ನವದೆಹಲಿ: ದೇಶಾದ್ಯಂತ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಪರ್ವ ಸತತ ಏಳನೇ ದಿನವಾದ ಇಂದು ಸಹ ಮುಂದುವರಿದ್ದು, ಒಂದು ವಾರದ ಅವಧಿಯೊಳಗಾಗಿ ಪೆಟ್ರೋಲ್ ಬೆಲೆ 2.06 ರೂ ನಷ್ಟು ಹೆಚ್ಚಳವಾಗಿದ್ದು, ಡೀಸೆಲ್ ಬೆಲೆ 2.56 ರೂ ಹೆಚ್ಚಳವಾಗಿದೆ.
ತೈಲ ಮಾರುಕಟ್ಟೆ ಕಂಪನಿಗಳು ಬಂಕ್ಗಳಲ್ಲಿ ಡೀಸೆಲ್ ಬೆಲೆಯನ್ನು ಪ್ರತಿ ಲೀಟರ್‌ಗೆ 29 ಪೈಸೆ ಮತ್ತು ಪೆಟ್ರೋಲ್ ಬೆಲೆಯನ್ನು ದೆಹಲಿಯಲ್ಲಿ ಪ್ರತಿ ಲೀಟರ್‌ಗೆ 26 ಪೈಸೆಗೆ ಹೆಚ್ಚಿಸಿವೆ. ಇದೀಗ ರಾಷ್ಟ್ರ ರಾಜಧಾನಿಯಲ್ಲಿ ಡೀಸೆಲ್ ಬೆಲೆ 79.35 ರೂ ಪೆಟ್ರೋಲ್ ಬೆಲೆ 2.06 ರೂ. ಆಗಿದೆ.
ದೃಢವಾದ ಜಾಗತಿಕ ಬೆಲೆಗಳಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್‌ನ ಚಿಲ್ಲರೆ ಬೆಲೆಗಳು ಏರಿಕೆಯಾಗುತ್ತಿವೆ. ಕಳೆದ ಏಳು ದಿನಗಳಲ್ಲಿ ಪೆಟ್ರೋಲ್‌ಗೆ ಪ್ರತಿ ಲೀಟರ್‌ಗೆ 2.06 ರೂ.ಗಳಷ್ಟು ಏರಿಕೆಯಾಗಿದ್ದರೆ, ಡೀಸೆಲ್ ದರ ಲೀಟರ್‌ಗೆ 2.56 ರೂ.ಹೆಚ್ಚಳವಾಗಿದೆ. ಮುಂಬೈನಲ್ಲಿ, ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 95.46 ರೂ.ಇದ್ದು ಇನ್ನೇನು 100 ರೂ.ಗೆ ಮುಟ್ಟುತ್ತದೆ. ಡೀಸೆಲ್ ಬೆಲೆ ಲೀಟರ್‌ಗೆ 90 ರೂ.ಇದೆ. ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ಇಂಧನದ ಬೆಲೆ ಕುಸಿತ ಕಂಡಿದ್ದರೂ ಮಾರುಕಟ್ಟೆಯಲ್ಲಿ ಪೆಟ್ರೋಲ್,ಡೀಸೆಲ್ ದರ ಬ್ರೇಕ್ ಇಲ್ಲದಂತೆ ಚಲಿಸುತ್ತದೆ. ಸೌದಿ ಅರೇಬಿಯಾ ಘೋಷಿಸಿದ ಏಕಪಕ್ಷೀಯ ಉತ್ಪಾದನಾ ಕಡಿತ ಮತ್ತು ಜಾಗತಿಕವಾಗಿ ಎಲ್ಲ ಪ್ರಮುಖ ಆರ್ಥಿಕತೆಗಳಲ್ಲಿ ಬಳಕೆಯನ್ನು ಹೆಚ್ಚಿಸಿದ ಹಿನ್ನೆಲೆಯಲ್ಲಿ ಕಳೆದ ಕೆಲವು ವಾರಗಳಿಂದ ಕಚ್ಚಾ ತೈಲ ಬೆಲೆ ದೃಢವಾಗಿ ಉಳಿದಿದೆ. ಮಾರ್ಚ್ ತಿಂಗಳ ನಂತರ ಸೌದಿ ಅರೇಬಿಯಾ ಏಕಪಕ್ಷೀಯ ಉತ್ಪಾದನಾ ಕಡಿತ ಹಿಂತೆಗೆದುಕೊಳ್ಳಬಹುದು. ಶೀಘ್ರದಲ್ಲೇ ಬೆಲೆಗಳನ್ನು ಇಳಿಸಬಹುದು ಎಂದು ತಜ್ಞರು ಹೇಳಿದ್ದಾರೆ.
2021ರಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು 19 ಬಾರಿ ಹೆಚ್ಚಳ ಕಂಡಿವೆ. ಪೆಟ್ರೋಲ್ ಮತ್ತು ಡೀಸೆಲ್‌ನಲ್ಲಿನ ಬೆಲೆಯಲ್ಲಿನ ಈ ಹೆಚ್ಚಳವು ಎಲ್ಲ ಪ್ರಮುಖ ಮೆಟ್ರೋ ನಗರಗಳು ಮತ್ತು ಇತರ ಪಟ್ಟಣಗಳಲ್ಲಿ ದಾಖಲೆಯ ಮಟ್ಟದಲ್ಲಿ ಏರಿಕೆಯಾಗಿವೆ. ಬಜೆಟ್ನಲ್ಲಿ ಹೇಳಲಾದ ಕೃಷಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಹೊಸ ಸೆಸ್ ಸಹ ವಿಧಿಸಿದೆ.