ETV Bharat / bharat

'ನಾನು ಸೃಷ್ಟಿಸಿದ ಗುಜರಾತ್​..' ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ಮೋದಿ ಘೋಷಣೆ

author img

By

Published : Nov 6, 2022, 6:10 PM IST

ಗುಜರಾತ್​ ವಿಧಾನಸಭೆ ಚುನಾವಣೆಗೆ ಧುಮುಕಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಕಪರ್ದಾದಲ್ಲಿ ಭರ್ಜರಿ ಪ್ರಚಾರ ನಡೆಸಿದರು.

pm-modi-campaign-in-gujarat
ಪ್ರಧಾನಿ ನರೇಂದ್ರ ಮೋದಿ ಘೋಷಣೆ

ಅಹಮದಾಬಾದ್​(ಗುಜರಾತ್​): ಗುಜರಾತ್​ ವಿಧಾನಸಭೆಗೆ ಚುನಾವಣೆ ಘೋಷಣೆಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಇಲ್ಲಿನ ಕಪರ್ದಾದಲ್ಲಿ ಇಂದು ಭರ್ಜರಿ ಪ್ರಚಾರ ನಡೆಸಿದರು. "ಗುಜರಾತ್​ ನಾನು ನಿರ್ಮಿಸಿದ್ದೇನೆ" ಎಂದು ಘೋಷವಾಕ್ಯ ಮೊಳಗಿಸಿದರು.

ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ದ್ವೇಷವನ್ನು ಹರಡುವ ಮತ್ತು ಗುಜರಾತ್‌ಗೆ ಕಂಟಕವಾಗುವ ಶಕ್ತಿಗಳನ್ನು ಮುಂದಿನ ತಿಂಗಳು ನಡೆಯುವ ಚುನಾವಣೆಯ ಮೂಲಕ ರಾಜ್ಯದಿಂದಲೇ ಹೊರದಬ್ಬಲಾಗುವುದು ಎಂದು ವಾಗ್ದಾಳಿ ನಡೆಸಿದರು.

ಗುಜರಾತ್‌ನಲ್ಲಿ ಈ ಬಾರಿಯ ಎಲೆಕ್ಷನ್​ನಲ್ಲಿ ದಾಖಲೆಯ ಅಂತರದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ನನ್ನ ಆಡಳಿತದ ಅವಧಿಗಿಂತಲೂ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದು ಇತಿಹಾಸ ನಿರ್ಮಿಸಲಿದೆ. ಚುನಾವಣೆಗೆ ಹೆಚ್ಚಿನ ಸಮಯ ಹೊಂದಿಸಲು ಸಿದ್ಧನಿದ್ದೇನೆ ಎಂದು ಮೋದಿ ಹೇಳಿದರು.

ಆಪ್​ ವಿರುದ್ಧ ಕಿಡಿ: ರಾಜ್ಯದಲ್ಲಿ ಕೆಲವರು ಬಿಜೆಪಿ ವಿರುದ್ಧ ಜನರಲ್ಲಿ ದ್ವೇಷ ಬಿತ್ತುತ್ತಿದ್ದಾರೆ. ಅಂಥವರಿಗೆ ಚುನಾವಣೆಯಲ್ಲಿ ಉತ್ತರ ನೀಡಲಾಗುವುದು. ಗುಜರಾತಿನಿಂದಲೇ ಅಂಥವರನ್ನು ಹೊರದಬ್ಬಲಾಗುವುದು ಎಂದು ಆಪ್​ ಪಕ್ಷದ ವಿರುದ್ಧ ಗುಡುಗಿದರು.

ನಾನು ಸೃಷ್ಟಿಸಿದ ಗುಜರಾತ್​: ಆರಂಭದಲ್ಲಿ ಗುಜರಾತಿ ಭಾಷೆಯಲ್ಲಿಯೇ ಭಾಷಣ ಆರಂಭಿಸಿದ ಪ್ರಧಾನಿ ಮೋದಿ ಅವರು, ಆ ಗುಜರಾತ್, ಮೈ ಬ್ನವೂ ಛೇ (ನಾನು ಸೃಷ್ಟಿಸಿದ ಗುಜರಾತ್​) ಎಂದು ಘೋಷಣೆ ಮೊಳಗಿಸಿದರು.

182 ಸ್ಥಾನಗಳ ಗುಜರಾತ್​ ವಿಧಾನಸಭೆಗೆ ಡಿಸೆಂಬರ್ 1 ಮತ್ತು 5 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಡಿಸೆಂಬರ್ 8 ರಂದು ಮತ ಎಣಿಕೆ ನಡೆಯಲಿದೆ. ಈ ಬಾರಿ ಆಮ್ ಆದ್ಮಿ ಪಕ್ಷ ಭರ್ಜರಿ ಪ್ರಚಾರ ನಡೆಸಿ ಕಣಕ್ಕಿಳಿದಿದ್ದು, ಇದರ ಜೊತೆಗೆ ಬಿಜೆಪಿ ಮತ್ತು ಕಾಂಗ್ರೆಸ್​ ಸೇರಿ ತ್ರಿಕೋನ ಸ್ಪರ್ಧೆ ನಡೆಯಲಿದೆ.

ಇದನ್ನೂ ಓದಿ: ಉಪ ಚುನಾವಣೆ ಗುದ್ದಾಟದಲ್ಲಿ 'ಕಮಲ' ಕಮಾಲ್; ಕೆಲವೆಡೆ ಅಚ್ಚರಿ ಫಲಿತಾಂಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.