ETV Bharat / bharat

ಕೋವಿಡ್ ದಾಳಿ ನಡುವೆಯೂ ಅಭಿವೃದ್ಧಿಯ ವೇಗ ಹೆಚ್ಚಿದೆ: ಅಮಿತ್ ಶಾ - ವಿಕಾಸ್ ದಿವಸ್

ಗುಜರಾತ್ ಮುಖ್ಯಮಂತ್ರಿಯಾಗಿ ವಿಜಯ್ ರೂಪಾಣಿ 5 ವರ್ಷ ಪೂರೈಸಿದ ಹಿನ್ನೆಲೆ ವಿಕಾಸ್ ದಿವಸ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಗೃಹ ಸಚಿವ ಅಮಿತ್ ಶಾ ಭಾಗಿಯಾಗಿ ಬಿಜೆಪಿ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ.

-amit-shah
ಅಮಿತ್ ಶಾ
author img

By

Published : Aug 8, 2021, 7:26 AM IST

ಅಹಮದಾಬಾದ್(ಗುಜರಾತ್​)​: ಇಡೀ ಜಗತ್ತಿಗೆ ಕೊರೊನಾ ಕಾಡುತ್ತಿರುವ ಸಂದರ್ಭದಲ್ಲಿಯೂ ಭಾರತದ ಅಭಿವೃದ್ಧಿಯ ವೇಗ ಕಡಿಮೆಯಾಗಲಿಲ್ಲ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದು, ಜೊತೆಗೆ ಭಾರತ ಕೋವಿಡ್​​ ವಿರುದ್ಧ ಸಮರದಲ್ಲಿ ಯಶಸ್ಸು ಗಳಿಸಿದೆ ಎಂದಿದ್ದಾರೆ.

ಜಗತ್ತಿನ ಅಭಿವೃದ್ಧಿಯ ಚಕ್ರ ಸ್ಥಗಿತವಾದರೂ ಭಾರತದಲ್ಲಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಅಭಿವೃದ್ಧಿಯ ವೇಗ ಮುಂದುವರಿಯಿತು. ನಾವು ಕೊರೊನಾ ವಿರುದ್ಧ ಕಠಿಣ ಹೋರಾಟ ನಡೆಸಿ ಅದರಲ್ಲಿಯೂ ಗೆದ್ದೆವು. ಜೊತೆ ಜೊತೆಗೆ ಅಭಿವೃದ್ಧಿಯನ್ನೂ ಮುಂದುವರೆಸಿದ್ದೆವು ಎಂದು ಗುಜರಾತ್​​ನಲ್ಲಿ ಬಿಜೆಪಿ ಸರ್ಕಾರ 5 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ‘ವಿಕಾಸ್ ದಿವಸ್’ ಕಾರ್ಯಕ್ರಮದಲ್ಲಿ ವಿವಿಧ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದರು.

ಜೊತೆಗೆ ಸುಮಾರು 5,300 ಕೋಟಿ ರೂಪಾಯಿ ಯೋಜನೆಗಳಿಗೆ ಚಾಲನೆ ನೀಡಿದ ಅವರು, ಅಮಿತ್ ಶಾ ಅವರ ಗಾಂಧಿ ನಗರ ಕ್ಷೇತ್ರದಲ್ಲಿ ಸುಮಾರು 900 ಕೋಟಿ ರೂಪಾಯಿ ಯೋಜನೆಗಳು ಮುಂಬರುವ ದಿನಗಳಲ್ಲಿ ನೆರವೇರಲಿದೆ ಎಂದಿದ್ದಾರೆ.

ಕಳೆದ 10 ದಿನಗಳಲ್ಲಿ 3,322 ಕೋಟಿ ರೂಪಾಯಿ ಯೋಜನೆಗಳಿಗೆ ಚಾಲನೆ ದೊರಕಿದ್ದು, ಕೊರೊನಾ ನಡುವೆಯೂ ಗುಜರಾತ್​​ನ ಅಭಿವೃದ್ಧಿ ತಡೆಯಲು ಸಾಧ್ಯವಿಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದೇವೆ ಎಂದರು.

2017ರಲ್ಲಿ ಅಧಿಕಾರ ವಹಿಸಿಕೊಂಡ ವಿಜಯ್ ರೂಪಾಣಿ ಸಹ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಕೊರೊನಾ ಸಮಯದಲ್ಲಿ ಮೋದಿ ನಾಯಕತ್ವದಲ್ಲಿ ರೂಪಾಣಿ ಮಾದರಿ ಕಾರ್ಯ ಮಾಡಿದ್ದಾರೆ. ನಾವು ಮೊದಲ ಮತ್ತು 2ನೇ ಅಲೆ ವಿರುದ್ಧ ಯಶಸ್ವಿಯಾಗಿ ಹೋರಾಡಿದ್ದೇವೆ. ಗುಜರಾತ್​​​​ ಈಗ ಹಲವು ಕ್ಷೇತ್ರಗಳಲ್ಲಿ ಮೊದಲ ಸ್ಥಾನ ಗಳಿಸಿದೆ ಅಥವಾ ಮೊದಲ ಸ್ಥಾನಕ್ಕೇರುವತ್ತ ಪ್ರಬಲ ಪೈಪೋಟಿ ನೀಡುತ್ತಿದೆ ಎಂದಿದ್ದಾರೆ.

ಓದಿ: ರಾಹುಲ್ ಗಾಂಧಿ ಟ್ವಿಟರ್ ಖಾತೆ ತಾತ್ಕಾಲಿಕ ಸ್ಥಗಿತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.