ETV Bharat / bharat

ಪಿಎಫ್​ಐ ಮೇಲಿನ ನಿಷೇಧ ಪರಿಶೀಲನಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್​ - ಪಿಎಫ್​ಐ ಅರ್ಜಿ ವಿಚಾರಣೆಗೆ ಸುಪ್ರೀಂ ನಿರಾಕರಣೆ

ಪಿಎಫ್​ಐ ಮತ್ತದರ ಅಂಗಸಂಸ್ಥೆಗಳ ಮೇಲೆ ಕೇಂದ್ರ ಸರ್ಕಾರ ಹೇರಿರುವ ನಿಷೇಧವನ್ನು ಪರಿಶೀಲಿಸಬೇಕು ಎಂದು ಕೋರಿ ಸಲ್ಲಿಸಲಾದ ಅರ್ಜಿಯನ್ನು ವಿಚಾರಣೆ ನಡೆಸಲು ಸುಪ್ರೀಂಕೋರ್ಟ್​ ನಿರಾಕರಿಸಿದೆ.

ಪಿಎಫ್​ಐ ಮೇಲಿನ ನಿಷೇಧ ಪರಿಶೀಲನಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್​

author img

By ETV Bharat Karnataka Team

Published : Nov 6, 2023, 3:28 PM IST

ನವದೆಹಲಿ: ಪಾಪ್ಯುಲರ್​ ಫ್ರಂಟ್​ ಆಫ್​ ಇಂಡಿಯಾ (ಪಿಐಎಲ್​) ಮತ್ತದರ ಅಂಗಸಂಸ್ಥೆಗಳ ವಿರುದ್ಧ ಕಾನೂನುಬಾಹಿರ ಚಟುವಟಿಕೆ ತಡೆಗಟ್ಟುವ ಕಾಯ್ದೆ (ಯುಎಪಿಎ) ನ್ಯಾಯಮಂಡಳಿಯು ಹೇರಿರುವ ನಿಷೇಧವನ್ನು ತೆರವು ಮಾಡಬೇಕು ಎಂದು ಕೋರಲಾದ ಅರ್ಜಿಯನ್ನು ಸುಪ್ರೀಂಕೋರ್ಟ್​ ಸೋಮವಾರ ವಜಾ ಮಾಡಿದೆ.

ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಮತ್ತು ಬೇಲಾ ಎಂ ತ್ರಿವೇದಿ ಅವರನ್ನೊಳಗೊಂಡ ಪೀಠವು ಪಿಎಫ್‌ಐ ಅರ್ಜಿಯನ್ನು ವಿಚಾರಣೆ ನಡೆಸಲು ನಿರಾಕರಿಸಿತು. ಬೇಕಾದಲ್ಲಿ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಲು ತಿಳಿಸಿತು. ನಿಷೇಧಿತ ಪಿಎಫ್​ಐ ಪರ ವಾದ ಮಂಡಿಸಿದ ಹಿರಿಯ ವಕೀಲ ಶ್ಯಾಮ್ ದಿವಾನ್ ಅವರಿಗೆ ಪೀಠವು, ನಿಷೇಧದ ವಿರುದ್ಧ ಸಂಘಟನೆಗಳು ಮೊದಲು ಹೈಕೋರ್ಟ್​ನಲ್ಲಿ ವಿಚಾರಣೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ನೇರವಾಗಿ ಸುಪ್ರೀಂಕೋರ್ಟ್​ನಲ್ಲಿ ವಿಚಾರಣೆ ಸಾಧ್ಯವಿಲ್ಲ ಎಂದಿತು. ಆಗ ವಕೀಲ ದಿವಾನ್​ ಅವರು, ತಮ್ಮ ಕಕ್ಷಿದಾರರು ಹೈಕೋರ್ಟ್‌ಗೆ ಹೋಗಬೇಕಿತ್ತು ಎಂಬ ನ್ಯಾಯಾಲಯದ ಅಭಿಪ್ರಾಯವನ್ನು ಒಪ್ಪಿಕೊಂಡಿದ್ದಾಗಿ ಹೇಳಿದರು. ಬಳಿಕ ಸುಪ್ರೀಂ ಕೋರ್ಟ್ ಅರ್ಜಿಯನ್ನು ವಜಾ ಮಾಡಿ, ಜೊತೆಗೆ ಹೈಕೋರ್ಟ್‌ಗೆ ತೆರಳಲು ಅವಕಾಶವನ್ನೂ ನೀಡಿತು.

