ETV Bharat / bharat

ರಾಮಮಂದಿರ ಕೆಡವಲು, ಬಾಬರಿ ಮಸೀದಿ ಮರುನಿರ್ಮಾಣಕ್ಕೆ ಪಿಎಫ್‌ಐ ಪ್ಲಾನ್​​: ತನಿಖೆಯಲ್ಲಿ ಬಹಿರಂಗ - ಕೋಮುಗಲಭೆಗೆ ಸಂಚು ರೂಪಿಸಿದ ಶಂಕೆ

ರಾಮಮಂದಿರ ಕೆಡವಲು ಮತ್ತು ಬಾಬರಿ ಮಸೀದಿ ಮರುನಿರ್ಮಾಣ ಹಾಗೂ 2047ರ ವೇಳೆಗೆ ಮುಸ್ಲಿಂ ರಾಷ್ಟ್ರ ನಿರ್ಮಿಸಲು ಯೋಜಿಸಲಾಗಿತ್ತು ಎಂದು ನಾಸಿಕ್​​ ನ್ಯಾಯಾಲಯಕ್ಕೆ ಮಹಾರಾಷ್ಟ್ರದ ಎಟಿಎಸ್ ಅಧಿಕಾರಿಗಳು ತಿಳಿಸಿದ್ದಾರೆ.

pfi-plan-to-demolish-ram-temple-and-rebuild-the-babri-masjid-ats-investigation-revealed
ರಾಮಮಂದಿರ ಕೆಡವಲು, ಬಾಬರಿ ಮಸೀದಿ ಮರುನಿರ್ಮಾಣಕ್ಕೆ ಪಿಎಫ್‌ಐ ಪ್ಲ್ಯಾನ್​: ತನಿಖೆಯಲ್ಲಿ ಬಹಿರಂಗ
author img

By

Published : Oct 18, 2022, 3:43 PM IST

ಮುಂಬೈ (ಮಹಾರಾಷ್ಟ್ರ): ದೇಶದಲ್ಲಿ ವಿಧ್ವಂಸಕ ಚಟುವಟಿಕೆಗಳು ಮತ್ತು ಗಲಭೆ ಸೃಷ್ಟಿಗೆ ಸಂಚು ಆರೋಪದ ಮೇಲೆ ಬಂಧಿತರಾಗಿರುವ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಶಂಕಿತರ ವಿಚಾರಣೆ ವೇಳೆ ಮಹತ್ವದ ಅಂಶ ಬಯಲಿಗೆ ಬಂದಿದೆ. ರಾಮಮಂದಿರ ಕೆಡವಲು ಮತ್ತು ಬಾಬರಿ ಮಸೀದಿಯನ್ನು ಮರುನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿತ್ತು ಎಂಬ ಮಾಹಿತಿ ಬಹಿರಂಗವಾಗಿದೆ.

ಮಹಾರಾಷ್ಟ್ರದಲ್ಲಿ ಬಂಧಿತರಾದ ಪಿಎಫ್‌ಐ ಮುಖಂಡರ ವಿಚಾರಣೆ ವೇಳೆಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ ಎಂದು ನಾಸಿಕ್ ನ್ಯಾಯಾಲಯಕ್ಕೆ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್)ದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬಂಧಿತರಿಂದ ವಶಪಡಿಸಿಕೊಂಡಿರುವ ಹಾರ್ಡ್​ ಡಿಸ್ಕ್‌ಗಳಲ್ಲಿನ ದತ್ತಾಂಶ ಪ್ರಕಾರ ರಾಮಮಂದಿರ ಕೆಡವಲು ಮತ್ತು ಬಾಬರಿ ಮಸೀದಿ ಮರುನಿರ್ಮಾಣ ಹಾಗೂ 2047ರ ವೇಳೆಗೆ ಮುಸ್ಲಿಂ ರಾಷ್ಟ್ರ ನಿರ್ಮಿಸಲು ಯೋಜಿಸಲಾಗಿತ್ತು ಎಂದು ನ್ಯಾಯಾಲಯಕ್ಕೆ ಅಧಿಕಾರಿಗಳು ತಿಳಿಸಿದ್ದಾರೆ.

ಬಂಧಿತರು ಯಾರೆಲ್ಲ?: ಭಯೋತ್ಪಾದಕರಿಗೆ ಹಣ ನೀಡುವುದರೊಂದಿಗೆ ಕೋಮುಗಲಭೆಗೆ ಸಂಚು ರೂಪಿಸಿದ ಶಂಕೆ ಮೇರೆಗೆ ಮಾಲೆಗಾಂವ್‌ ಪಿಎಫ್‌ಐನ ಇಬ್ಬರು ಮುಖಂಡರು ಮತ್ತು ಇತರ ಮೂವರನ್ನು ಎಟಿಎಸ್ ಅಧಿಕಾರಿಗಳು ಬಂಧಿಸಿದ್ದಾರೆ.

ಮಾಲೆಗಾಂವ್ ಜಿಲ್ಲಾಧ್ಯಕ್ಷ ಮೌಲಾನಾ ಸಯೀದ್ ಅಹ್ಮದ್ ಅನ್ಸಾರಿ, ಪುಣೆಯ ಉಪಾಧ್ಯಕ್ಷ ಅಬ್ದುಲ್ ಖಯೂಮ್ ಶೇಖ್, ಹಿರಿಯ ನಾಯಕಿ ರಜಿಯಾ ಅಹ್ಮದ್ ಖಾನ್, ಬೀಡ್‌ನ ಸದಸ್ಯ ವಾಸಿಂ ಶೇಖ್ ಮತ್ತು ಕೊಲ್ಹಾಪುರದ ವಿಭಾಗೀಯ ಕಾರ್ಯದರ್ಶಿ ಮೌಲಾ ನಬಿಸಾಬ್ ಮುಲ್ಲಾ ಎಂಬುವರೇ ಬಂಧಿತರಾಗಿದ್ದಾರೆ.

ಇದನ್ನೂ ಓದಿ: ಪಿಎಫ್​ಐ ಪ್ರಕರಣ, ಭಯೋತ್ಪಾದಕರ ಸಂಪರ್ಕಜಾಲ ಮಟ್ಟಹಾಕಲು ಎನ್ಐಎ ದಾಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.