ETV Bharat / bharat

ಕಾನ್ಪುರ ಅಪಘಾತಕ್ಕೆ ಪ್ರಧಾನಿ ಕಂಬನಿ: ಮೃತರ ಕುಟುಂಬಗಳಿಗೆ ಪರಿಹಾರ ಘೋಷಣೆ

author img

By

Published : Jun 9, 2021, 12:53 AM IST

Updated : Jun 9, 2021, 6:52 AM IST

ಕಾನ್ಪುರ ಅಪಘಾತದಲ್ಲಿ ಮೃತರಾದ 17 ಮಂದಿ ಕುಟುಂಬಸ್ಥರಿಗೆ ಪಿಎಂಎನ್ಆರ್​​ಎಫ್ (ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿ) ಇಂದ ತಲಾ 2 ಲಕ್ಷ ರೂ.ಗಳ ಪರಿಹಾರ ನೀಡಲಾಗುವುದು. ಗಾಯಗೊಂಡವರಿಗೆ 50 ಸಾವಿರ ರೂ. ನೀಡುವುದಾಗಿ ಪ್ರಧಾನಿ ಕಚೇರಿ ಟ್ವೀಟ್ ಮೂಲಕ ತಿಳಿಸಿದೆ.

pm-modi-announces-rs-2-lakh-ex-gratia-to-kin-for-kanpur-accident-deceased
ಕಾನ್ಪುರ ಅಪಘಾತಕ್ಕೆ ಪ್ರಧಾನಿ ಕಂಬನಿ

ನವದೆಹಲಿ: ಉತ್ತರ ಪ್ರದೇಶದ ಕಾನ್ಪುರದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ 17 ಮಂದಿ ಸಾವಿಗೀಡಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಿ ಕಂಬನಿ ಮಿಡಿದಿದ್ದಾರೆ. ಅಲ್ಲದೆ ರಾಷ್ಟ್ರೀಯ ಪರಿಹಾರ ನಿಧಿಯಿಂದ (ಪಿಎಂಎನ್‌ಆರ್‌ಎಫ್) ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

ಕಾನ್ಪುರ ಜಿಲ್ಲೆಯ ಸಚೆಂಡಿ ಪ್ರದೇಶದಲ್ಲಿ ಮಂಗಳವಾರ ಸಂಜೆ ದೆಹಲಿಯಿಂದ ಹೊರಟ ಬಸ್ ಹಾಗೂ ಜೆಸಿಬಿ ನಡುವಿನ ಅಪಘಾತದಲ್ಲಿ 17 ಜನರು ಸಾವನ್ನಪ್ಪಿ, 5 ಮಂದಿ ಗಾಯಗೊಂಡಿದ್ದಾರೆ. ಈ ಬಗ್ಗೆ 'ಕಾನ್ಪುರದಲ್ಲಿ ನಡೆದ ರಸ್ತೆ ಅಪಘಾತವು ದುರಂತವಾಗಿದೆ. ಅಪಘಾತದಲ್ಲಿ ಅನೇಕ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಅವರ ಕುಟುಂಬಗಳಿಗೆ ಸಂತಾಪ ವ್ಯಕ್ತಪಡಿಸುತ್ತೇನೆ ಮತ್ತು ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲೆಂದು ಪ್ರಾರ್ಥಿಸುವುದಾಗಿ' ಪ್ರಧಾನಿ ಕಚೇರಿ ಟ್ವೀಟ್​ ಮಾಡಿದೆ.

  • Prime Minister @narendramodi has announced an ex-gratia of Rs. 2 lakh each from the PMNRF for the next of kin of those who have lost their lives due to a tragic accident in Kanpur, Uttar Pradesh. Rs. 50,000 would be provided to those injured.

    — PMO India (@PMOIndia) June 8, 2021 " class="align-text-top noRightClick twitterSection" data=" ">

ಅಲ್ಲದೆ ದುರಂತದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಸ್ಥರಿಗೆ ಪಿಎಂಎನ್ಆರ್​​ಎಫ್ (ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿ) ಇಂದ ತಲಾ 2 ಲಕ್ಷ ರೂ.ಗಳ ಪರಿಹಾರ ನೀಡಲಾಗುವುದು. ಗಾಯಗೊಂಡವರಿಗೆ 50 ಸಾವಿರ ರೂ. ನೀಡುವುದಾಗಿ ಪ್ರಧಾನಿ ಕಚೇರಿ ಟ್ವೀಟ್ ಮೂಲಕ ತಿಳಿಸಿದೆ.

ಅಮಿತ್ ಶಾ ಸಂತಾಪ:

ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಅಪಘಾತದಲ್ಲಿ ಮೃತರಾದವರಿಗೆ ಸಂತಾಪ ಸೂಚಿಸಿದ್ದು, ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲೆಂದು ಹಾರೈಸಿದ್ದಾರೆ. ದೇವರು ಮೃತರ ಕುಟುಂಬಸ್ಥರಿಗೆ ದುಃಖವನ್ನು ತಡೆದುಕೊಳ್ಳುವ ಶಕ್ತಿ ನೀಡಲಿ ಎಂದು ಶಾ ಟ್ವೀಟ್ ಮಾಡಿದ್ದಾರೆ.

ಕಾನ್ಪುರ ಅಪಘಾತ

ಪರಿಹಾರ ಘೋಷಿಸಿದ ಯೋಗಿ:

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಕೂಡ ಈ ದುರಂತದ ಬಗ್ಗೆ ಟ್ವೀಟ್​ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ. ಅಪಘಾತದ ಬಗ್ಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ದುಃಖ ವ್ಯಕ್ತಪಡಿಸಿದ್ದು, ತಕ್ಷಣವೇ ಸ್ಥಳಕ್ಕೆ ತೆರಳಿ ನೆರವಾಗುವಂತೆ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಪರಿಹಾರವನ್ನೂ ಸಿಎಂ ಘೋಷಿಸಿದ್ದಾರೆ. ಅಲ್ಲದೆ ಗಾಯಾಳುಗಳಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆ ನೀಡುವಂತೆ ಸೂಚಿಸಿದ್ದಾರೆ.

ಇದನ್ನೂ ಓದಿ: ಬಸ್​-ಜೆಸಿಬಿ ನಡುವೆ ಭೀಕರ ಅಪಘಾತ: 17 ಮಂದಿ ಸಾವು, ಐವರ ಸ್ಥಿತಿ ಗಂಭೀರ

Last Updated : Jun 9, 2021, 6:52 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.