ETV Bharat / bharat

ಬುದ್ಧನ ಆದರ್ಶಗಳು ಹಿಂದೆಂದಿಗಿಂತಲೂ ಈಗ ಹೆಚ್ಚು ಪ್ರಸ್ತುತ: ನರೇಂದ್ರ ಮೋದಿ - ನರೇಂದ್ರ ಮೋದಿ

ಇಂದು ಆಷಾಢ ಪೂರ್ಣಿಮಾ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ರಾಮನಾಥ್​ ಕೋವಿಂದ್ ದೇಶದ ಜನರನ್ನುದ್ದೇಶಿಸಿ ಮಾತನಾಡಿದ್ದಾರೆ.

ನರೇಂದ್ರ ಮೋದಿ
ನರೇಂದ್ರ ಮೋದಿ
author img

By

Published : Jul 24, 2021, 11:25 AM IST

ನವದೆಹಲಿ: ಆಷಾಢ ಪೂರ್ಣಿಮಾ - ಧಮ್ಮಚಕ್ರ ದಿನದ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ದೇಶದ ಜನರನ್ನುದ್ದೇಶಿಸಿ ಮಾತನಾಡಿದ್ದಾರೆ. ಇಡೀ ಜಗತ್ತನ್ನು ಆತಂಕಕ್ಕೆ ದೂಡಿರುವ ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಭಗವಾನ್​ ಬುದ್ಧನ ಆದರ್ಶಗಳು ಹಿಂದೆಂದಿಗಿಂತಲೂ ಈಗ ಹೆಚ್ಚು ಪ್ರಸ್ತುತವಾಗಿವೆ. ಅವರು ಹಾಕಿ ಕೊಟ್ಟ ಹಾದಿಯಲ್ಲಿ ಇಂದು ದೇಶ ನಡೆಯಬೇಕಿದೆ ಎಂದು ಜನತೆಗೆ ಕರೆ ನೀಡಿದರು.

ಬುದ್ಧನು, ನಮಗೆ ಜೀವನದ ಮೂಲಾರ್ಥ ತಿಳಿಸಿದವನು. ನಮ್ಮ ದುಃಖಗಳಿಗೆ ನಾವೇ ಕಾರಣ ಎಂದು ಎಂಬ ಅಂಶವನ್ನು ಮನವರಿಕೆ ಮಾಡಿಕೊಟ್ಟವನು. ಉತ್ತಮ ಜೀವನಕ್ಕಾಗಿ ಎಂಟು ಅಂಶಗಳನ್ನು ಬೋಧಿಸಿದ ಮಹಾನ್ ವ್ಯಕ್ತಿ ಬುದ್ಧ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ. ಇಂದು ಭಾರತವು ಬುದ್ಧನ ಆದರ್ಶಗಳ ಮಾರ್ಗದಲ್ಲಿ ನಡೆದಿದ್ದು, ಇತರ ದೇಶಗಳಿಗೆ ನೆರವಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ.

ಇಂದು ಜಗತ್ತಿನಲ್ಲಿ 55 ಕೋಟಿಗೂ ಅಧಿಕ ಬೌದ್ಧ ಅನುಯಾಯಿಗಳಾಗಿದ್ದಾರೆ. ಇತರೆ ಧರ್ಮಗಳ ಜನರೂ ಬುದ್ಧನ ಬೋಧನೆಗೆ ಆಕರ್ಷಿತರಾಗಿದ್ದು, ಬೌದ್ಧ ಧರ್ಮದತ್ತ ಆಕರ್ಷಿತರಾಗುತ್ತಿದ್ದಾರೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ತಿಳಿಸಿದರು.

ಇದನ್ನೂ ಓದಿ :ಸುಪ್ರೀಂಕೋರ್ಟ್‌ ನ್ಯಾಯಾಧೀಶರ ನೇತೃತ್ವದಲ್ಲಿ ಪೆಗಾಸಸ್‌ ತನಿಖೆಯಾಗಲಿ: ಶಶಿ ತರೂರ್‌

ಕಳೆದ 2,600 ವರ್ಷಗಳಲ್ಲಿ ಬುದ್ಧನ ಅಹಿಂಸಾ ಮಾರ್ಗ ಅಸಂಖ್ಯಾತ ಜನರಿಗೆ ಸ್ಫೂರ್ತಿ ನೀಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.