ರಾಯಪುರ(ಛತ್ತೀಸ್ಗಢ): ಪ್ರೀತಿ ನಿವೇದನೆಗೆ ಯುವಕ - ಯುವತಿ ಪ್ರೇಮ ಪತ್ರ ಬರೆಯುವುದುಂಟು. ಆದರೆ, ಇಲ್ಲಿ ಕಿಡಿಗೇಡಿಗಳು ಚೀಟಿಗೆ ತಮ್ಮ ಹೆಸರು ಮತ್ತು ಸಂಪರ್ಕ ಸಂಖ್ಯೆಯ ಜೊತೆಗೆ ಅಶ್ಲೀಲ ಬರಹ ಬರೆದು ಮನೆಯಂಗಳದಲ್ಲಿ ಬಿಸಾಡಿ ಸಿಕ್ಕಿಹಾಕಿಕೊಂಡ ಘಟನೆ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬನನ್ನು ಬಂಧಿಸಲಾಗಿದೆ.
ಇಲ್ಲಿನ ನವರಾಯಪುರ ಪ್ರದೇಶದಲ್ಲಿ ಕೆಲ ಮನೆಗಳ ಮುಂದೆ ಚೀಟಿಯೊಂದು ಕಂಡಿದೆ. ಅದನ್ನು ತೆಗೆದು ನೋಡಿದಾಗ, ಪ್ಲೇಬಾಯ್ ರಾಕಿ ಎಂದು ಬರೆಯಲಾಗಿದ್ದು, ಸಂಪರ್ಕ ಸಂಖ್ಯೆಯನ್ನೂ ನಮೂದಿಸಲಾಗಿದೆ. ಇದನ್ನು ಕಂಡ ಮನೆಯವರು ಅಚ್ಚರಿಯ ಜೊತೆಗೆ ಕುಪಿತರಾಗಿದ್ದಾರೆ. ಕಾಲೊನಿಯ ಹಲವು ಮನೆಗಳಿಗೆ ಈ ರೀತಿಯ ಚೀಟಿಯನ್ನು ಬಿಸಾಡಲಾಗಿದೆ. ಈ ಸುದ್ದಿ ನಿಧಾನವಾಗಿ ಕಾಲೊನಿಯಲ್ಲಿ ಹಬ್ಬಿಕೊಂಡು ಮನೆಯ ಮುಂದೆ ಚೀಟಿ ಸಿಕ್ಕವರು, ಕಿಡಿಗೇಡಿ ಯುವಕರನ್ನು ಪ್ರಶ್ನಿಸಿದ್ದಾರೆ. ಆದರೆ, ಇದ್ಯಾವುದೂ ಫಲಿಸದ ಕಾರಣ ಕೊನೆಗೆ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.
ದೂರಿನ ಮೇರೆಗೆ ಆರೋಪಿ ಬಂಧನ: ಪ್ರಕರಣದ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಅದೇ ಕಾಲೋನಿಯ ಯುವಕನನ್ನು ಬಂಧಿಸಿದ್ದಾರೆ. ಪ್ಲೇ ಬಾಯ್ ರಾಕಿ ಸೇರಿದಂತೆ ಅಶ್ಲೀಲ ಬರಹವುಳ್ಳ ಚೀಟಿಯನ್ನು ಕಾಲೊನಿಯ 10 ಕ್ಕೂ ಅಧಿಕ ಮನೆಗಳ ಮುಂದೆ ಬಿಸಾಡಲಾಗಿದೆ. ಚೀಟಿ ಸಿಕ್ಕವರು ದೂರು ದಾಖಲಿಸಿದ್ದಾರೆ. ಓರ್ವನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.
ಷಡ್ಯಂತ್ರದ ಅನುಮಾನ: ಪ್ರಕರಣದಲ್ಲಿ ಪೊಲೀಸರು ಸಂಚು ರೂಪಿಸಿದ ಕೋನದಲ್ಲಿ ತನಿಖೆ ನಡೆಸುತ್ತಿದ್ದಾರೆ. ಯಾರದ್ದೋ ಹೆಸರು ಬಳಸಿಕೊಂಡು ಕಿಡಿಗೇಡಿಗಳು ತಮ್ಮ ಸಂಪರ್ಕ ಸಂಖ್ಯೆಯನ್ನು ನಮೂದಿಸಿ ಚೀಟಿ ಎಸೆದಿರುವ ಸಾಧ್ಯತೆ ಇದೆ ಎಂದು ಅನುಮಾನಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಓದಿ: ಪಣಕ್ಕಾಗಿ ಪ್ರಾಣ ಬಿಟ್ಟ ಯುವಕ.. ಕೆರೆ ದಾಟುವ ಬಾಜಿಯಲ್ಲಿ ಈಜಿಲಾಗದೇ ಮುಳುಗಿ ಸಾವು