ಸರ್ಕಾರದ ಅಧಿಸೂಚನೆಯಲ್ಲೇನಿದೆ?: ಪಿಎಫ್​ಐ ಸೇರಿದಂತೆ ಅದರ ಕೆಲ ಅಂಗಸಂಸ್ಥೆಗಳು ದೇಶದಲ್ಲಿ ಕಾನೂನುಬಾಹಿರ ಚಟುವಟಿಕೆ ನಡೆಸುತ್ತಿರುವ ಕಾರಣ, ಎಲ್ಲ ಸಂಸ್ಥೆಗಳನ್ನು ನಿಷೇಧಿಸಲಾಗುತ್ತಿದೆ ಎಂದು ಯುಎಪಿಎ ಟ್ರಿಬ್ಯೂನಲ್ 2022 ರ ಮಾರ್ಚ್ 21 ರಂದು ಆದೇಶ ನೀಡಿತ್ತು. ಇದನ್ನು ಕೇಂದ್ರ ಸರ್ಕಾರ ಸೆಪ್ಟೆಂಬರ್ 27 ರಂದು ದೃಢೀಕರಿಸಿತ್ತು. UAPA ಅಡಿ ತಕ್ಷಣವೇ ಜಾರಿಗೆ ಬರುವಂತೆ PFI ಮತ್ತು ಅದರ ಸಹವರ್ತಿಗಳು, ಅಂಗಸಂಸ್ಥೆಗಳು ಅಥವಾ ಶಾಖೆಗಳನ್ನು ಕಾನೂನುಬಾಹಿರ ಸಂಸ್ಥೆಗಳು ಎಂದು ಘೋಷಿಸಲಾಗುತ್ತಿದೆ. 5 ವರ್ಷಗಳವರೆಗೂ ಇವುಗಳ ಮೇಲೆ ನಿಷೇಧ ಹೇರಲಾಗುತ್ತಿದೆ ಎಂದು ಅಧಿಸೂಚನೆ ಹೊರಡಿಸಿತ್ತು.

ಯಾವೆಲ್ಲಾ ಸಂಸ್ಥೆಗಳಿಗೆ ನಿಷೇಧ?: ಪಾಫ್ಯುಲರ್​ ಫ್ರಂಟ್​ ಆಫ್​ ಇಂಡಿಯಾ (ಪಿಎಫ್​ಐ), ರಿಹಬ್ ಇಂಡಿಯಾ ಫೌಂಡೇಶನ್ (ಆರ್​ಐಎಫ್​), ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್​ಐ), ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ (ಎಐಐಸಿ), ನ್ಯಾಷನಲ್ ಕಾನ್ಫೆಡರೇಶನ್ ಆಫ್ ಹ್ಯೂಮನ್ ರೈಟ್ಸ್ ಆರ್ಗನೈಸೇಶನ್ (ಎನ್​ಸಿಎಚ್​ಆರ್​ಒ) ನ್ಯಾಷನಲ್ ವುಮೆನ್ಸ್ ಫ್ರಂಟ್, ಜೂನಿಯರ್ ಫ್ರಂಟ್, ಎಂಪವರ್ ಇಂಡಿಯಾ ಫೌಂಡೇಶನ್ ಮತ್ತು ರಿಹ್ಯಾಬ್ ಫೌಂಡೇಶನ್ (ಕೇರಳ) ಇವುಗಳು ಕಾನೂನುಬಾಹಿರ ಸಂಘಟನೆಗಳು ಎಂದು ಕೇಂದ್ರವು ಘೋಷಿಸಿದೆ. ಇವೆಲ್ಲವನ್ನೂ ಮುಂದಿನ 5 ವರ್ಷಗಳವರೆಗೆ ದೇಶದಲ್ಲಿ ನಿಷೇಧ ಹೇರಲಾಗುತ್ತಿದೆ ಎಂದು ಯುಎಪಿಎ ನ್ಯಾಯಮಂಡಳಿ ಆದೇಶಿಸಿತ್ತು.

ಇದನ್ನೂ ಓದಿ: ಪೊಲೀಸ್ ಠಾಣೆಯ ಸ್ಟೋರ್ ರೂಂನಲ್ಲಿಟ್ಟಿದ್ದ 60 ಮದ್ಯದ ಬಾಟಲಿ ಇಲಿಗಳ ಪಾಲು: ಪೊಲೀಸರ ಹೇಳಿಕೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.