ನವದೆಹಲಿ: ದೇಶದ ವಿವಿಧ ರಾಜ್ಯಗಳಲ್ಲಿ ಆಮ್ಲಜನಕದ ಕೊರತೆ ಉಂಟಾಗಿ ಅನೇಕ ರೋಗಿಗಳು ಪ್ರಾಣ ಕಳೆದುಕೊಂಡಿರುವ ಘಟನೆ ನಡೆದಿದ್ದು, ಇದರ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಉನ್ನತ ಮಟ್ಟದ ಸಭೆಯಲ್ಲಿ ಭಾಗಿಯಾಗಿದ್ದಾರೆ.
ವಿವಿಧ ರಾಜ್ಯಗಳಲ್ಲಿನ ಅಧಿಕಾರಿಗಳು ಈ ಸಭೆಯಲ್ಲಿ ಭಾಗಿಯಾಗಿದ್ದು, ಆಯಾ ರಾಜ್ಯದ ಆಮ್ಲಜನಕದ ಪೂರೈಕೆ ಪರಿಶೀಲನೆ ನಡೆಸುವ ಉದ್ದೇಶದಿಂದ ನಮೋ ಉನ್ನತ ಮಟ್ಟದ ಸಭೆ ನಡೆಸುತ್ತಿದ್ದಾರೆ. ಈ ವೇಳೆ, ಕಳೆದ ಕೆಲ ವಾರಗಳಿಂದ ಉಂಟಾಗಿರುವ ಆಮ್ಲಜನಕದ ಕೊರತೆ ಸುಧಾರಿಸಲು ಅಧಿಕಾರಿಗಳು ಕೈಗೊಂಡಿರುವ ಎಲ್ಲ ಯೋಜನೆ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ಆಸ್ಪತ್ರೆಯಲ್ಲಿನ ಹೊರಾವರಣದಲ್ಲೇ ರೋಗಿಗೆ ಚಿಕಿತ್ಸೆ: ಬೀದಿಪಾಲಾಗುತ್ತಿದ್ದಾರಾ ರೋಗಿಗಳು?
ಆಮ್ಲಜನಕದ ಉತ್ಪಾದನೆ ಹೆಚ್ಚಿಸುವುದು, ವಿತರಣೆ ವೇಗ, ಆರೋಗ್ಯ ಸೌಲಭ್ಯಗಳಿಗೋಸ್ಕರ ಆಕ್ಸಿಜನ್ ಬಿಟ್ಟು ಬೇರೆ ಮಾರ್ಗ ಬಳಕೆ ಮಾಡುವ ವಿಚಾರವಾಗಿ ಪ್ರಧಾನಿ ಮೋದಿ ಮಾತನಾಡಿದ್ದು, ಯಾವುದೇ ರೀತಿಯಲ್ಲೂ ರಾಜ್ಯಗಳಿಗೆ ಆಮ್ಲಜನಕದ ಕೊರತೆ ಆಗದಂತೆ ನೋಡಿಕೊಳ್ಳಿ ಎಂದು ನಮೋ ನಿರ್ದೇಶನ ನೀಡಿದ್ದಾರೆ.
ದೇಶದಲ್ಲಿನ 162 ಆಮ್ಲಜನಕ ಸ್ಥಾವರಗಳು ಹೆಚ್ಚಿನ ಆಕ್ಸಿಜನ್ ಉತ್ಪಾದಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವುದಾಗಿ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದು, ಕಳೆದ ಕೆಲ ವಾರಗಳಿಂದ ದೇಶದಲ್ಲಿ ಮಹಾಮಾರಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿರುವ ಕಾರಣ ಆಮ್ಲಜನಕದ ಕೊರತೆ ಉಂಟಾಗಿದೆ ಎಂದು ತಿಳಿಸಿದ್ದಾರೆ.
20 ರಾಜ್ಯಗಳಲ್ಲಿ ಆಮ್ಲಜನಕದ ಬೇಡಿಕೆ ಪ್ರತಿದಿನಕ್ಕೆ 6.785ಮೆಟ್ರಿಕ್ ಟನ್ ಆಗಿದ್ದು, ಆದರೆ ಇದೀಗ ಕೋವಿಡ್ ಸೋಂಕಿತ ಪ್ರಕರಣ ಹೆಚ್ಚಾಗಿರುವ ಕಾರಣ ಇದರ ಕೊರತೆ ಉಂಟಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.