಗಡಿಯಲ್ಲಿ ಮೂರು ಸೇನಾಪಡೆಗಳ ಸೇನಾ ದಂಡನಾಯಕ

ಮತ್ತೊಂದೆಡೆ ಹಿಮಾಚಲಪ್ರದೇಶದ ಎಲ್​​ಎಸಿಗೆ ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್​ ರಾವತ್​ ಭೇಟಿ ನೀಡಿ, ಭದ್ರತೆಯ ಪರಿಶೀಲನೆ ನಡೆಸಿದರು. ಗಡಿಯಲ್ಲಿನ ಸೈನಿಕರಿಗೆ ಧೈರ್ಯ ತುಂಬಿದರು.

Last Updated : Jun 29, 2021, 8:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.