ETV Bharat / bharat

ಕೈಯಲ್ಲಿ ಪಿಸ್ತೂಲ್​ ಹಿಡಿದು, ಸರ್ಕಾರಿ ಕಚೇರಿಯಲ್ಲಿ ಸೆಲ್ಫಿಗೆ ಪೋಸ್​ ಕೊಟ್ಟ ಟಿಎಂಸಿ ನಾಯಕಿ! - ಪಿಸ್ತೂಲ್​ ಜೊತೆ ಪೋಸ್​ ನೀಡಿದ ಮೃಣಾಲಿನ್ ಮಂಡಲ್

ತೃಣಮೂಲ ಕಾಂಗ್ರೆಸ್​ನ ನಾಯಕಿಯೋರ್ವರು ಕೈಯಲ್ಲಿ ಪಿಸ್ತೂಲ್​​ ಹಿಡಿದುಕೊಂಡು ಸರ್ಕಾರಿ ಕಚೇರಿಯಲ್ಲಿ ಸೆಲ್ಫಿಗೆ ಪೋಸ್​​ ಕೊಟ್ಟಿರುವ ಘಟನೆ ನಡೆದಿದ್ದು, ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

Mrinalini Mondal Maity poses with gun
Mrinalini Mondal Maity poses with gun
author img

By

Published : Dec 7, 2021, 8:37 PM IST

ಮಾಲ್ಡಾ (ಪಶ್ಚಿಮಬಂಗಾಳ) : ಸರ್ಕಾರಿ ಕಚೇರಿಯೊಳಗೆ ಕೈಯಲ್ಲಿ ಪಿಸ್ತೂಲ್​​​​ ಹಿಡಿದುಕೊಳ್ಳುವ ಮೂಲಕ ತೃಣಮೂಲ ಕಾಂಗ್ರೆಸ್​​ ಪಕ್ಷದ ನಾಯಕಿ ಪೋಸ್​ ಕೊಟ್ಟಿರುವ ಫೋಟೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್​​​​ ಆಗಿದೆ. ಇದಕ್ಕೆ ಪ್ರತಿಪಕ್ಷ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಪಶ್ಚಿಮ ಬಂಗಾಳದ ಮಾಲ್ಡಾ ಪಂಚಾಯತ್​​ ಸಮಿತಿ ಅಧ್ಯಕ್ಷೆ ಮತ್ತು ಅಲ್ಲಿನ ಟಿಎಂಸಿ ಮಹಿಳಾ ಮಂಡಲದ ಹಿರಿಯ ಮುಖಂಡೆ ಮೃಣಾಲಿನ್ ಮಂಡಲ್​ ಈ ರೀತಿಯಾಗಿ ನಡೆದುಕೊಂಡಿದ್ದಾರೆ. ಅಲ್ಲಿನ ಬಿಡಿಒ ಕಚೇರಿಯಲ್ಲಿ ಕುಳಿತಿದ್ದಾಗ ಈ ರೀತಿಯಾಗಿ ನಡೆದುಕೊಂಡಿದ್ದಾರೆಂದು ತಿಳಿದು ಬಂದಿದೆ. ಇದರ ಫೋಟೋ ವೈರಲ್​​​ ಆಗುತ್ತಿದ್ದಂತೆ ತೃಣಮೂಲ ಕಾಂಗ್ರೆಸ್​ ಹಿಂಸಾಚಾರ ಸಂಸ್ಕೃತಿ ಪ್ರೋತ್ಸಾಹಿಸುತ್ತಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ. ಜೊತೆಗೆ ಪೊಲೀಸ್ ತನಿಖೆ ನಡೆದರೆ ಕೇವಲ ಪಿಸ್ತೂಲ್​​ ಮಾತ್ರವಲ್ಲ, ಬಾಂಬ್​, ಎಕೆ-47 ನಂತಹ ಆಯುದಗಳು ಟಿಎಂಸಿ ನಾಯಕಿ ಮನೆಯಲ್ಲಿ ಪತ್ತೆಯಾಗುತ್ತವೆ ಎಂದಿದೆ.

ಇದನ್ನೂ ಓದಿರಿ: ಮದುವೆ ಹಿಂದಿನ ವಾರ ಎಸ್ಕೇಪ್​.. Facebook Lover​​ ಭೇಟಿಗಾಗಿ ಹರಿದ್ವಾರದಿಂದ ತಮಿಳುನಾಡಿಗೆ ಬಂದ್ಳು!

ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ತೃಣಮೂಲ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೃಷ್ಣೇಂದು ನಾರಾಯಣ ಚೌಧರಿ, ಪೊಲೀಸರು ಈ ಪ್ರಕರಣದ ಬಗ್ಗೆ ತನಿಖೆ ನಡೆಸಬೇಕು. ಇದರಿಂದ ಪ್ರಮುಖ ನಾಯಕರ ವ್ಯಕ್ತಿತ್ವಕ್ಕೂ ಧಕ್ಕೆ ಉಂಟಾಗುತ್ತದೆ ಎಂದಿದ್ದಾರೆ. ಇದರ ಬೆನ್ನಲ್ಲೇ ಟಿಎಂಸಿ ಪ್ರಕರಣದ ತನಿಖೆಗೆ ಆದೇಶಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.