ಕೋಯಿಕ್ಕೋಡ್(ಕೇರಳ): ಕೋಯಿಕ್ಕೋಡ್ನ ಮಲಬಾರ್ ಕ್ರಿಶ್ಚಿಯನ್ ಕಾಲೇಜಿನ ವಿದ್ಯಾರ್ಥಿಗಳು ಕಾರು ಮತ್ತು ಬೈಕ್ನಲ್ಲಿ ಕಾಲೇಜು ಕ್ಯಾಂಪಸ್ನಲ್ಲೇ ಸ್ಟಂಟ್ ತೋರಿಸಿ ಅನಾಹುತ ಮಾಡಿಕೊಂಡಿದ್ದಾರೆ. ಈ ವೇಳೆ ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ ಹೊಡೆದಿದೆ. ಈ ಸಂದರ್ಭದಲ್ಲಿ ಇಬ್ಬರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ದ್ವಿತೀಯ ಪಿಯು ಶಾಲೆಯ ವಿದ್ಯಾರ್ಥಿಗಳು ಪರೀಕ್ಷೆ ಮುಗಿದ ಕಾರಣಕ್ಕೆ ಈ ರೀತಿ ಸಂಭ್ರಮಿಸಿದ್ದಾರೆ. ಕೆಲವರು ಬೈಕ್ನಲ್ಲಿ ವೇಗವಾಗಿ ಕಾಲೇಜಿಗೆ ಎಂಟ್ರಿ ಕೊಟ್ಟರೆ ಮತ್ತೆ ಇನ್ನೂ ಕೆಲವರು ಕಾರಿನಲ್ಲೇ ಕಾಲೇಜಿನ ಆವರಣಕ್ಕೆ ಬಂದರು. ಈ ವೇಳೆ ಕಾರ್ನ ಬಾನೆಟ್ ಮೇಲೆಯೂ ವಿದ್ಯಾರ್ಥಿಗಳು ಕುಳಿತಿದ್ದು ಕಂಡುಬಂತು. ಅಪಾಯಕಾರಿಯಾಗಿ ವಾಹನ ಚಲಾಯಿಸಿದ ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.